Navratri 2021 Dress: ನವರಾತ್ರಿಯ 9 ದಿನ ವಿವಿಧ ಬಣ್ಣದ ಬಟ್ಟೆ ಧರಿಸಿ, ದೇವಿಯ ಕೃಪಾವೃಷ್ಟಿ ನಿಮ್ಮ ಮೇಲಾಗಲಿದೆ

Navratri 2021 Dress: ಶರನ್ನವರಾತ್ರಿ  (Durga Puja 2021) ಹಬ್ಬ ಅಕ್ಟೋಬರ್ ಎರಡನೇ ವಾರದಿಂದ ಆರಂಭವಾಗಲಿದೆ. ನೀವು ದುರ್ಗಾಮಾತೆಯ ಕೃಪಾವೃಷ್ಟಿ ಮತ್ತು ಆಶಿರ್ವಾದ ಪಡೆಯಲು ಬಯಸಿದರೆ, ನವರಾತ್ರಿಯಲ್ಲಿ ನೀವು ಪ್ರತಿದಿನ ವಿವಿಧ ಬಣ್ಣದ ಬಟ್ಟೆಗಳನ್ನು (Durga Puja Dress) ಧರಿಸಬೇಕು.

Written by - Nitin Tabib | Last Updated : Sep 29, 2021, 09:49 PM IST
  • ನವರಾತ್ರಿಯ 9 ದಿನಗಳು ದೇವಿ ದುರ್ಗೆಯ 9 ರೂಪಗಳ ಪೂಜೆ.
  • 9 ದೆವಿಗಳಿಗೆ 9 ವಿಭಿನ್ನ ಬಣ್ಣಗಳು ಇಷ್ಟ.
  • ಹೀಗಾಗಿ ನೀವೂ ಕೂಡ 9 ದಿನಗಳ ಕಾಲ ವಿವಿಧ ಬಣ್ಣದ ಬಟ್ಟೆ ತೊಟ್ಟು ದೇವಿಯನ್ನು ಆರಾಧಿಸಿ
Navratri 2021 Dress: ನವರಾತ್ರಿಯ 9 ದಿನ ವಿವಿಧ ಬಣ್ಣದ ಬಟ್ಟೆ ಧರಿಸಿ, ದೇವಿಯ ಕೃಪಾವೃಷ್ಟಿ ನಿಮ್ಮ ಮೇಲಾಗಲಿದೆ title=
Navratri 2021 Dress:

Navratri 2021 Dress - ಶಾರದೀಯ ನವರಾತ್ರಿ  (Navrati 2021) ಅಥವಾ ಶರನ್ನವರಾತ್ರಿ  ಅಕ್ಟೋಬರ್ ಎರಡನೇ ವಾರದಿಂದ ಆರಂಭವಾಗಲಿದೆ. ಈ ಬಾರಿ ನವರಾತ್ರಿಯು 9 ದಿನಗಳ ಬದಲು 8 ದಿನಗಳಾಗಿದ್ದು, ಎರಡು ತಿಥಿಗಳು ಒಟ್ಟಿಗೆ ಬಂದಿವೆ.

ಭಕ್ತಾದಿಗಳ ಇಷ್ಟಾರ್ಥ ಪೂರ್ತಿಯಾಗುತ್ತದೆ
ನವರಾತ್ರಿಯ 9 ದಿನಗಳಲ್ಲಿ ದೇವಿ ದುರ್ಗೆಯ 9 ವಿವಿಧ ಅವತಾರಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿಯೊಂದು ದಿನ ಭಕ್ತಾದಿಗಳು ದೇವಿ ದುರ್ಗೆಗೆ ವಿವಿಧ ಬಣ್ಣದ ಬಟ್ಟೆಗಳನ್ನು ಧರಿಸಿ ಆರಾಧನೆ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ವೈಷ್ಣೋದೇವಿ ಪ್ರಸನ್ನಳಾಗುತ್ತಾಳೆ ಹಾಗೂ ತನ್ನ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾಳೆ. ಹಾಗಾದರೆ ಬನ್ನಿ ನವರಾತ್ರಿಯ ವಿವಿಧ ದಿನಗಳಲ್ಲಿ ಯಾವ ಬಣ್ಣದ ಡ್ರೆಸ್ ತೊಟ್ಟುಕೊಳ್ಳಬೇಕು ತಿಳಿದುಕೊಳ್ಳೋಣ.

ಮೊದಲ ದಿನ ಹಳದಿ ಬಣ್ಣದ ಡ್ರೆಸ್ ಧರಿಸಿ - ನವರಾತ್ರಿಯ ಮೊದಲ ದಿನ ಶೈಲಪುತ್ರಿ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ಶೈಲಪುತ್ರಿಗೆ ಹಳದಿ ಬಣ್ಣ ತುಂಬಾ ಇಷ್ಟವಾಗುತ್ತದೆ ಎಂಬ ನಂಬಿಕೆ. ಹೀಗಾಗಿ ಆ ದಿನ ಹಳದಿ ಬಣ್ಣದ ಬಟ್ಟೆ ತೊಟ್ಟು ದೇವಿಯ ಪೂಜೆ ಮಾಡಿ 

ಎರಡನೇ ದಿನ ಹಸಿರು ಬಣ್ಣದ ಡ್ರೆಸ್ ಧರಿಸಿ - ಎರಡನೇ ದಿನ ಬ್ರಹ್ಮಚಾರಿಣಿ ದೇವಿಯ ಪೂಜೆ-ಅರ್ಚನೆ (Durga Puja) ನಡೆಯುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದೇವಿಗೆ ಹಸಿರು ಬಣ್ಣ ಇಷ್ಟವಾಗುವ ಕಾರಣ ಚುನರಿ ಹಾಗೂ ಶೃಂಗಾರ ಕೂಡ ಹಸಿರು ಬಣ್ಣದಲ್ಲಿಯೇ ಮಾಡಲಾಗುತ್ತದೆ.

ಮೂರನೇ ದಿನ ಕಂದು ಬಣ್ಣದ  ಡ್ರೆಸ್ ಧರಿಸಿ - ಮೂರನೇ ದಿನ ಚಂದ್ರಘಂಟಾದೇವಿಯ ಪೂಜೆ. ಈ ದೇವಿಗೆ ಕಂದುಬಣ್ಣ ಇಷ್ಟ. ಹೀಗಾಗಿ ಆಕೆಯ ವಸ್ತ್ರವಿನ್ಯಾಸವನ್ನು ಕಂದುಬಣ್ಣದಲ್ಲಿಯೇ ಇರಿಸಲಾಗುತ್ತದೆ. ಹೀಗಾಗಿ ನೀವೂ ಕೂಡ ಕಂದುಬಣ್ಣದ ವಸ್ತ್ರ ಧರಿಸಿ ಪೂಜೆ ಮಾಡಿ.

ನಾಲ್ಕನೇ ದಿನ ನಾರಂಗಿ ಬಣ್ಣದ ಡ್ರೆಸ್ ಧರಿಸಿ - ನಾಲ್ಕನೇ ದಿನ ಕೂಷ್ಮಾಂಡಾ ದೇವಿಯ ಪೂಜೆ. ಈ ದೇವಿಗೆ ನಾರಂಗಿ ಬಣ್ಣ ಇಷ್ಟವಾದ ಕಾರಣ ಆಕೆಯ ಶೃಂಗಾರ ಕೂಡ ನಾರಂಗಿ ಬಣ್ಣದಲ್ಲಿಯೇ ಮಾಡಲಾಗುತ್ತದೆ. ನೀವೂ ಆ ದಿನ ನಾರಂಗಿ ಬಣ್ಣದ ಬಟ್ಟೆ ಧರಿಸಿ

ಐದನೇ ದಿನ ಬಿಳಿ ಬಣ್ಣದ ಬಟ್ಟೆ ಧರಿಸಿ - ಐದನೇ ದಿನ ಸ್ಕಂದಮಾತಾ ದೇವಿಯ ಪೂಜೆ. ಈ ದೇವಿಗೆ ಬಿಳಿ ಬಣ್ಣ ಜಾಸ್ತಿ ಇಷ್ಟ. ಬಿಳಿ ಬಣ್ಣದಿಂದ ದೇವಿಯನ್ನು ಅಲಂಕರಿಸಿ, ಬಿಳಿ ಬಣ್ಣದ ವಸ್ತ್ರ ತೊಟ್ಟು ಆಕೆಗೆ ಪೂಜೆ ಸಲ್ಲಿಸಿ.

ಇದನ್ನೂ ಓದಿ-ಅತ್ಯಂತ ಸ್ವಾರ್ಥಿಗಳಂತೆ ಈ ಮೂರು ರಾಶಿಯವರು, ನಿಮ್ಮ ಸುತ್ತ ಮುತ್ತ ಇದ್ದರೆ ಹುಷಾರಾಗಿರಿ

ಆರನೇ ದಿನ ಕೆಂಪು ಬಣ್ಣದ ಬಟ್ಟೆ ಧರಿಸಿ -  ಆರನೇ ದಿನ ಕಾತ್ಯಾಯನಿ ದೇವಿಯ ಪೂಜೆ. ಈ ದೇವಿಗೆ ಕೆಂಪು ಬಣ್ಣ ಹೆಚ್ಚು ಇಷ್ಟ. ಹೀಗಾಗಿ ದೇವಿಯನ್ನು ಕೆಂಪು ಬಟ್ಟೆಯಿಂದ ಸಿಂಗರಿಸಿ, ನೀವೂ ಕೂಡ ಕೆಂಪು ಬಣ್ಣದ ಬಟ್ಟೆ ತೊಟ್ಟು ಆರಾಧನೆ ಮಾಡಿ.

ಏಳನೆ ದಿನ ನೀಲಿ ಬಣ್ಣದ ಬಟ್ಟೆ ಧರಿಸಿ - ಏಳನೇ ದಿನ ಕಾಲರಾತ್ರಿ ದೇವಿಯ ಪೂಜೆ. ಈ ದೇವಿಗೆ ನೀಲಿ ಬಣ್ಣ ಹೆಚ್ಚು ಇಷ್ಟ. ಹೀಗಾಗಿ ದೇವಿಯ ಪ್ರತಿಮೆಯನ್ನು ನೀಲಿ ಬಣ್ಣದ ಬಟ್ಟೆಯಿಂದ ಅಲಂಕರಿಸಿ ನೀವೂ ಕೂಡ ನೀಲಿ ವಸ್ತ್ರ ತೊಟ್ಟು ಪೂಜೆ ಸಲ್ಲಿಸಿ

ಇದನ್ನೂ ಓದಿ-October 2021 Horoscope: ಅಕ್ಟೋಬರ್‌ನಲ್ಲಿ 4 ಗ್ರಹಗಳ ರಾಶಿ ಪರಿವರ್ತನೆ, ಯಾವ ರಾಶಿಯ ಮೇಲೆ ಹೆಚ್ಚು ಪ್ರಭಾವ ತಿಳಿಯಿರಿ

ಎಂಟನೆ ದಿನ ಗುಲಾಬಿ ಬಣ್ಣದ ವಸ್ತ್ರ ಧರಿಸಿ - ಎಂಟನೆ ದಿನ ಮಹಾಗೌರಿಗೆ ಪೂಜೆ ಸಲ್ಲಿಸಲಾಗುತ್ತದೆ. ಈ ದೇವಿಗೆ ಗುಲಾಬಿ ಬಣ್ಣ ಹೆಚ್ಚು ಇಷ್ಟ. ಆಕೆಯನ್ನು ಪ್ರಸನ್ನಗೊಳಿಸಲು ಎಂಟನೆ ದಿನ ನೀವೂ ಕೂಡ ಗುಲಾಬಿ ಬಣ್ಣದ ಬಟ್ಟೆ ಧರಿಸಿ ದೇವಿಗೆ ಪೂಜೆ ಸಲ್ಲಿಸಿ.

ಕೊನೆಯ ದಿನ ನೇರಳೆ ಬಣ್ಣದ ಬಟ್ಟೆ ಧರಿಸಿ - ನವರಾತ್ರಿಯ ಒಂಭತ್ತನೆಯ ದಿನ ಸಿದ್ಧಿದಾತ್ರಿ ದೇವಿಯ ಪೂಜೆ. ಸಿದ್ಧಿಧಾತ್ರಿ ದೇವಿಗೆ ನೇರಳೆ ಬಣ್ಣ ಹೆಚ್ಚು ಇಷ್ಟ. ಈ ದಿನ ನೇರಳೆ ಬಣ್ಣದ ಬಟ್ಟೆ ಧರಿಸಿ, ದೇವಿಗೂ ಕೂಡ ನೇರಳೆ ಬಣ್ಣದಲ್ಲಿ ಅಲಂಕಾರ ಮಾಡಿ ಪೂಜೆ ಸಲ್ಲಿಸಿ. ಇದರಿಂದ ದೇವಿಯ ಕೃಪಾಕಟಾಕ್ಷ ನಿಮ್ಮ ಮೇಲಿರಲಿದೆ.

ಇದನ್ನೂ ಓದಿ-Financial Problem Remedies: ಹಣದ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲವೇ? ಸ್ನಾನ ಮಾಡುವಾಗ ಈ ಕ್ರಮ ಕೈಗೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News