Rashi Parivartan 2021: ಮೇ ತಿಂಗಳಿನಲ್ಲಿ 3 ದೊಡ್ಡ ಗ್ರಹಗಳ ನಡೆ ಪರಿವರ್ತನೆ, ಈ ರಾಶಿಯ ಮೇಲೆ ಅತಿ ಹೆಚ್ಚು ಪ್ರಭಾವ

Rashi Parivartan 2021 - ಗ್ರಹ-ನಕ್ಷತ್ರಗಳ ರಾಶಿ ಪರಿವರ್ತನೆಯ ಪ್ರಭಾವ ನೇರವಾಗಿ ವ್ಯಕ್ತಿಗಳ ರಾಶಿಯ ಮೇಲೆ ಬೀಳುತ್ತದೆ. ಹಲವು ಬಾರಿ ಗ್ರಹಗಳ ನಡೆಯಲ್ಲಾಗುವ ಪರಿವರ್ತನೆ ಕೂಡ ರಾಶಿಗಳ ಪಾಲಿಗೆ ಶುಭಫಲ ನೀಡುತ್ತದೆ ಇಲ್ಲದೆ ಹೋದಲ್ಲಿ ಏರಿಳಿತಕ್ಕೆ ಕಾರಣವಾಗುತ್ತದೆ.

Written by - Nitin Tabib | Last Updated : Apr 21, 2021, 09:37 PM IST
  • ಮುಂದಿನ ತಿಂಗಳು ಮೂರು ದೊಡ್ಡ ಗ್ರಹಗಳು ತನ್ನ ರಾಶಿಯನ್ನು ಬದಲಾಯಿಸಲಿವೆ.
  • ಗ್ರಹಗಳ ಈ ನಡೆ ಬದಲಾವಣೆ 12 ರಾಶಿ ಜಾತಕದವರ ಮೇಲೆ ಪ್ರಭಾವ ಬೀರಲಿವೆ.
  • ವೃಷಭ ರಾಶಿ ಅತಿ ಹೆಚ್ಚು ಪ್ರಭಾವಕ್ಕೆ ಒಳಗಾಗಲಿದೆ.
Rashi Parivartan 2021: ಮೇ ತಿಂಗಳಿನಲ್ಲಿ 3 ದೊಡ್ಡ ಗ್ರಹಗಳ ನಡೆ ಪರಿವರ್ತನೆ, ಈ ರಾಶಿಯ ಮೇಲೆ ಅತಿ ಹೆಚ್ಚು ಪ್ರಭಾವ title=
Rashi Parivartan 2021 (Representational Image)

ನವದೆಹಲಿ: Rashi Parivartan 2021 - ಗ್ರಹ-ನಕ್ಷತ್ರಗಳ ರಾಶಿ ಪರಿವರ್ತನೆಯ ಪ್ರಭಾವ ನೇರವಾಗಿ ವ್ಯಕ್ತಿಗಳ ರಾಶಿಯ ಮೇಲೆ ಬೀಳುತ್ತದೆ. ಹಲವು ಬಾರಿ ಗ್ರಹಗಳ ನಡೆಯಲ್ಲಾಗುವ ಪರಿವರ್ತನೆ ಕೂಡ ರಾಶಿಗಳ ಪಾಲಿಗೆ ಶುಭಫಲ ನೀಡುತ್ತದೆ ಇಲ್ಲದೆ ಹೋದಲ್ಲಿ ಏರಿಳಿತಕ್ಕೆ ಕಾರಣವಾಗುತ್ತದೆ. ವರ್ಷ 2021ರ ಮೇ ತಿಂಗಳಿನಲ್ಲಿ (Zodiac May 2021) ಹಲವು ಗ್ರಹಗಳು ತಮ್ಮ ನಡೆಯನ್ನು ಬದಲಾಯಿಸಲಿವೆ. ಇವುಗಳ ನಡೆಯಲ್ಲಾಗುವ ಬದಲಾವಣೆ ಎಲ್ಲ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಮೇ ತಿಂಗಳಿನಲ್ಲಾಗುವ ಈ ಗ್ರಹಗಳ ನಡೆ ಬದಲಾವಣೆ ಮೇಷ ರಾಶಿಯಿಂದ ಹಿಡಿದು ಮೀನ ರಾಶಿಯವರೆಗಿನ ಜಾತಕದವರಿಗೆ ಲಾಭ ಅಥವಾ ಹಾನಿ ತರುವ ಸಾಧ್ಯತೆ ಇದೆ ಎಂದು ಜೋತಿಷ್ಯಶಾಸ್ತ್ರ ಹೇಳುತ್ತದೆ. ಹಾಗಾದರೆ ಬನ್ನಿ ಮೇ ತಿಂಗಳಿನಲ್ಲಿ ಯಾವ ಯಾವ ಗ್ರಹಗಳು ಯಾವ ದಿನ ತಮ್ಮ ನಡೆ ಬದಲಾಯಿಸಲಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ 

1. ಬುಧ ರಾಶಿ ಪರಿವರ್ತನೆ - ಮೇ ತಿಂಗಳಿನಲ್ಲಿ ಬುಧ ಗ್ರಹ (Mercury Zodiac) ತನ್ನ ನಡೆ ಬದಲಾಯಿಸಲಿದೆ. ಮೇ 1, 2021 ರಂದು ಶನಿವಾರ ಬುಧ ವೃಷಭರಾಶಿಯಲ್ಲಿ ಗೋಚರಿಸಲಿದ್ದಾನೆ. ಈ ರಾಶಿ ಪರಿವರ್ತನೆಯ ಅತಿ ಹೆಚ್ಚು ಪ್ರಭಾವ ವೃಷಭ ರಾಶಿಯ ಜನರ ಮೆಲಾಗಲಿದೆ. ಜೋತಿಷ್ಯಶಾಸ್ತ್ರದ ಪ್ರಕಾರ ಬುಧನನ್ನು ಬಾಯಿ, ವರ್ತನೆ, ಮೆದುಳು ಹಾಗೂ ನಿಮ್ಮ ಸೌಂದರ್ಯ ಕಾರಕ ಗ್ರಹ ಎಂದು ಭಾವಿಸಲಾಗುತ್ತದೆ.

ಇದನ್ನೂ ಓದಿ- Snake Plant Benefits: ಬಹಳ ಉಪಯುಕ್ತ ಈ ಸ್ನೇಕ್ ಪ್ಲಾಂಟ್, ಖರೀದಿಸುವ ಮೊದಲು ಇದನ್ನು ತಿಳಿಯಿರಿ

2. ಶುಕ್ರ ರಾಶಿ ಪರಿವರ್ತನೆ - ಮೇ 4, 2021ರಂದು ಮಂಗಳವಾರ ಶುಕ್ರ ಗ್ರಹ ರಾಶಿ ಪರಿವರ್ತಿಸಲಿದ್ದಾನೆ (Zodiac Change). ಶುಕ್ರ ವೃಷಭ ರಾಶಿಯಲ್ಲಿ ಗೋಚರಿಸಲಿದ್ದಾನೆ. ಶುಕ್ರನ ಈ ರಾಶಿ ಪರಿವರ್ತನೆಯ ಹೆಚ್ಚು ಪ್ರಭಾವ ಕೂಡ ವೃಷಭ ರಾಶಿಯ ಮೇಲೆ ಬೀಳಲಿದೆ. ಈ ಅವಧಿಯಲ್ಲಿ ವೃಷಭ ರಾಶಿಯ ಜಾತಕದವರಿಗೆ ಆರ್ಥಿಕ ಲಾಭ ಉಂಟಾಗುವ ಸಾಧ್ಯತೆ ಇದೆ. ಶುಕ್ರನನ್ನು ವೈಭವ, ಐಶ್ವರ್ಯ ಹಾಗೂ ಸುಖ-ಸಮೃದ್ಧಿಕಾರಕ ಎಂದು ಭಾವಿಸಲಾಗಿದೆ. ಶುಕ್ರನ ರಾಶಿ ಪರಿವರ್ತನೆಯಿಂದ ಹಲವು ಜಾತಕದವರಿಗೆ ಒಳ್ಳೆಯ ದಿನಗಳು ಬರಲಿವೆ.

ಇದನ್ನೂ ಓದಿ- ಇಲ್ಲಿ ರುಂಡವಿಲ್ಲದ ದೇವಿಯನ್ನು ಪೂಜಿಸಲಾಗುತ್ತದೆ..! ಇಷ್ಟಾರ್ಥ ಈಡೇರಿಸುತ್ತಾಳಂತೆ ಚಿನ್ನಮ್ಮಾಸ್ತಿಕ ದೇವಿ

3. ಸೂರ್ಯ ರಾಶಿ ಪರಿವರ್ತನೆ - 14 ಮೇ 2021ರಂದು ಅಂದರೆ ಶುಕ್ರವಾರ ಸೂರ್ಯ (Sun Zodiac) ತನ್ನ ನಡೆಯನ್ನು ಬದಲಾಯಿಸಲಿದ್ದಾನೆ. ಈ ಅವಧಿಯಲ್ಲಿ ಸೂರ್ಯ ವೃಷಭ ರಾಶಿಯಲ್ಲಿ ಗೋಚರಿಸಲಿದ್ದಾನೆ. ಸೂರ್ಯನ ಈ ರಾಶಿ ಪರಿವರ್ತನೆ ಕೂಡ ಎಲ್ಲ 12 ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರಲಿದೆ. ಜೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು ಆತ್ಮ, ಯಶ, ಗೌರವ, ರಾಜಾ, ಉಚ್ಛ ಪದಸ್ತ ಹಾಗೂ ಸರ್ಕಾರಿ ಸೇವೆಗಳ ಕಾರಕ ಎಂದು ಭಾವಿಸಲಾಗಿದೆ.

ಇದನ್ನೂ ಓದಿ- ಅಕ್ಷಯ ತೃತೀಯ ದಿನದಂದು ಚಿನ್ನ ಯಾಕೆ ಖರೀದಿಸಬೇಕು..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News