ಹಾಲು ಕುಡಿಯುವುದರಿಂದ ಹೆಚ್ಚಾಗುತ್ತದೆಯೇ Bad Cholesterol ಮಟ್ಟ ?

ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗಲು ಪ್ರಾರಂಭಿಸಿದರೆ, ಮುಂದಿನ ದಿನಗಳಲ್ಲಿ ಪಾರ್ಶ್ವವಾಯು ಮತ್ತು ಹೃದಯ ಕಾಯಿಲೆಗಳ ಗಂಭೀರ ಅಪಾಯವಿರುತ್ತದೆ. ಈ ಅಪಾಯವನ್ನು ತಪ್ಪಿಸಲು ಆಹಾರ ಪದ್ಧತಿಯಲ್ಲಿ ತಕ್ಷಣ ಬದಲಾವಣೆ ಮಾಡಿಕೊಳ್ಳುವುದು ಉತ್ತಮ.  

Written by - Ranjitha R K | Last Updated : Mar 30, 2022, 03:56 PM IST
  • ಕೆಟ್ಟ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಅಪಾಯಕಾರಿ
  • ಕೊಲೆಸ್ಟ್ರಾಲ್ ಹೆಚ್ಚಾದಾಗ ಹಾಲು ಕುಡಿಯಬಹುದೇ?
  • ಸಂಶೋಧನೆಯಲ್ಲಿ ಬೆಳಕಿಗೆ ಬಂದಿರುವ ಅಂಶ ಯಾವುದು ?
ಹಾಲು ಕುಡಿಯುವುದರಿಂದ ಹೆಚ್ಚಾಗುತ್ತದೆಯೇ Bad Cholesterol ಮಟ್ಟ ? title=
ಕೆಟ್ಟ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಅಪಾಯಕಾರಿ (file photo)

ಬೆಂಗಳೂರು : ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್  (Bad Cholesterol)  ಮಟ್ಟ ಹೆಚ್ಚಾಗಲು ಪ್ರಾರಂಭಿಸಿದರೆ, ಮುಂಬರುವ ದಿನಗಳಲ್ಲಿ ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಕಾಯಿಲೆಗಳ (Heart Disease) ಗಂಭೀರ ಅಪಾಯ ಎದುರಾಗುತ್ತದೆ. ಈ ಅಪಾಯವನ್ನು ಅರಿತು ಆಹಾರ ಪದ್ಧತಿಯಲ್ಲಿ ತಕ್ಷಣ ಬದಲಾವಣೆ ಮಾಡಿಕೊಳ್ಳುವುದು ಉತ್ತಮ. ಹಾಲು (Milk) ಕುಡಿಯುವುದರಿಂದ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆಯೇ ? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. 

ಕೊಲೆಸ್ಟ್ರಾಲ್ ಬಗ್ಗೆ ಇರುವ ಊಹಾಪೋಹಗಳು :
ಕೊಲೆಸ್ಟ್ರಾಲ್ (Cholesterol) ಬಗ್ಗೆ ಅನೇಕ ಉಹಾಪೋಹಗಳಿವೆ. ಇವುಗಳಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಕೊಲೆಸ್ಟ್ರಾಲ್ ಹೆಚ್ಚಾದಾಗ ಅನೇಕ ಜನರು ಡೈರಿ ಉತ್ಪನ್ನಗಳಿಂದ (Dairy Products) ದೂರವಿರುತ್ತಾರೆ.  ಸಂಪೂರ್ಣ ಮಾಹಿತಿಯನ್ನು ತಿಳಿಯದೆಯೇ ತಕ್ಷಣ ಈ ನಿರ್ಧಾರ ತೆಗೆದುಕೊಂಡು ಬಿಡುತ್ತಾರೆ. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.  

ಇದನ್ನೂ ಓದಿ : ನೀವು Cold Water ಕುಡಿಯುತ್ತೀರಾ? ಹಾಗಿದ್ರೆ, ಆರೋಗ್ಯ ಹದಗೆಡುವ ಮುನ್ನ ನೆನಪಿರಲಿ ಈ ಮಾಹಿತಿ

ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಏರಲು ಬಿಡಬೇಡಿ :
ಕೊಲೆಸ್ಟ್ರಾಲ್ (Cholesterol) ಕೇವಲ ಕೊಬ್ಬು ಅಲ್ಲ. ಇದು ಕೊಬ್ಬು ಮತ್ತು ಪ್ರೋಟೀನ್‌ನಿಂದ ಮಾಡಲ್ಪಟ್ಟ ಒಂದು ರೀತಿಯ ಲಿಪಿಡ್ ಆಗಿದೆ. ಇದು ಜಿಗುಟಾದ ವಸ್ತುವಾಗಿದ್ದು ಅದು ರಕ್ತದಲ್ಲಿ ಆರೋಗ್ಯಕರ ಕೋಶಗಳನ್ನು ಮಾಡಲು ಸಹಾಯ ಮಾಡುತ್ತದೆ. ಎಚ್‌ಡಿಎಲ್ ಅಂದರೆ ಹೈ ಡೆನ್ಸಿಟಿ ಲಿಪೊಪ್ರೋಟೀನ್ ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.  ಮತ್ತೊಂದೆಡೆ, ಎಲ್‌ಡಿಎಲ್ ರಕ್ತನಾಳಗಳಲ್ಲಿ ಹೆಚ್ಚು ಸಂಗ್ರಹವಾದರೆ ಹೃದಯಾಘಾತದಂತಹ ಗಂಭೀರ ಕಾಯಿಲೆಗಳು ಸಂಭವಿಸಬಹುದು. ಸಾಮಾನ್ಯವಾಗಿ, ನಾವು ತೆಗೆದುಕೊಳ್ಳುವ ಆಹಾರವು ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊಂದಿರುತ್ತದೆ.

ಹಾಲು ಕುಡಿಯುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚುತ್ತದೆಯೇ? :
ಇಂಟರ್ನ್ಯಾಷನಲ್ ಜರ್ನಲ್ ಆಫ್ ಒಬೆಸಿಟಿಯಲ್ಲಿ (International Journal of Obesity) ಪ್ರಕಟವಾದ ಹೊಸ ಸಂಶೋಧನೆಯ ಪ್ರಕಾರ, ಹಾಲು ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟದ ಮೇಲೆ  ಯಾವುದೇ ಗಮನಾರ್ಹ ಪರಿಣಾಮ ಬೀರುವುದಿಲ್ಲ (Cholesterol Level). ಇದನ್ನು ವಿವರವಾಗಿ ಅಧ್ಯಯನ ಮಾಡಿದ ನಂತರ, ಡೈರಿ ಉತ್ಪನ್ನಗಳನ್ನು ಸೇವಿಸುವುದರಿಂದ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾಗುತ್ತದೆ ಎಂದು ಕಂಡುಬಂದಿದೆ. 

ಇದನ್ನೂ ಓದಿ : ಸದಾ ಮೊಬೈಲ್ ನಲ್ಲೇ ಮುಳುಗಿರುವ ಮಕ್ಕಳ ಅಭ್ಯಾಸವನ್ನು ಈ ರೀತಿ ಬದಲಾಯಿಸಿ

'ಸೀಮಿತ ಪ್ರಮಾಣದಲ್ಲಿ ಹಾಲು ಕುಡಿಯುವುದರಿಂದ ಯಾವುದೇ ಅಪಾಯವಿಲ್ಲ' :
ನಿತ್ಯವೂ ಹಾಲು ಕುಡಿಯುವವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ (Heart Disease) ಅಪಾಯವು ಶೇಕಡಾ 14 ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಹಾಲು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ, ಅದು ಹೊಟ್ಟೆಯ ಕೊಬ್ಬು ಅಥವಾ ತೂಕವನ್ನು ಹೆಚ್ಚಿಸುವುದಿಲ್ಲ. ಹಾಗಾಗಿ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಎಂಬ ಭಯದಿಂದ ಡೈರಿ ಉತ್ಪನ್ನಗಳ ಸೇವನೆಯನ್ನು ಕಡಿಮೆ ಮಾಡುವ ಅಗತ್ಯವಿಲ್ಲ ಎಂಬುದು ಈ ಅಧ್ಯಯನದಿಂದ ಸ್ಪಷ್ಟವಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News