ಈರುಳ್ಳಿಯನ್ನು ಪ್ರತಿಯೊಂದು ಅಡುಗೆಯಲ್ಲೂ ಬಳಸಲಾಗುತ್ತದೆ. ಏಕೆಂದರೆ ಇದನ್ನು ಸೇರಿಸುವುದರಿಂದ ತರಕಾರಿಯ ರುಚಿ ಹೆಚ್ಚಾಗುತ್ತದೆ ಎಂದು. ಈರುಳ್ಳಿಯನ್ನು ಸಲಾಡ್ ಆಗಿಯೂ ಸೇವಿಸಲಾಗುತ್ತದೆ. ಆದರೆ ಈರುಳ್ಳಿಯನ್ನು ಕತ್ತರಿಸುವುದು ಮತ್ತು ತೊಳೆಯುವುದು ದೊಡ್ಡ ಕೆಲಸ. ಏಕೆಂದರೆ ಅದನ್ನು ಕತ್ತರಿಸುವಾಗ ಕಣ್ಣುಗಳಿಂದ ನೀರು ಬರುತ್ತದೆ. ಇದರ ಹೊರತಾಗಿ ಇನ್ನೊಂದು ಸಮಸ್ಯೆ ಏನೆಂದರೆ, ಕೆಲವೊಮ್ಮೆ ಎಷ್ಟೇ ತೊಳೆದರೂ ಈರುಳ್ಳಿಯ ವಾಸನೆ ಹೋಗುವುದಿಲ್ಲ. ಹೀಗಾಗಿ ಅವುಗಳಿಗಾಗಿ ಕೆಲವೊಂದು ಪರಿಹಾರಗಳನ್ನು ನಾವು ನಿಮಗೆ ಹೇಳಲಿದ್ದೇವೆ. ಇದು ಈರುಳ್ಳಿಯಿಂದ ಅದರ ವಾಸನೆಯನ್ನು ಸುಲಭವಾಗಿ ತೆಗೆದುಹಾಕುತ್ತದೆ.
ಇದನ್ನೂ ಓದಿ: ಬಿಳಿ ಬಟ್ಟೆಯಲ್ಲಾಗುವ ಹಠಮಾರಿ ಕಲೆಗಳನ್ನು ನಿಮಿಷಗಳಲ್ಲಿ ತೆಗೆದು ಹಾಕುವ ಟ್ರಿಕ್ ಇಲ್ಲಿದೆ
ಈರುಳ್ಳಿಯಿಂದ ವಾಸನೆಯನ್ನು ತೆಗೆದುಹಾಕಲು ವಿನೆಗರ್ ನೀರನ್ನು ಬಳಸಬಹುದು. ಇದಕ್ಕಾಗಿ, ಒಂದು ಬಟ್ಟಲಿನಲ್ಲಿ ಸ್ವಲ್ಪ ಉಗುರು ಬೆಚ್ಚಗಿನ ನೀರನ್ನು ಹಾಕಿ ಮತ್ತು ಅದಕ್ಕೆ ಎರಡು ಚಮಚ ವಿನೆಗರ್ ಸೇರಿಸಿ. ಎರಡನ್ನೂ ಸರಿಯಾಗಿ ಮಿಶ್ರಣ ಮಾಡಿ ನಂತರ ಈರುಳ್ಳಿಯನ್ನು ಕತ್ತರಿಸಿ ಸ್ವಲ್ಪ ಸಮಯದವರೆಗೆ ಇರಿಸಿ. ನಂತರ 10 ನಿಮಿಷಗಳ ನಂತರ ಈರುಳ್ಳಿ ತೆಗೆದು ನೀರಿನಿಂದ ತೊಳೆದು ಬಳಸಿ.
ಈರುಳ್ಳಿಯನ್ನು ನೀರಿನಿಂದ ತೊಳೆದರೂ ವಾಸನೆ ಬರುತ್ತಿದ್ದರೆ, ಅದರ ವಾಸನೆಯನ್ನು ತೆಗೆದುಹಾಕಲು ನೀವು ನಿಂಬೆ ರಸವನ್ನು ಬಳಸಬಹುದು. ನಿಂಬೆಯು ಸಿಟ್ರಿಕ್ ಆಮ್ಲ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ವಾಸನೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ, ಒಂದು ಬೌಲ್‌ನಲ್ಲಿ ಸ್ವಲ್ಪ ಉಗುರುಬೆಚ್ಚನೆಯ ನೀರನ್ನು ಹಾಕಿ ನಂತರ ಅದಕ್ಕೆ ಎರಡು ಚಮಚ ನಿಂಬೆ ರಸವನ್ನು ಸೇರಿಸಿ. ಈ ಮಿಶ್ರಣದಲ್ಲಿ ಈರುಳ್ಳಿಯನ್ನು ಸ್ವಲ್ಪ ಹೊತ್ತು ನೆನೆಸಿಡಿ. ಅದರ ನಂತರ ಮಿಶ್ರಣದಿಂದ ಈರುಳ್ಳಿ ತೆಗೆದುಕೊಂಡು ಅದನ್ನು ತೊಳೆದು ಬಳಸಿ.
ಈರುಳ್ಳಿಯಿಂದ ಅದರ ವಾಸನೆಯನ್ನು ತೆಗೆದುಹಾಕಲು ನೀವು ಉಗುರು ಬೆಚ್ಚಗಿನ ನೀರನ್ನು ಸಹ ಬಳಸಬಹುದು. ಹೀಗೆ ಸ್ವಚ್ಛಗೊಳಿಸುವ ಮೂಲಕ, ಈರುಳ್ಳಿಯಿಂದ ಬ್ಯಾಕ್ಟೀರಿಯಾ ಮತ್ತು ಟಾಕ್ಸಿನ್ಗಳು ಸಹ ಹೊರಹಾಕಲ್ಪಡುತ್ತವೆ. ನೀವು ಮಾಡಬೇಕಾಗಿರುವುದು ಈರುಳ್ಳಿಯನ್ನು ಕತ್ತರಿಸಿ ಸ್ವಲ್ಪ ಸಮಯದವರೆಗೆ ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಸ್ವಲ್ಪ ಸಮಯದ ನಂತರ ಅದನ್ನು ಹೊರ ತೆಗೆದು ಬಳಕೆ ಮಾಡಿ.
ಇದನ್ನೂ ಓದಿ: ಈ ಸಸ್ಯಗಳನ್ನು ಮನೆಯ ಮುಂಭಾಗದಲ್ಲಿ ನೆಟ್ಟರೆ ಮನೆಯಲ್ಲಿ ತುಂಬಿ ತುಳುಕುವುದಂತೆ ಅಷ್ಟೈಶ್ವರ್ಯ
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.