Holi 2021: ರಾಶಿಗನುಗುಣವಾಗಿ ಯಾವ ರಾಶಿಯವರಿಗೆ ಯಾವ ಬಣ್ಣ ಶುಭ ತಿಳಿಯಿರಿ

ನಿಮ್ಮ ರಾಶಿಗನುಗುಣವಾಗಿ ಯಾವ ಬಣ್ಣವನ್ನು ಬಳಸಿ ಹೋಳಿಯಾಡಿದರೆ ಶುಭ ಅಥವಾ ಅದೃಷ್ಟ ಎನ್ನುವುದನ್ನು ತಿಳಿಯಿರಿ.. 

Written by - Ranjitha R K | Last Updated : Mar 26, 2021, 05:10 PM IST
  • ಮೇಷ ಮತ್ತು ವೃಶ್ಚಿಕ ರಾಶಿಯವರು ಕೆಂಪು ಬಣ್ಣ ಬಳಸಿ
  • ವೃಷಭ ಮತ್ತು ತುಲಾ ರಾಶಿಯವರಿಗೆ ಗುಲಾಬಿ ಬಣ್ಣ
  • ಮಿಥುನ ಮತ್ತು ಕನ್ಯಾರಾಶಿ ರಾಶಿಯವರಿಗೆ ಹಸಿರು ಬಣ್ಣ
Holi 2021: ರಾಶಿಗನುಗುಣವಾಗಿ  ಯಾವ ರಾಶಿಯವರಿಗೆ ಯಾವ ಬಣ್ಣ ಶುಭ ತಿಳಿಯಿರಿ  title=
ರಾಶಿಗನುಗುಣವಾಗಿ ಯಾವ ಬಣ್ಣ ಬಳಸಬೇಕು (file photo)

ನವದೆಹಲಿ: ಹಿಂದೂ ಕ್ಯಾಲೆಂಡರ್ ಪ್ರಕಾರ, ಚೈತ್ರ ಮಾಸದ ಪ್ರತಿಪದ ತಿಥಿಯಂದು ಹೋಳಿ (Holi) ಹಬ್ಬ ಪ್ರಾರಂಭವಾಗುತ್ತದೆ. ಈ ವರ್ಷ, ಹೋಳಿ ಹಬ್ಬವನ್ನು ಮಾರ್ಚ್ 29 ರ ಸೋಮವಾರ ಆಚರಿಸಲಾಗುವುದು. ಹೋಳಿಯ ಹಿಂದಿನ ದಿನ ಹೋಲಿಕಾ ದಹನ (Holika dahan) ನಡೆಯುತ್ತದೆ. ಹೋಳಿಯ ಸಂದರ್ಭದಲ್ಲಿ ಈ ವರ್ಷ ಅನೇಕ ವಿಶೇಷ ಯೋಗಗಳು  ಕೂಡಾ ಒದಗಿ ಬರಲಿದೆ.  ಹೊಲಿಕ ದಹನದ ದಿನ ಸ್ವರ್ಥ ಸಿದ್ಧಿ  ಯೋಗ, ಅಮೃತ ಸಿದ್ಧಿ ಯೋಗ ಮತ್ತು ವೃದ್ಧಿ ಯೋಗ ಇರಲಿದೆ. ಇನ್ನು  ಧ್ರುವ ಯೋಗ ದಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುವುದು. ಈ  ದಿನ ನಿಮ್ಮ ರಾಶಿಚಕ್ರಕ್ಕನುಗುಣವಾಗಿ ಯಾವ ಬಣ್ಣಗಳನ್ನು ಬಳಸಿ ಹೋಳಿ ಆಡಿದರೆ  ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ. ಯಾವ ಬಣ್ಣ ನಿಮಗೆ ಅದೃಷ್ಟ ತರುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. 

ಯಾವ ರಾಶಿಯವರಿಗೆ ಯಾವ ಬಣ್ಣ ಅದೃಷ್ಟ : 
ಮೇಷ ಮತ್ತು ವೃಶ್ಚಿಕ ರಾಶಿಯವರು ಕೆಂಪು ಬಣ್ಣ ಬಳಸಿ :
ಮೇಷ ಮತ್ತು ವೃಶ್ಚಿಕ ರಾಶಿಗಳಿಗೆ ಅಧಿಪತಿ ಮಂಗಳ, ಮಂಗಳನ (Mars) ಬಣ್ಣ ಕೆಂಪು. ಆದ್ದರಿಂದ, ಈ ಎರಡೂ ರಾಶಿಯವರು ಹೋಳಿ ದಿನದಂದು ಕೆಂಪು ಬಣ್ಣವನ್ನು ಬಳಸಬೇಕು. ಇನ್ನು ಈ ರಾಶಿಯವರು  ಗುಲಾಬಿ ಬಣ್ಣದೊಂದಿಗೆ ಕೂಡಾ ಹೋಳಿ ಆಡಬಹುದು.

ಇದನ್ನೂ ಓದಿ : Holi Special: ನಿಮ್ಮ ಪ್ರೀತಿಪಾತ್ರರಿಗೆ ಬಣ್ಣ ಹಚ್ಚುವ ಮೊದಲು ಅದರ ಮಹತ್ವ ತಿಳಿಯಿರಿ

ವೃಷಭ ಮತ್ತು ತುಲಾ ರಾಶಿಯವರಿಗೆ ಗುಲಾಬಿ ಬಣ್ಣ :
ವೃಷಭ ರಾಶಿ ಮತ್ತು ತುಲಾ ಈ ಎರಡೂ ರಾಶಿಗಳ ಅಧಿಪತಿ ಶುಕ್ರ (Venus) . ಶುಕ್ರನ ಬಣ್ಣವು ಬಿಳಿ ಮತ್ತು ಗುಲಾಬಿ ಎನ್ನಲಾಗಿದೆ.  ಹೋಳಿಯಲ್ಲಿ ಬಿಳಿ ಬಣ್ಣದೊಂದಿಗೆ ಹೋಳಿ ಆಡಲು ಸಾಧ್ಯವಿಲ್ಲ, ಹಾಗಾಗಿ ಈ ರಾಶಿಯವರು ಗುಲಾಬಿ ಬಣ್ಣದಿಂದ ಹೋಳಿ ಆಡಬಹುದು.

ಮಿಥುನ ಮತ್ತು ಕನ್ಯಾರಾಶಿ ರಾಶಿಯವರಿಗೆ ಹಸಿರು ಬಣ್ಣ:
ಮಿಥುನ (Gemini)  ಮತ್ತು ಕನ್ಯಾರಾಶಿ ಅಧಿಪತಿ ಬುಧ ಗ್ರಹಗಳು.  ಬುಧದ ಬಣ್ಣವನ್ನು ಹಸಿರು ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ,   ಈ ಎರಡೂ ರಾಶಿಯವರು ಹಸಿರು ಬಣ್ಣವನ್ನು ಹೋಳಿ ದಿನ ಬಳಸಬೇಕು. ಇದರಿಂದ ಅವರ ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ. 

ಇದನ್ನೂ ಓದಿ : Tips To Remove Holi Colour: ಬಟ್ಟೆಯಿಂದ ಹೋಳಿ ಬಣ್ಣ ತೆಗೆಯಲು ಇಲ್ಲಿದೆ ಟಿಪ್ಸ್

ಕರ್ಕ ರಾಶಿಯವರಿಗೆ ಬಿಳಿ ಬಣ್ಣ:
ಕರ್ಕ ರಾಶಿಯವರ ಅಧಿಪತಿ ಚಂದ್ರ (Moon). ಚಂದ್ರನ ಬಣ್ಣ ಬಿಳಿ. ಆದ್ದರಿಂದ ಕಾರಕ ರಾಶಿಯವರು ಸಿಲ್ವರ್ ಕಲರ್ ಅನ್ನು ಬಳಸಿ ಹೋಇ ಆಡಬಹುದು.. ಆದರೆ ಈ ಬಣ್ಣದಲ್ಲಿ ಸಾಕಷ್ಟು ರಾಸಾಯನಿಕ ಮಿಶ್ರಣ ಇರುವುದರಿಂದ ಮೊಸರಿನಲ್ಲಿ (Curd) ಯಾವುದಾದರು ಬಣ್ಣವನ್ನು ಬೆರೆಸಿ ಹೋಳಿ ಆಡಬಹುದು.

ಸಿಂಹ  ರಾಶಿಯವರಿಗೆ ಕಿತ್ತಳೆ ಬಣ್ಣ :
ಸಿಂಹ  ರಾಶಿಯವರ ಗ್ರಹದ ಅಧಿಪತಿ ಸೂರ್ಯ ದೇವರು (Sun god). ಸೂರ್ಯನ ಬಣ್ಣ ಕಿತ್ತಳೆ. ಹಾಗಾಗಿ ಈ ರಾಶಿಯವರು ಕಿತ್ತಳೆ ಬಣ್ಣವನ್ನು ಬಳಸಿ ಹೋಳಿ ಆಡಬಹುದು . 

ಇದನ್ನೂ ಓದಿ : Holi 2021: ಬಣ್ಣದೋಕುಳಿಯ ವೇಳೆ ಈ ರೀತಿ ನಿಮ್ಮ ಫೋನ್ ಅನ್ನು ಬಣ್ಣ ಹಾಗೂ ನೀರಿನಿಂದ ರಕ್ಷಿಸಿ

ಧನು ರಾಶಿ ಮತ್ತು ಮೀನ ರಾಶಿಯವರಿಗೆ ಹಳದಿ ಬಣ್ಣ:
ಈ ಎರಡೂ ರಾಶಿಚಕ್ರದವರ ಅಧಿಪತಿ ಬೃಹಸ್ಪತಿ (Gupiter) . ಈ ರಾಶಿಯವರು ಹಳದಿ ಬಣ್ಣದಲ್ಲಿ ಹೋಳಿ ಆಡಿದರೆ ಅದೃಷ್ಟ ಸಿಗಲಿದೆ ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News