ಬೆಂಗಳೂರು : ಸೋಮವಾರ ಶಿವನಿಗಿಷ್ಟದ ದಿನವಂತೆ. ಸೋಮವಾರ ಸೋಮ ಅಂದರೆ ಚಂದ್ರನಿಗೂ (Chandra Dev) ಇಷ್ಟ ಎಂದು ಆಸ್ತಿಕರು ನಂಬುತ್ತಾರೆ. ಧರ್ಮ ಪರಂಪರೆಯ ಮಾನ್ಯತೆಗಳ ಪ್ರಕಾರ ಸೋಮವಾರ ಏಕ ನಿಷ್ಠೆಯಿಂದ ಶಿವಾರ್ಚನೆ ಮಾಡಿದರೆ ಜೀವನದ ಎಲ್ಲಾ ಕಷ್ಟ ನಿವಾರಣೆ ಆಗುತ್ತದೆ. ಮನೋಕಾಮನೆಗಳು ಈಡೇರುತ್ತವೆ ಎಂದು ಹೇಳ್ತಾರೆ. ಹಾಗಾದರೆ ಶಿವನನ್ನು ಪ್ರಸನ್ನಗೊಳಿಸುವುದು ಹೇಗೆ..?
ನೆನಪಿಟ್ಟುಕೊಳ್ಳಿ, ಸೋಮವಾರ ಏನು ಮಾಡಬೇಕು, ಏನು ಮಾಡಬಾರದು..?
ಸೋಮವಾರದ (Monday) ದಿನ ಪರಮೇಶ್ವರನನ್ನು ಪ್ರಸನ್ನಗೊಳಿಸಬೇಕು. ಅದರಲ್ಲೂ ದೇವಾನುದೇವರಲ್ಲಿ ಅತಿ ಬೇಗ ಭಕ್ತರಿಗೊಲಿಯುವ ದೇವ ಮಹಾದೇವ(Mahadev). ಪರಶಿವ ಯಾವತ್ತೂ ತನ್ನ ಭಕ್ತರಾಧೀನ. ಹಾಗಾಗಿ ಮಹಾದೇವನನ್ನು ನೀವು ಬೇಗ ಒಲಿಸಿಕೊಳ್ಳಬೇಕಾದರೆ ಸೋಮವಾರ ಕೆಲವೊಂದು ಕಾರ್ಯಗಳನ್ನು ಮಾಡಬಾರದು. ಕೆಲವೊಂದನ್ನು ಮಾಡಬೇಕು..ಅವು ಯಾವುದು ನೋಡೋಣ..
ಇದನ್ನೂ ಓದಿ : ವಿಸ್ಮಯ..! ಪಾರ್ವತಿ, ಪರಮೇಶ್ವರರ ಕಲ್ಯಾಣ ನಡೆದ ಈ ಪವಿತ್ರ ನೆಲದಲ್ಲಿ ಈಗಲೂ ಉರಿಯುತ್ತಿದೆ ಹವನಕುಂಡ.!
ಸೋಮವಾರ ಇವನ್ನೆಲ್ಲಾ ಮಾಡಬೇಕು :
1. ಸೋಮವಾರ ಬೆಳಗ್ಗೆ ಎದ್ದು ಸ್ನಾನಮಾಡಿ ಶಿವ ಚಾಲೀಸ (Shiv Chalisa) ಪಠಿಸಬೇಕು. ಹೀಗೆ ಮಾಡಿದರೆ ಪರಮೇಶ್ವರ (Lord Shiva) ಪ್ರಸನ್ನ ಆಗ್ತಾರೆ.
2. ಸೋಮವಾರ ಉಪವಾಸ (Monday Fast) ಮಾಡಿದರೆ ಮನೋಕಾಮನೆಗಳು ಈಡೇರುತ್ತವೆಯಂತೆ. ನಿಮಗೇನಾದರೂ ಆ ರೀತಿಯ ಕಾಮನೆಗಳಿದ್ದರೆ ಏಕನಿಷ್ಠೆ ಹಾಗೂ ದೃಢ ಮನಸ್ಸಿನಿಂದ ಉಪವಾಸ ಮಾಡಿ. ಬಯಸಿದ್ದು ಸಿಗಲಿದೆ.
3. ಸೋಮವಾರ ಹಣೆಗೆ ಭಸ್ಮ ಮತ್ತು ತಿಲಕ ಹಾಕಿಕೊಳ್ಳಬೇಕು. ಇದರಿಂದ ಶಿವನ ಕೃಪೆ ಸದಾ ಕಾಲ ನಿಮ್ಮ ಮೇಲಿರಲಿದೆ.
4. ಸೋಮವಾರ ಸಂಜೆ ಪರಮೇಶ್ವರನ ಮೂರ್ತಿ ಅಥವಾ ಚಿತ್ರದ ಮುಂದೆ ದೀಪ ಇಡಿ. ಸರ್ವ ಕಷ್ಟಗಳೂ ನಿವಾರಣೆಯಾಗುತ್ತದೆ.
5. ಸೋಮವಾರ ಹೂಡಿಕೆ (Investment) ಮಾಡುವುದು ಶುಭ ಎಂದು ನಂಬಲಾಗುತ್ತದೆ. ಸೋಮವಾರ ದಿನ ಚಿನ್ನ, ಬೆಳ್ಳಿ ಖರೀದಿ ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಲಕ್ಕಿ ಎನ್ನಲಾಗುತ್ತದೆ.
6.. ಮನೆ ಕಟ್ಟುವ ಕೆಲಸ ಇದ್ದರೆ ಸೋಮವಾರದಿಂದ ಶುರು ಮಾಡಿ. ಶುಭವಾಗುತ್ತದೆಯಂತೆ
ಇದನ್ನೂ ಓದಿ : Vastu Tips : ಶಾಂತಂ ಪಾಪಂ..! ತಪ್ಪಿಯೂ ದೇವರ ಮನೆಯಲ್ಲಿ ಹೀಗೆಲ್ಲಾ ಮಾಡಬೇಡಿ.!
ಸೋಮವಾರ ಏನು ಮಾಡಬಾರದು, ನೆನಪಿಟ್ಟುಕೊಳ್ಳಿ:
1. ತಪ್ಪಿಯೂ ಸೋಮವಾರ ದಿನ ಉತ್ತರ, ಪೂರ್ವ, ಆಗ್ನೇಯ ದಿಕ್ಕಿಗೆ ಪಯಣ ಬೆಳೆಸಬೇಡಿ.
2. ಸೋಮವಾರ ಮಧ್ಯಾಹ್ನ ಮಲಗುವುದು ಅಶುಭ ಎನ್ನಲಾಗುತ್ತದೆ.
3. ಈ ದಿನ ಶ್ವೇತ ವಸ್ತ್ರ, ಹಾಲು ದಾನ ಮಾಡಬಾರದು.
4. ಸೋಮವಾರ ಮಾಂಸ ಮತ್ತು ಮದಿರೆ ಸೇವನೆ ನಿಷಿದ್ಧ
5. ಸೋಮವಾರ ಯಾವುದೇ ರೀತಿಯ ಅಪಶಬ್ಧ ಬಳಸಬಾರದು, ಅದು ಅಪಶಕುನ, ಅಶುಭ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.