ನಿಮ್ಮ ʼಸಂಗಾತಿʼ ಬೇರೊಬ್ಬರ ಜೊತೆ ಸಂಬಂಧ ಹೊಂದಿದ್ದರೆ ಅವರ ವರ್ತನೇ ಹೀಗೆ ಇರುತ್ತದೆ..!

Relationship tips : ವಿವಾಹೇತರ ಅಥವಾ ಅಕ್ರಮ ಸಂಬಂಧಗಳ ವಿಷಯಕ್ಕೆ ಬಂದಾಗ, ಅಂತಹ ಸಂಬಂಧಗಳಲ್ಲಿರುವ ಜನರನ್ನು ಹೇಗೆ ಗುರುತಿಸುವುದು ಎಂಬುದರ ಕುರಿತು ಅರಿತುಕೊಂಡಿರುವುದು ಅವಶ್ಯಕ. ವ್ಯಕ್ತಿಯು ಬೇರೊಬ್ಬರೊಂದಿಗೆ ಸಂಬಂಧವನ್ನು ಹೊಂದಿದ್ದಾನೆ ಎಂದು ಹೇಳುವ ಅಂಶಗಳು ಯಾವುವು..? ಅಂತ ತಿಳಿಯೋಣ ಬನ್ನಿ..

Written by - Krishna N K | Last Updated : May 7, 2023, 07:33 PM IST
  • ಇಂದಿನ ಪೀಳಿಗೆಯಲ್ಲಿ ಪ್ರೀತಿಯಲ್ಲಿ ಮೋಸ ಹೋಗುವುದು ಸರ್ವೇ ಸಾಮಾನ್ಯವಾಗಿದೆ.
  • ಮದುವೆ ನಂತರ ಅನೈತಿಕ ಸಂಬಂಧ ಹೊಂದಿರುವ ಪ್ರಕರಣಗಳು ಸಹ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ.
  • ಬೇರೆ ಸಂಬಂಧಗಳಲ್ಲಿರುವ ಜನರನ್ನು ಅವರ ವರ್ತನೆಯ ಮೂಲಕ ಗುರುತಿಸಬಹುದು.
ನಿಮ್ಮ ʼಸಂಗಾತಿʼ ಬೇರೊಬ್ಬರ ಜೊತೆ ಸಂಬಂಧ ಹೊಂದಿದ್ದರೆ ಅವರ ವರ್ತನೇ ಹೀಗೆ ಇರುತ್ತದೆ..! title=

Relationship tips : ವಿವಾಹೇತರ ಸಂಬಂಧಗಳು ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಅಲ್ಲದೆ, ಇಂತಹ ಅನೇಕ ಪ್ರಕರಣಗಳು ಸಾವಿನಲ್ಲಿ ಅಂತ್ಯವಾದ ಉದಾರಹಣೆಗಳು ನಮ್ಮ ನಡುವೆ ಇವೆ. ಆದರೆ ವಿವಾಹೇತರ ಅಥವಾ ವಿವಾಹೇತರ ಸಂಬಂಧಗಳ ವಿಷಯಕ್ಕೆ ಬಂದರೆ, ಅಂತಹ ಸಂಬಂಧಗಳಲ್ಲಿ ವಾಸಿಸುವ ಜನರನ್ನು ಹೇಗೆ ಗುರುತಿಸುವುದು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಯುವತಿ ಅಥವಾ ಯುವಕ ಬೇರೊಬ್ಬರೊಂದಿಗೆ ಸಂಬಂಧವನ್ನು ಹೊಂದಿದ್ದಾರಾ..? ಎಂದು ಅವರ ವರ್ತನೆ ಮೂಲಕವೇ ತಿಳಿಯುತ್ತದೆ.

ಇಂದಿನ ಪೀಳಿಗೆಯಲ್ಲಿ ಪ್ರೀತಿಯಲ್ಲಿ ಮೋಸ ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಅಲ್ಲದೆ, ಮದುವೆ ನಂತರ ಅನೈತಿಕ ಸಂಬಂಧ ಹೊಂದಿರುವ ಪ್ರಕರಣಗಳು ಸಹ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮ ಸಂಗಾಗಿ ನಮಗೆ ಮೋಸ ಮಾಡುತ್ತಿದ್ದಾನೆ\ಳೆಯೇ ಎಂಬು ಮೊದಲು ಅರಿತು ಕೊಂಡು ಸರಿಪಡಿಸಿವುದು, ಇಲ್ಲವೇ ಅಂತಹವರಿಂದ ದೂರ ಇರುವುದು ಬಹಳ ಮುಖ್ಯ. ಇಲ್ಲದಿದ್ದರೆ ಜೀವನ ಪರ್ಯಂತ ನೋವು ಅನುಭವಿಸಬೇಕಾಗುತ್ತದೆ.

ಇದನ್ನೂ ಓದಿ:Benefits Banana Leaf Meal: ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಎಷ್ಟೇಲ್ಲಾ ಪ್ರಯೋಜನಗಳು ಇವೆ ಗೊತ್ತಾ...?

ಮೊಬೈಲ್ ʼರಹಸ್ಯʼ : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಮೊಬೈಲ್ ಅನಿವಾರ್ಯವಾಗಿದೆ. ಅದೇಷ್ಟೋ ಸಂಬಂಧಗಳು ಮೊಬೈಲ್‌ನಿಂದಲೇ ಪ್ರಾರಂಭವಾಗಿ ಅಂತ್ಯವೂ ಸಹ ಅಲ್ಲಿಯೇ ಕಂಡಿವೆ. ಒಬ್ಬ ವ್ಯಕ್ತಿಯ ಫೋನ್‌ ನೋಡಿದ್ರೆ ಸಾಕು, ಅವರ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು. ವ್ಯಕ್ತಿ ಅಥವಾ ಮಹಿಳೆ ತನ್ನ ಫೋನ್ ಪಾಸ್‌ವರ್ಡ್ ಅನ್ನು ಆಗಾಗ ಬದಲಾಯಿಸುವ ಕಾರಣ ಅಂದ್ರೆ, ವಿವಾಹೇತರ ಸಂಬಂಧದ ಕುರಿತು ರಹಸ್ಯ ಮುಚ್ಚಿಡಲು ಅಂತ ಅರ್ಥ. ಅಷ್ಟೇ ಅಲ್ಲ ಪಾಸ್ ವರ್ಡ್ ಕೇಳಿದರೂ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಅಂತಹ ಜನರು ಎಷ್ಟು ಎಚ್ಚರದಿಂದಿರುತ್ತಾರೆ ಅಂದ್ರೆ, ಜೀವ ಹೋದ್ರೂ ಸಹ ತಮ್ಮ ಫೋನ್ ಮಾತ್ರ ಬಿಡುವುದಿಲ್ಲ. ಸ್ನಾನಗೃಹಕ್ಕೂ ತೆಗೆದುಕೊಂಡು ಹೋಗುತ್ತಾರೆ. ಆಗಾಗ ಮನೆಯಿಂದ ಹೊರಗೆ ಹೋಗಿ ಗಂಟೆಗಟ್ಟಲೆ ಫೋನ್ ನಲ್ಲಿ ಮಾತನಾಡುತ್ತಾರೆ. 

ನಡವಳಿಕೆ ಮತ್ತು ಮಾತು : ಬೇರೆ ಸಂಬಂಧ ಹೊಂದಿರುವ ವ್ಯಕ್ತಿ/ ಮಹಿಳೆ ನಡವಳಿಕೆಯಲ್ಲಿ ಬದಲಾವಣೆಯನ್ನು ನೀವು ಗಮನಿಸಬಹುದು. ಅವರು ತನ್ನ ಸಂಗಾತಿಯಿಂದ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಮೊದಲಿನಂತೆಯೇ ಪ್ರೀತಿಯಿಂದ ಮಾತನಾಡುವುದಿಲ್ಲ. ತಮ್ಮದೇ ಲೋಕದಲ್ಲಿ ಇರುತ್ತಾರೆ. ಏನಾದ್ರೂ ಕೇಳಿದರೆ ಕೋಪಗೊಳ್ಳುತ್ತಾರೆ. ಅಲ್ಲದೆ, ಆದಷ್ಟು ದೂರವಿರಲು ಬಯಸುತ್ತಾರೆ.

ಇದನ್ನೂ ಓದಿ: ಸತ್ತ ನಂತರವೂ ʼಆತ್ಮʼ 13 ದಿನ ತನ್ನ ಮನೆಯಲ್ಲಿರುತ್ತದೆ..! ಗರುಡ ಪುರಾಣದ ನಿಗೂಢತೆ

ದೈನಂದಿನ ದಿನಚರಿಯಲ್ಲಿ ಬದಲಾವಣೆ : ದೈನಂದಿನ ದಿನಚರಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ನಿಮಗೆ ಮಾತನಾಡಲು ಸಮಯ ನೀಡುವುದಿಲ್ಲ. ನಿಮ್ಮ ಮೇಲೆ ಆಸಕ್ತಿ ಕಡಿಮೆಯಾಗುತ್ತದೆ. ಮೊದಲಿಗಿಂತ ದೈಹಿಕ ಸಂಬಂಧಗಳಲ್ಲಿ ಉತ್ಸಾಹ ಇರುವುದಿಲ್ಲ. ಮೊದಲು ಗಂಟೆಗಟ್ಟಲೇ ನಿಮ್ಮ ಜೊತೆ ಮಾತನಾಡುತ್ತಿದ್ದರಿಗೆ ನಿಮ್ಮ ಮಾತುಗಳೇ ಕಿರಿಕಿರಿಯಾಗುತ್ತವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News