ಹಾಲಿನ ಕೆನೆ ಜೊತೆ ಈ ವಸ್ತುಗಳನ್ನು ಬೆರೆಸಿ ಮುಖಕ್ಕೆ ಹಚ್ಚಿದರೆ ಪಾರ್ಲರ್ ಗೆ ಹೋಗುವ ಅವಶ್ಯಕತೆಯೇ ಇಲ್ಲ .!

Face Pack For Soft Skin :ಕೆನೆ ಬಳಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಮುಖದಲ್ಲಿರುವ ಕಲೆ, ಕೊಳೆ ಮಾಯವಾಗಿ ತ್ವಚೆ ಮೃದುವಾಗುತ್ತದೆ. ಹಾಲಿನ ಕೆನೆಯೊಂದಿಗೆ ಕೆಲವು ವಸ್ತುಗಳನ್ನು ಬೆರೆಸಿ ಫೇಸ್ ಪ್ಯಾಕ್ ತಯಾರಿಸಿದರೆ, ತ್ವಚೆಯ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

Written by - Ranjitha R K | Last Updated : Jan 13, 2023, 03:18 PM IST
  • ಕೆನೆ ಮುಖದ ಸೌಂದರ್ಯವನ್ನು ಕೂಡಾ ಹೆಚ್ಚಿಸುತ್ತದೆ.
  • ಕೆಲವು ವಸ್ತುಗಳನ್ನು ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ
  • ತ್ವಚೆಯ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ
ಹಾಲಿನ ಕೆನೆ ಜೊತೆ ಈ ವಸ್ತುಗಳನ್ನು ಬೆರೆಸಿ ಮುಖಕ್ಕೆ ಹಚ್ಚಿದರೆ ಪಾರ್ಲರ್ ಗೆ ಹೋಗುವ ಅವಶ್ಯಕತೆಯೇ ಇಲ್ಲ .!  title=

Face Pack For Soft Skin : ಕೆಲವರಿಗೆ ಹಾಲಿನ ಕೆನೆ ತಿನ್ನುವುದೆಂದರೆ ಬಲು ಇಷ್ಟ. ವಿವಿಧ ರೀತಿಯ ತಿಂಡಿಗಳಲ್ಲಿ ಕೂಡಾ ಹಾಲಿನ ಕೆನೆ ಬಳಸುತ್ತಾರೆ. ಇದು ತಿಂಡಿ ತಿನಿಸುಗಳ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಮುಖದ ಸೌಂದರ್ಯವನ್ನು ಕೂಡಾ ಹೆಚ್ಚಿಸುತ್ತದೆ.  ಹೌದು ಚರ್ಮದ ಆರೋಗ್ಯಕ್ಕೆ ಬೆಸ್ಟ್ ಮನೆ ಮದ್ದು ಇದು.  ಕೆನೆ ಬಳಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಮುಖದಲ್ಲಿರುವ ಕಲೆ, ಕೊಳೆ ಮಾಯವಾಗಿ ತ್ವಚೆ ಮೃದುವಾಗುತ್ತದೆ. ಹಾಲಿನ ಕೆನೆಯೊಂದಿಗೆ ಕೆಲವು ವಸ್ತುಗಳನ್ನು ಬೆರೆಸಿ ಫೇಸ್ ಪ್ಯಾಕ್ ತಯಾರಿಸಿದರೆ, ತ್ವಚೆಯ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

1. ಹಾಲಿನ ಕೆನೆ ಮತ್ತು ಜೇನುತುಪ್ಪ
ಕೆನೆ ಮತ್ತು ಜೇನುತುಪ್ಪದ ಸಂಯೋಜನೆಯು ಮುಖದ ಚರ್ಮಕ್ಕೆ ಬಹಳ ಪ್ರಯೋಜನಕಾರಿ. ಇದರೊಂದಿಗೆ, ತ್ವಚೆ ಡೀಪ್ ಮಾಯಶ್ಚರೈಸರ್ ನೊಂದಿಗೆ  ಅದ್ಭುತವಾದ ಹೊಳಪು ಕೂಡಾ ಪಡೆಯುತ್ತದೆ. ಈ ಫೇಸ್ ಪ್ಯಾಕ್ ತಯಾರಿಸಲು ಕೆನೆ ಮತ್ತು ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಬೆರೆಸಿ ಮುಖಕ್ಕೆ ಹಚ್ಚಬೇಕು. ಸುಮಾರು 20 ನಿಮಿಷಗಳ ಕಾಲ ಅದನ್ನು ಮುಖದ ಮೇಲೆ ಹಾಗೆಯೇ ಬಿಟ್ಟು, ನಂತರ, ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. 

ಇದನ್ನೂ ಓದಿ : Pimple: ಮೊಡವೆಗಳನ್ನು ಬುಡಸಮೇತ ಕಿತ್ತುಹಾಕಲು ಈ 3 ಆರೋಗ್ಯಕರ ಪಾನೀಯಗಳು ಸೇವಿಸಿ

2. ಹಾಲಿನ ಕೆನೆ ಮತ್ತು ಅರಿಶಿನ
ಕೆನೆಗೆ ಅರಿಶಿನ ಬೆರೆಸಿ ಮುಖಕ್ಕೆ ಹಚ್ಚಿದರೆ ಒಣ ತ್ವಚೆಯೂ ಬೆಣ್ಣೆಯಂತೆ ಮೃದುವಾಗುತ್ತದೆ. ಒಂದು ಚಮಚ ಕೆನೆಗೆ 2 ಚಿಟಿಕೆ ಅರಿಶಿನ ಪುಡಿ ಮತ್ತು ರೋಸ್ ವಾಟರ್ ಹನಿಗಳನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಈಗ ಅದನ್ನು ಮುಖಕ್ಕೆ ಹಚ್ಚಿ ಸುಮಾರು 15 ನಿಮಿಷಗಳ ಕಾಲ ಇರಿಸಿ ನಂತರ  ತಣ್ಣೀರಿನಿಂದ ತೊಳೆಯಿರಿ.

3. ಹಾಲಿನ ಕೆನೆ  ಮತ್ತು ಕಡಲೆ ಹಿಟ್ಟು 
ಕೆನೆ ಮತ್ತು ಕಡಲೆ ಹಿಟ್ಟಿನ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿದರೆ, ಮುಖವು ಸರಿಯಾಗಿ ಟೋನ್ ಆಗುತ್ತದೆ. ತ್ವಚೆಯ ಡೆಡ್ ಸೆಲ್ ಗಳು ಕೂಡಾ ನಿವಾರಣೆಯಾಗುತ್ತದೆ. ಈ ಫೇಸ್ ಪ್ಯಾಕ್ ಅನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಬೇಕು. ಹೀಗೆ ಮಾಡುತ್ತಾ ಬಂದರೆ ತ್ವಚೆಯ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. 

ಇದನ್ನೂ ಓದಿ : Weight Loss Tips: ತೂಕ ನಷ್ಟಕ್ಕೆ ಪರಿಣಾಮಕಾರಿ ಈ ಡ್ರೈ ಫ್ರೂಟ್‌

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News