Kitchen Hacks to Remove Utensil Bad Smell: ರುಚಿಕರವಾದ ಆಹಾರವನ್ನು ಯಾರು ತಾನೇ ಇಷ್ಟಪಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮಟನ್ ಬಿರಿಯಾನಿ ಮತ್ತು ಮೊಟ್ಟೆ ತಿನ್ನುವ ಟ್ರೆಂಡ್ ಹೆಚ್ಚಾಗಿದೆ. ಈ ಖಾದ್ಯಗಳ ಪರಿಮಳ ಮಂತ್ರಮುಗ್ಧಗೊಳಿಸುವುದರಲ್ಲಿ ಸಂಶಯವಿಲ್ಲ. ಆದರೆ ಪಾತ್ರೆ ತೊಳೆದ ನಂತರ ಬರುವ ಅದರ ವಾಸನೆ ಸರಿಯಾಗಿ ಹೋಗದಿರುವುದು ಮಾತ್ರ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಆಗಾಗ್ಗೆ ಈ ಪಾತ್ರೆಗಳಲ್ಲಿ ಮೊಟ್ಟೆ, ಮಾಂಸದ ವಾಸನೆ ಉಳಿಯುತ್ತದೆ. ಕೆಟ್ಟ ವಾಸನೆಯನ್ನು ತೊಡೆದುಹಾಕಲು ಜನರು ವಿವಿಧ ರೀತಿಯ ಪರಿಮಳಯುಕ್ತ ವಾಶಿಂಗ್ ಬಾರ್, ಲಿಕ್ವಿಡ್ ಗಳನ್ನು ಬಳಸುತ್ತಾರೆ. ಆದರೆ ಏನೇ ಮಾಡಿದರೂ ವಾಸನೆಯೇ ಹೋಗುವುದಿಲ್ಲ ಎಂದು ಪರದಾಡುವವರೇ ಹೆಚ್ಚು.
ಇಂದು ನಾವು ನಿಮಗೆ ಅಂತಹ ಕೆಲವು ಸಲಹೆಗಳನ್ನು ಹೇಳುತ್ತಿದ್ದೇವೆ, ಇದರಿಂದಾಗಿ ಪಾತ್ರೆಗಳಿಂದ ಬರುವ ಆಹಾರದ ವಾಸನೆಯನ್ನು ಸುಲಭವಾಗಿ ನಿವಾರಿಸಬಹುದು.
ಮಾಂಸಾಹಾರ ತಯಾರಿಸಿದ ಪಾತ್ರೆಗಳನ್ನು ಇತರ ಪಾತ್ರೆಗಳಿಂದ ಪ್ರತ್ಯೇಕವಾಗಿ ಇಡಿ:
ಮಾಂಸಾಹಾರ, ಮೊಟ್ಟೆಗಳ ಭಕ್ಷ್ಯಗಳನ್ನು ತಯಾರಿಸಲು ಬಳಸುವ ಪಾತ್ರೆಗಳನ್ನು ಇತರ ಪಾತ್ರೆಗಳಿಂದ ಪ್ರತ್ಯೇಕವಾಗಿ ಇಡುವುದು ಮೊದಲ ಸಲಹೆ. ಏಕೆಂದರೆ ಶುಚಿಗೊಳಿಸಿದ ನಂತರವೂ ವಾಸನೆ ಅವುಗಳಲ್ಲಿ ಉಳಿಯುತ್ತದೆ. ಇಂತಹ ಸಂದರ್ಭದಲ್ಲಿ ಇತರ ಪಾತ್ರೆಗಳನ್ನು ಮಾಂಸಾಹಾರ ತಯಾರಿಸಿದ ಪಾತ್ರೆಗಳ ಜೊತೆಗೆ ಇಡುವುದರಿಂದ ಆ ವಾಸನೆ ಅವುಗಳಿಗೂ ಹರಡುತ್ತದೆ.
ಇದನ್ನೂ ಓದಿ- Tulsi Water Remedies: ತುಳಸಿ ನೀರಿನ ಈ ಪರಿಹಾರಗಳಿಂದ ನಿಮ್ಮ ಮಲಗಿರುವ ಅದೃಷ್ಟವೂ ಎಚ್ಚರಗೊಳ್ಳುತ್ತೆ!
ಬಿಸಿ ನೀರನ್ನು ಬಳಸಿ:
ನೀವು ಮಾಂಸವನ್ನು ಬೇಯಿಸಿದ ಪಾತ್ರೆಗಳನ್ನು ಬಿಸಿ ನೀರಿನಲ್ಲಿ ಹಾಕಿ. ಇದು ವಾಸನೆಯನ್ನು ತ್ವರಿತವಾಗಿ ತೊಡೆದುಹಾಕಲು ಸಹಾಯ ಮಾಡುತ್ತದೆ. ಬಿಸಿನೀರು ಪಾತ್ರೆಗಳ ಮೇಲೆ ಸಂಗ್ರಹವಾದ ಕೊಳಕು ಮತ್ತು ಜಿಡ್ಡಿನ ವಾಸನೆಯನ್ನು ತ್ವರಿತವಾಗಿ ತೆಗೆದುಹಾಕುತ್ತದೆ.
ಉತ್ತಮ ಸರ್ಫ್ ಬಳಸಿ:
ಮಾಂಸ-ಮೊಟ್ಟೆಗಳಲ್ಲಿ ಬಳಸುವ ಪಾತ್ರೆಗಳಿಂದ ವಾಸನೆಯನ್ನು ತೆಗೆದುಹಾಕಲು ಉತ್ತಮ ಗುಣಮಟ್ಟದ ಸರ್ಫ್ ಬಳಸಿ. ಸಾಮಾನ್ಯ ದ್ರವದಿಂದ ವಾಸನೆಯನ್ನು ತೆಗೆದುಹಾಕಲು ಇದು ಸಾಕಷ್ಟು ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುತ್ತದೆ.
ಇದನ್ನೂ ಓದಿ- Shani Totke: ಜೀವನದ ಪ್ರತಿಯೊಂದು ಸಮಸ್ಯೆಯನ್ನು ನಿವಾರಿಸುತ್ತದೆ ಶನಿಯ ಈ ತಂತ್ರಗಳು
ಭಕ್ಷ್ಯಗಳನ್ನು ತಯಾರಿಸಿದ ತಕ್ಷಣ ಪಾತ್ರೆಗಳನ್ನು ತೊಳೆಯಿರಿ:
ನೀವು ದೀರ್ಘಕಾಲದವರೆಗೆ ಪಾತ್ರೆಗಳ ವಾಸನೆಯಿಂದ ತೊಂದರೆಗೊಳಗಾಗಲು ಬಯಸದಿದ್ದರೆ, ಅಡುಗೆ ಮಾಡಿದ ತಕ್ಷಣ ಈ ಪಾತ್ರೆಗಳನ್ನು ತೊಳೆಯಿರಿ. ಇಲ್ಲದಿದ್ದರೆ ಅದು ಮೊದಲು ನಿಮ್ಮ ಅಡುಗೆಮನೆಯಲ್ಲಿ ಮತ್ತು ನಂತರ ಇಡೀ ಮನೆಯಲ್ಲಿ ಹರಡುತ್ತದೆ. ಈ ಕ್ರಮಗಳಿಂದ ಪಾತ್ರೆಗಳಿಂದ ಮಾಂಸದ ವಾಸನೆ ಹೋಗುವುದಲ್ಲದೆ, ಪಾತ್ರೆಗಳ ಹೊಳಪು ಸಹ ಹಾಗೆಯೇ ಉಳಿಯುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.