Monthly Horoscope 2022: ಈ 4 ರಾಶಿಯವರ ಅದೃಷ್ಟವು ಏಪ್ರಿಲ್‌ನಲ್ಲಿ ಬೆಳಗಲಿದೆ!

ಏಪ್ರಿಲ್ ತಿಂಗಳಿನಲ್ಲಿ ಕೆಲವರಿಗೆ ಅನೇಕ ಶುಭ ಸುದ್ದಿಗಳು ಸಿಕ್ಕರೆ, ಕೆಲವರಿಗೆ ಸಮಸ್ಯೆಗಳನ್ನು ತಂದೊಡ್ಡುತ್ತದೆ. 2022ರ ಏಪ್ರಿಲ್ ಯಾವ ರಾಶಿಯವರಿಗೆ ಶುಭ ಮತ್ತು ಯಾವ ರಾಶಿಯವರಿಗೆ ಅಶುಭ ಎಂಬುದರ ಬಗ್ಗೆ ತಿಳಿದುಕೊಳ್ಳಿರಿ

Written by - Puttaraj K Alur | Last Updated : Mar 27, 2022, 08:27 AM IST
  • ಮೇಷ ರಾಶಿಯ ಜನರು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು
  • ವೃಷಭ ರಾಶಿಯವರು ಕುಟುಂಬದ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಲಿದ್ದಾರೆ
  • ಕರ್ಕ ರಾಶಿಯವರು ಬುದ್ಧಿವಂತಿಕೆ ಬಲದ ಮೇಲೆ ಕೆಲಸದಲ್ಲಿ ಯಶಸ್ಸು ಸಾಧಿಸುತ್ತಾರೆ
Monthly Horoscope 2022: ಈ 4 ರಾಶಿಯವರ ಅದೃಷ್ಟವು ಏಪ್ರಿಲ್‌ನಲ್ಲಿ ಬೆಳಗಲಿದೆ! title=
ಏಪ್ರಿಲ್ ತಿಂಗಳ ನಿಮ್ಮ ರಾಶಿಭವಿಷ್ಯ

ನವದೆಹಲಿ: 2022ರ ಏಪ್ರಿಲ್ ತಿಂಗಳು 4 ರಾಶಿಚಕ್ರದ ಜನರಿಗೆ ಅನೇಕ ಸಿಹಿಸುದ್ದಿಗಳು ಸಿಗಲಿವೆ. ಹಣ ಮತ್ತು ಪ್ರಗತಿಯ ಜೊತೆಗೆ ಈ ರಾಶಿಯವರು ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯಲು ಅವಕಾಶ ಪಡೆಯುತ್ತಾರೆ. ಏಪ್ರಿಲ್ ತಿಂಗಳ ನಿಮ್ಮ ರಾಶಿಭವಿಷ್ಯ(April Horoscope) ಹೇಗೆ ಇರಲಿದೆ ಎಂದು ತಿಳಿದುಕೊಳ್ಳಿರಿ.

ಮೇಷ ರಾಶಿ: ಈ ತಿಂಗಳು ಕುಟುಂಬದೊಂದಿಗೆ ಪ್ರವಾಸವಿರುತ್ತದೆ. ಧರ್ಮದಲ್ಲಿ ಆಸಕ್ತಿ ಹೆಚ್ಚಾಗುತ್ತದೆ, ಇದು ಆತ್ಮಾವಲೋಕನಕ್ಕೆ ಅವಕಾಶವನ್ನು ನೀಡುತ್ತದೆ. ಮನೆಯ ಸಂತೋಷದ ಪರಿಸ್ಥಿತಿಗಳು ಉತ್ತಮವಾಗಿರುತ್ತವೆ. ನೀವು ಹೆಚ್ಚು ಮಾನಸಿಕ ಒತ್ತಡ ಅನುಭವಿಸುವಿರಿ. ಕುಟುಂಬದ ಬಗ್ಗೆ ಕಾಳಜಿ ಇರಬಹುದು. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ನೀವು ಗಮನ ಹರಿಸಬೇಕು. ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಈ ತಿಂಗಳು ಸಾಮಾನ್ಯವಾಗಿರುತ್ತದೆ.

ವೃಷಭ ರಾಶಿ: ಈ ತಿಂಗಳು(​Monthly Horoscope 2022) ನೀವು ಕುಟುಂಬದ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸುವಿರಿ. ಸರ್ಕಾರಿ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತವೆ. ವ್ಯಾಪಾರದಲ್ಲಿ ಅಪೇಕ್ಷಿತ ಲಾಭ ದೊರೆಯಲಿದೆ. ನಿಮ್ಮ ಶ್ರಮ ಮತ್ತು ಅದೃಷ್ಟದ ಸಹಕಾರವು ಎಲ್ಲ ರೀತಿಯಲ್ಲೂ ಉತ್ತಮವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ, ಸಂಗಾತಿ ಮತ್ತು ಮಕ್ಕಳಿಂದ ಆತ್ಮ ತೃಪ್ತಿ ಸಿಗುತ್ತದೆ. ವಿವಾಹಿತರಿಗೆ ಮಕ್ಕಳಾಗುವ ಸಾಧ್ಯತೆ ಇದೆ.

ಮಿಥುನ ರಾಶಿ: ಈ ತಿಂಗಳು ನೀವು ಉತ್ತಮ ಚಾತುರ್ಯದಿಂದ ನಿಮ್ಮ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಸ್ವಭಾವದಲ್ಲಿ ಅತಿಯಾದ ಕೋಪವಿರುತ್ತದೆ. ಸಂಗಾತಿಯ ಆರೋಗ್ಯ ಹದಗೆಡುತ್ತದೆ. ಕೆಲಸದಲ್ಲಿ ಲಾಭ ಇರುತ್ತದೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನೀವು ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು. ನಿಮ್ಮ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳ ವಿಶ್ವಾಸ ಮತ್ತು ವಿಶೇಷ ಬೆಂಬಲ ಪಡೆಯುತ್ತೀರಿ.

ಕರ್ಕ ರಾಶಿ: ಈ ತಿಂಗಳು ನಿಮಗೆ ಅದೃಷ್ಟದ ಬೆಂಬಲ ಸಿಗುತ್ತದೆ. ನಿಮ್ಮ ಬುದ್ಧಿವಂತಿಕೆಯ ಬಲದ ಮೇಲೆ ನೀವು ಕೆಲಸದಲ್ಲಿ ಯಶಸ್ಸನ್ನು ಸಾಧಿಸುವಿರಿ. ಈ ತಿಂಗಳು ಹಣದ ಲಾಭವು ಉತ್ತಮವಾಗಿರುತ್ತದೆ. ನಿಮ್ಮ ಒಡಹುಟ್ಟಿದವರೊಂದಿಗೆ ನೀವು ಕೆಲವು ಸಮಸ್ಯೆಗಳನ್ನು ಅನುಭವಿಸುವಿರಿ. ಈ ತಿಂಗಳು ನೀವು ಕೆಲಸದ ಬಗ್ಗೆ ಹೆಚ್ಚು ಗಮನಹರಿಸಬೇಕು. ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯ ಕಳೆಯಬಹುದು. ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳು ಆಯೋಜಿಸಲ್ಪಡುತ್ತವೆ, ಇದರಿಂದಾಗಿ ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ.  

ಇದನ್ನೂ ಓದಿ: ಭಾನುವಾರ ಮಾಡುವ ಈ ಕೆಲಸಗಳಿಂದ ದಾರಿದ್ರ್ಯ ಕಾಡುತ್ತದೆಯಂತೆ ..!

ಸಿಂಹ ರಾಶಿ: ಈ ತಿಂಗಳು ವ್ಯಾಪಾರ-ವ್ಯವಹಾರ ಸಂಬಂಧಿತ ಪ್ರವಾಸಗಳು ಯಶಸ್ವಿಯಾಗುತ್ತವೆ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗಿನ ಸಂಬಂಧಗಳಲ್ಲಿ ಮಾಧುರ್ಯವಿರುತ್ತದೆ. ಈ ತಿಂಗಳು ನಿಮ್ಮ ಮನೆಯಲ್ಲಿ ಕೆಲವು ಶುಭ ಕಾರ್ಯಗಳು ಪೂರ್ಣಗೊಳ್ಳಲಿವೆ. ನಿಮ್ಮ ಜೀವನ ಸಂಗಾತಿಯಿಂದ ನೀವು ಸಮಾಜದಲ್ಲಿ ಪ್ರತಿಷ್ಠೆಯನ್ನು ಪಡೆಯುತ್ತೀರಿ. ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯವು ಉತ್ತಮವಾಗಿರುತ್ತದೆ.  

ಕನ್ಯಾ ರಾಶಿ: ನಿಮ್ಮ ಕೆಲಸದಲ್ಲಿ ಲಾಭ ಮತ್ತು ಯಶಸ್ಸಿನ ಸಂತೋಷವನ್ನು ನೀವು ಪಡೆಯುತ್ತೀರಿ. ದಾನ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ. ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ತುಲಾ ರಾಶಿ: ಈ ತಿಂಗಳು ನಿಮಗೆ ತುಂಬಾ ಒಳ್ಳೆಯದಾಗಲಿದ್ದು, ಆರೋಗ್ಯ ಸುಧಾರಿಸುತ್ತದೆ. ಕುಟುಂಬ ಸದಸ್ಯರಿಗೆ ಸಂತೋಷ ಸಿಗಲಿದೆ. ಮನಸ್ಸಿನ ಸಂದಿಗ್ಧತೆ ಕಡಿಮೆಯಾಗಲಿದೆ. ನೀವು ಹಠಾತ್ ಹಣದ ಲಾಭವನ್ನು ಹೊಂದುವಿರಿ. ಮಕ್ಕಳು ನಿಮ್ಮ ಆದೇಶಗಳನ್ನು ಪಾಲಿಸುತ್ತಾರೆ ಮತ್ತು ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಿಸುತ್ತಾರೆ.  

ವೃಶ್ಚಿಕ ರಾಶಿ:: ಈ ತಿಂಗಳು ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ಉದ್ಯಮಿಗಳು ಹೊಸ ಪಾಲುದಾರಿಕೆಗೆ ಪ್ರವೇಶಿಸಬಹುದು. ಪ್ರತಿಸ್ಪರ್ಧಿಗಳು ಯಾವುದೇ ಹಾನಿಯನ್ನುಂಟುಮಾಡಲು ಸಾಧ್ಯವಾಗುವುದಿಲ್ಲ. ಕುಟುಂಬ ಜೀವನವು ಅದ್ಭುತವಾಗಿರುತ್ತದೆ. ಉನ್ನತ ಸ್ಥಾನದಲ್ಲಿರುವ ನೀವು ಸ್ನೇಹಿತರು ಮತ್ತು ಪರಿಚಯಸ್ಥರಿಂದ ಉತ್ತಮ ಬೆಂಬಲ ಪಡೆಯುತ್ತೀರಿ.

ಇದನ್ನೂ ಓದಿ: Chaitra Navaratri: ಚೈತ್ರ ನವರಾತ್ರಿಯಲ್ಲಿ ಶನಿ-ಮಂಗಳರ ಗೋಚರ, ಈ ರಾಶಿಗಳ ಮೇಲೆ ನೇರ ಪ್ರಭಾವ

ಧನು ರಾಶಿ: ಈ ತಿಂಗಳು ನಿಮಗೆ ಅದೃಷ್ಟದ ಉತ್ತಮ ಬೆಂಬಲ ಸಿಗುತ್ತದೆ. ಕುಟುಂಬದಲ್ಲಿ ಆತ್ಮೀಯತೆಯ ವಾತಾವರಣ ಕಂಡುಬರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಮತ್ತು ಖ್ಯಾತಿಯನ್ನು ಪಡೆಯುತ್ತೀರಿ. ಉನ್ನತ ಮಟ್ಟದ ಜನರೊಂದಿಗೆ ಸಂಬಂಧಗಳು ರೂಪುಗೊಳ್ಳುತ್ತವೆ. ಕುಟುಂಬ ಸದಸ್ಯರ ನಡುವೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ.  

ಮಕರ ರಾಶಿ: ಈ ತಿಂಗಳು ನಿಮಗೆ ಅದೃಷ್ಟದಿಂದ ಸಾಧ್ಯವಿರುವ ಎಲ್ಲ ಸಹಾಯ ಸಿಗುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಈ ತಿಂಗಳು ಅನೇಕ ಆದಾಯದ ಮೂಲಗಳು ನಿಮಗೆ ಸಹಕಾರಿಯಾಗುತ್ತವೆ. ಕೆಲಸದಲ್ಲಿ ಲಾಭ ಇರುತ್ತದೆ. ಅವಿವಾಹಿತರು ಈ ತಿಂಗಳು ವಿವಾಹ ಪ್ರಸ್ತಾಪವನ್ನು ಪಡೆಯಬಹುದು.  

ಕುಂಭ ರಾಶಿ: ಈ ತಿಂಗಳು ನಿಮ್ಮ ಶತ್ರುಗಳ ಮೇಲೆ ಒತ್ತಡ ಹೇರುವಿರಿ. ನೀವು ಜನರ ನಡುವೆ ಚರ್ಚೆಗೆ ಕಾರಣರಾಗುತ್ತೀರಿ ಮತ್ತು ಸಮಾಜದಲ್ಲಿ ಪ್ರಸಿದ್ಧರಾಗುತ್ತೀರಿ. ಈ ತಿಂಗಳು ಉನ್ನತ ಸ್ಥಾನಗಳನ್ನು ಹೊಂದಿರುವ ಜನರೊಂದಿಗೆ ಉತ್ತಮ ಸಂಬಂಧವು ರೂಪುಗೊಳ್ಳುತ್ತದೆ. ನೀವು ಧಾರ್ಮಿಕ ಕಾರ್ಯಗಳಿಗೆ ಕೊಡುಗೆ ನೀಡುತ್ತೀರಿ ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧರಾಗಿರುತ್ತೀರಿ. ವೈವಾಹಿಕ ಜೀವನದಲ್ಲಿ ಮಾಧುರ್ಯ ಉಳಿಯುತ್ತದೆ.  

ಮೀನ ರಾಶಿ: ಈ ತಿಂಗಳು ಉದ್ಯೋಗದ ಚಿಂತೆಗಳು ಕೊನೆಗೊಳ್ಳುತ್ತವೆ. ನಿಮ್ಮ ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುತ್ತದೆ. ಈ ತಿಂಗಳು ಪ್ರಯಾಣ ಮತ್ತು ಮನರಂಜನೆಗೆ ಉತ್ತಮವಾಗಿರುತ್ತದೆ. ಕಾನೂನು ವಿಷಯಗಳು ನಿಮ್ಮ ಪರವಾಗಿ ನಿರ್ಧಾರವಾಗುತ್ತವೆ. ಜೀವನವನ್ನು ಆನಂದಿಸಲು ಇದು ಸರಿಯಾದ ಸಮಯ. ಆದರೆ ನಿಮ್ಮ ಆರೋಗ್ಯದಲ್ಲಿ ಏರಿಳಿತಗಳನ್ನು ಕಾಣಬಹುದು.

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News