Obesity: ಈ ರೀತಿ ತೂಕ ಹೆಚ್ಚಿಸುವುದು ಮಾರಕ, ಈ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ

ಸ್ಥೂಲಕಾಯ ಮಧುಮೇಹದಿಂದ ಹಿಡಿದು ಕ್ಯಾನ್ಸರ್ ವರೆಗಿನ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

Written by - Puttaraj K Alur | Last Updated : Nov 28, 2021, 07:23 AM IST
  • ಸ್ಥೂಲಕಾಯತೆಯಿಂದ ಪಿತ್ತಕೋಶಕ್ಕೆ ಸಂಬಂಧಿಸಿದ ರೋಗಗಳ ಅಪಾಯವಿದೆ
  • ಸ್ಥೂಲಕಾಯತೆಯು ನಿದ್ರೆಯಲ್ಲಿ ಉಸಿರುಕಟ್ಟುವಿಕೆಗೆ ಕಾರಣವಾಗಬಹುದು
  • ಬೊಜ್ಜು ನಿಮಗೆ ಟೈಪ್ 2 ಡಯಾಬಿಟಿಸ್ ಅಪಾಯವನ್ನು ಹೆಚ್ಚಿಸುತ್ತದೆ
Obesity: ಈ ರೀತಿ ತೂಕ ಹೆಚ್ಚಿಸುವುದು ಮಾರಕ, ಈ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ title=
ಸ್ಥೂಲಕಾಯತೆಯಿಂದ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ

ನವದೆಹಲಿ: ಸ್ಥೂಲಕಾಯ(Obesity) ದಿಂದಾಗಿ ಯಾವುದೇ ಕಾಯಿಲೆ ಗಂಭೀರವಾಗುವ ಸಾಧ್ಯತೆ ಇರುತ್ತದೆ. ನಿಮ್ಮ ತೂಕ ಕೂಡ ವೇಗವಾಗಿ ಹೆಚ್ಚುತ್ತಿದ್ದರೆ, ನೀವು ಇದರ ಬಗ್ಗೆ ಎಚ್ಚರದಿಂದಿರಬೇಕು. ಇದು ಮಧುಮೇಹದಿಂದ ಹಿಡಿದು ಕ್ಯಾನ್ಸರ್ ವರೆಗಿನ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಟೈಪ್ 2 ಡಯಾಬಿಟಿಸ್

ಬೊಜ್ಜು ಟೈಪ್ 2 ಡಯಾಬಿಟಿಸ್(Type 2 Diabetes) ಅಪಾಯವನ್ನು ಹೆಚ್ಚಿಸುತ್ತದೆ. ತಜ್ಞರ ಪ್ರಕಾರ ತೂಕವನ್ನು ಕಳೆದುಕೊಳ್ಳುವುದು, ಸಮತೋಲಿತ ಆಹಾರ ಸೇವನೆ, ವ್ಯಾಯಾಮ ಮತ್ತು ಸಾಕಷ್ಟು ನಿದ್ದೆ ಮಾಡುವುದರಿಂದ ಟೈಪ್ 2 ಡಯಾಬಿಟಿಸ್ ಅಪಾಯವನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: Pumpkin Seeds: ಕುಂಬಳಕಾಯಿ ಬೀಜದಲ್ಲಿದೆ ಔಷಧೀಯ ಗುಣಗಳ ಖಜಾನೆ

ಪಿತ್ತಕೋಶದ ಸಮಸ್ಯೆ

ಇದರಿಂದ ಕಿಡ್ನಿ ಸಮಸ್ಯೆಯೂ ಉಂಟಾಗಬಹುದು. ಸ್ಥೂಲಕಾಯತೆಯಿಂದ ಪಿತ್ತಕೋಶಕ್ಕೆ ಸಂಬಂಧಿಸಿದ ರೋಗಗಳ ಅಪಾಯವಿದೆ.

ಅಸ್ಥಿ ಸಂಧಿವಾತ

ಸ್ಥೂಲಕಾಯತೆಯಿಂದ ಕೀಲುಗಳ ಮೇಲೆ ಒತ್ತಡ ಉಂಟಾಗುತ್ತದೆ. ಇದರಿಂದ ಮೂಳೆಗಳು ಪರಸ್ಪರ ಹೊಂದಿಕೊಳ್ಳುತ್ತವೆ. ಅಸ್ಥಿ ಸಂಧಿವಾತವು ನಿಮ್ಮ ಮೊಣಕಾಲುಗಳು, ಸೊಂಟ ಅಥವಾ ಬೆನ್ನಿನ ಮೇಲೆ ಪರಿಣಾಮ ಬೀರುತ್ತದೆ. ನೀವು ತೂಕವನ್ನು ಕಳೆದುಕೊಂಡರೆ ಅದು ಮೊಣಕಾಲುಗಳು, ಸೊಂಟ ಮತ್ತು ಕೆಳ ಬೆನ್ನಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ನಿದ್ರೆಯಲ್ಲಿ ಉಸಿರುಕಟ್ಟುವಿಕೆ

ಸ್ಥೂಲಕಾಯತೆಯು ನಿದ್ರೆಯಲ್ಲಿ ಉಸಿರುಕಟ್ಟುವಿಕೆಗೆ ಕಾರಣವಾಗಬಹುದು. ಈ ಖಾಯಿಲೆಯಲ್ಲಿ ಜೋರಾಗಿ ಗೊರಕೆ ಹೊಡೆಯುವುದು ಮತ್ತು ಮಲಗುವಾಗ ಸರಿಯಾಗಿ ಉಸಿರಾಡಲು ಸಾಧ್ಯವಾಗುವುದಿಲ್ಲ. ಇದು ನಿದ್ರೆಯ ಅಪ್ನಿಯ ಹೃದಯ ಕಾಯಿಲೆಗಳು ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Sesame Seeds: ಎಳ್ಳಿನ ಮಹತ್ವ ನಿಮಗೆಷ್ಟು ಗೊತ್ತು?, ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು

ಯಕೃತ್ತಿನ ಸಮಸ್ಯೆ

ಸ್ಥೂಲಕಾಯತೆ(Overweight)ಯಿಂದ ಎದೆಯುರಿ ಮತ್ತು ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತವೆ. ತಜ್ಞರ ಪ್ರಕಾರ ಸ್ಥೂಲಕಾಯತೆಯಿಂದ ಕ್ಯಾನ್ಸರ್(Cancer) ನಂತಹ ಗಂಭೀರ ಕಾಯಿಲೆಗಳ ಅಪಾಯವಿದೆ. ಇದು ಫಲವತ್ತತೆಯ ಮೇಲೂ ಪರಿಣಾಮ ಬೀರುತ್ತದೆ.

ಪರಿಧಮನಿಯ ಕಾಯಿಲೆ

ಸ್ಥೂಲಕಾಯತೆಯು ರಕ್ತಕೊರತೆಯ ಪಾರ್ಶ್ವವಾಯು ಮತ್ತು ಪರಿಧಮನಿಯ ಕಾಯಿಲೆ(Serious Diseases)ಗೆ ಮುಖ್ಯ ಕಾರಣವಾಗಿದೆ. ಇದು ಅಪಾಯಕಾರಿಯಾಗಬಹುದು. ಈ ಸ್ಥಿತಿಯಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಅಪಧಮನಿಗಳಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಇದರಿಂದ ಪಾರ್ಶ್ವವಾಯು ಅಪಾಯವಿದೆ. ತಜ್ಞರ ಪ್ರಕಾರ ಸ್ಥೂಲಕಾಯತೆಯು ರಕ್ತದೊತ್ತಡ, ಪಾರ್ಶ್ವವಾಯು ಮತ್ತು ಹೃದಯ ಕಾಯಿಲೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News