Vastu Tips for House : ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಸಂತೋಷ, ಸಂಪತ್ತು ಮತ್ತು ಸಮೃದ್ಧಿ ಹೊಂದಿರಬೇಕು ಎಂದು ಬಯಸುತ್ತಾರೆ.ಆದರೆ ಎಲ್ಲ ಮನೆಯಲ್ಲಿಯೂ ಸಂತೋಷ, ಸಮೃದ್ದಿ ಸಾಧ್ಯವಾಗುವುದಿಲ್ಲ. ಎಷ್ಟೋ ಮನೆಯಲ್ಲಿ ಸಿರಿ ಸಂಪತ್ತು ಇದ್ದರೂ ನೆಮ್ಮದಿ ಮರೀಚಿಕೆಯಾಗಿರುತ್ತದೆ. ಇನ್ನು ಕೆಲವು ಕಡೆ ಏನೇ ಮಾಡಿದರೂ ಎಷ್ಟೇ ದುಡಿದರೂ ಹಣ ಉಳಿಯುವುದೇ ಇಲ್ಲ. ಹೀಗಾದಾಗ ಏನು ಮಾಡಬೇಕು ಯಾಕೆ ಹೀಗೆ ಆಗುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ಇದಕ್ಕೆ ವಾಸ್ತು ದೋಷವೂ ಕಾರಣವಾಗಿರಬಹುದು. ಮನೆಯಲ್ಲಿ ವಾಸ್ತು ದೋಷವಿದ್ದರೆ ನಕಾರಾತ್ಮಕ ಶಕ್ತಿ ನೆಲೆಯಾಗಿ, ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ. ಮನೆ ಮಂದಿಯನ್ನು ಕಾಯಿಲೆ ಕಸಾಲೆಗಳು ಕಾಡಲು ಆರಂಭಿಸುತ್ತವೆ. ವಾಸ್ತು ದೋಷಗಳನ್ನು ಸಮಯಕ್ಕೆ ದಾರಿಯಾಗಿ ತೆಗೆದುಹಾಕಬೇಕು.
ವಾಸ್ತುವನ್ನು ಹೀಗೆ ಪರಿಶೀಲಿಸಿ :
ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ವಾಸ್ತುವಿನಲ್ಲಿ ಪ್ರತಿಯೊಂದು ದಿಕ್ಕು ತನ್ನದೇ ಆದ ಶಕ್ತಿಯನ್ನು ಹೊಂದಿದೆ. ದಿಕ್ಕಿಗೆ ಅನುಗುಣವಾಗಿ ಆ ದಿಕ್ಕಿನ ಶಕ್ತಿಗೆ ಅನುಗುಣವಾಗಿ ವಸ್ತುಗಳನ್ನು ಇರಿಸಿದರೆ ಮನೆಯಲ್ಲಿ ಸಕಾರಾತ್ಮಕತೆ ನೆಲೆಯಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಯಾವ ದಿಕ್ಕಿನಲ್ಲಿ ಯಾವ ವಸ್ತುಗಳನ್ನು ಇಡಬೇಕು ನೋಡೋಣ.
ಇದನ್ನೂ ಓದಿ : ಮನಿ ಪ್ಲಾಂಟ್ ಅಲ್ಲ, ಈ ಗಿಡ ಮನೆಯಲ್ಲಿ ಬೆಳಸಿ..! ಅದೃಷ್ಟ ಬೆನ್ನತ್ತುವುದಂತು ಗ್ಯಾರಂಟಿ..
ಉತ್ತರ ಮತ್ತು ಪೂರ್ವ ದಿಕ್ಕು: ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಉತ್ತರ ಮತ್ತು ಪೂರ್ವ ದಿಕ್ಕು ತೆರೆದಿರಬೇಕು.ಈ ದಿಕ್ಕಿಗೆ ಗಾಳಿ, ಬೆಳಕು ಸರಿಯಾಗಿ ಬೀಳಬೇಕು. ಈ ದಿಕ್ಕಿನಲ್ಲಿ ಕೊಳಕು, ಕತ್ತಲೆ, ದುರ್ವಾಸನೆ ಮತ್ತು ಭಾರವಾದ ವಸ್ತುಗಳು ಇವೆಲ್ಲಾ ಇರಲೇ ಬಾರದು. ಒಂದು ವೇಳೆ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಗಾಳಿ ಬೆಳಕು ಸರಿಯಾಗಿ ಬಾರದೇ ಹೋದಲ್ಲಿ ಮನೆಯಲ್ಲಿ ಎಂದಿಗೂ ಸಂತೋಷ ನೆಲೆಯಾಗುವುದಿಲ್ಲ.
ವಾಯುವ್ಯ ದಿಕ್ಕು: ಡ್ರಾಯಿಂಗ್ ರೂಮ್ ಮಾಡಲು ಮನೆಯ ವಾಯುವ್ಯ ದಿಕ್ಕನ್ನು ಅತ್ಯಂತ ಸೂಕ್ತವೆಂದು ಪರಿಗಣಿಸಲಾಗುತ್ತದೆ. ಇದು ಸಾಧ್ಯವಾಗದಿದ್ದರೆ ಇಲ್ಲಿ ಪಾರ್ಕಿಂಗ್ ಮಾಡುವುದು ಉತ್ತಮ.
ಅಡುಗೆ ಮನೆ : ಮನೆಯಲ್ಲಿ ಅಡುಗೆ ಮನೆ ಸರಿಯಾದ ದಿಕ್ಕಿನಲ್ಲಿರುವುದು ಬಹಳ ಮುಖ್ಯ. ಏಕೆಂದರೆ ಈ ಇಲ್ಲಿ ತಯಾರಿಸಿದ ಆಹಾರದಿಂದಲೇ ವ್ಯಕ್ತಿಗೆ ಶಕ್ತಿ ಸಿಗುತ್ತದೆ.ಅಡುಗೆಮನೆಯ ವಿನ್ಯಾಸವು ವ್ಯಕ್ತಿಯ ಆರ್ಥಿಕ ಸ್ಥಿತಿ, ಆರೋಗ್ಯ ಇತ್ಯಾದಿಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ವಾಸ್ತು ಪ್ರಕಾರ ಅಡುಗೆ ಮನೆ ಆಗ್ನೇಯ ಮೂಲೆಯಲ್ಲಿರಬೇಕು.
ಇದನ್ನೂ ಓದಿ : ಸಂಕಷ್ಟಹರ ಚತುರ್ಥಿಯ ದಿನ ಈ ತಪ್ಪುಗಳನ್ನು ಮಾಡಲೇಬಾರದು!
ಮನೆಯ ಮಧ್ಯಭಾಗ : ಮನೆಯ ಮಧ್ಯಭಾಗ ಅಥವಾ ಕೇಂದ್ರ ಸ್ಥಳವು ಯಾವಾಗಲೂ ತೆರೆದಿರಬೇಕು. ಇದನ್ನು ಬ್ರಹ್ಮ ಸ್ಥಾನ ಎನ್ನುತ್ತಾರೆ. ಡೈನಿಂಗ್ ಟೇಬಲ್, ಸೋಫಾ, ಬೆಡ್ ಇತ್ಯಾದಿ ಭಾರವಾದ ಪೀಠೋಪಕರಣಗಳನ್ನು ಈ ಸ್ಥಳದಲ್ಲಿ ಇಡಬೇಡಿ.
ಮಲಗುವ ಕೋಣೆ : ಮನೆಯ ನೈಋತ್ಯದಲ್ಲಿ ಮಲಗುವ ಕೋಣೆ ಇರಬೇಕು. ತಮವೆಂದು ಪರಿಗಣಿಸಲಾಗಿದೆ. ವೃತ್ತಿಯಲ್ಲಿ, ಅಭಿವೃದ್ದಿಯಾಗಬೇಕಾದರೆ ದಕ್ಷಿಣ ದಿಕ್ಕಿನ ಮಧ್ಯದಲ್ಲಿ ಮಲಗುವ ಕೋಣೆ ಇರಬೇಕು.
ಸ್ಟಡಿ ರೂಂ : ಪಶ್ಚಿಮ ದಿಕ್ಕು ಸ್ಟಡಿ ರೂಂಗೆ ಬೆಸ್ಟ್. ಸ್ಟಡಿ ರೂಂ ಮತ್ತು ಮಕ್ಕಳ ಮಲಗುವ ಕೋಣೆಯನ್ನು ವಾಯುವ್ಯ ದಿಕ್ಕಿನಲ್ಲಿ ನಿರ್ಮಿಸಬೇಕು.ಸ್ಟಡಿ ಟೇಬಲ್ ಪೂರ್ವದ ಕಡೆಗೆ ಇರಬೇಕು ಎಂಬುದನ್ನು ನೆನಪಿನಲ್ಲಿಡಿ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.