ನವದೆಹಲಿ : ಹಿಂದೂ ಧರ್ಮದಲ್ಲಿ ಮಹಾಶಿವರಾತ್ರಿಯನ್ನು (Mahashivaratri)ಅತ್ಯಂತ ಮಹತ್ವದ ಹಬ್ಬವೆಂದು ಪರಿಗಣಿಸಲಾಗಿದೆ. ಈ ದಿನ ಶಿವಭಕ್ತರು ಉಪವಾಸ ಆಚರಿಸುತ್ತಾರೆ. ಶಿವನ ಪೂಜೆ (Shiva Pooje), ರುದ್ರಾಭಿಷೇಕ ಮಾಡುತ್ತಾರೆ. ಈ ವರ್ಷ, ಮಾರ್ಚ್ 1 ರಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಅಂದರೆ, ಮಾರ್ಚ್ ತಿಂಗಳ ಆರಂಭವು ಅತ್ಯಂತ ಮಂಗಳಕರ ದಿನದಿಂದ ಪ್ರಾರಂಭವಾಗುತ್ತಿದೆ. ಜ್ಯೋತಿಷ್ಯಶಾಸ್ತ್ರದ (Astrology)ಲೆಕ್ಕಾಚಾರಗಳ ಪ್ರಕಾರ, ಈ ಮಹಾಶಿವರಾತ್ರಿಯು ಕೆಲವು ರಾಶಿಚಕ್ರ ಚಿಹ್ನೆಗಳ ಜನರ ಅದೃಷ್ಟವನ್ನು ಬದಲಾಯಿಸುತ್ತದೆ. ಮಹಾಶಿವರಾತ್ರಿಯ ದಿನದಿಂದ ಇಡೀ ತಿಂಗಳವರೆಗೆ ಈ ರಾಶಿಯವರಿಗೆ ಅಪಾರ ಲಾಭವಾಗುತ್ತದೆ.
ಮಿಥುನ ರಾಶಿ (Gemini) :
ಮಾರ್ಚ್ 2022 ಮಿಥುನ ರಾಶಿಯ (Gemini)ಜನರಿಗೆ ಹಣಕಾಸಿನ ಲಾಭವನ್ನು ನೀಡುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಲಾಭದ ಸಾಧ್ಯತೆ ಇರುತ್ತದೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗಲಿದೆ. ಉತ್ತಮ ಸ್ಥಾನ ಮತ್ತು ಗೌರವ ಸಿಗಲಿದೆ. ಅದೃಷ್ಟದ ಸಹಾಯದಿಂದ, ಕೆಲಸವು ಸುಲಭವಾಗಿ ಪೂರ್ಣಗೊಳ್ಳುವುದು ಮಾತ್ರವಲ್ಲ, ಮಾಡಿರುವ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತದೆ.
ಇದನ್ನೂ ಓದಿ : Numerology: ಈ ಜನರ ಮೇಲೆ ಸದಾ ಇರುತ್ತೆ ಲಕ್ಷ್ಮಿ ಕೃಪಾಕಟಾಕ್ಷ
ಕಟಕ ರಾಶಿ (Cancer ) :
ಕರ್ಕಾಟಕ ರಾಶಿಯವರಿಗೆ (Cancer), ಮಾರ್ಚ್ ತಿಂಗಳು ಉದ್ಯೋಗ ಮತ್ತು ವ್ಯವಹಾರ ಎರಡಕ್ಕೂ ಮಂಗಳಕರವಾಗಿರುತ್ತದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭವಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಹೊಸ ಉದ್ಯೋಗದ ಆಫರ್ ಸಿಗಲಿದೆ . ಉದ್ಯೋಗದಲ್ಲಿ ಬಡ್ತಿ ಸಿಕ್ಕಿ, ವೇತನ ಹೆಚ್ಚಳವಾಗುವ ಅವಕಾಶಗಳಿವೆ. ಹೊಸ ಕೆಲಸವನ್ನು ಪ್ರಾರಂಭಿಸುವವರೂ ಯಶಸ್ವಿಯಾಗುತ್ತಾರೆ.
ವೃಶ್ಚಿಕ ರಾಶಿ (Scorpio) :
ವೃಶ್ಚಿಕ ರಾಶಿಯವರಿಗೆ (Scorpio) ಮಾರ್ಚ್ ತಿಂಗಳು ಪ್ರತಿ ಕೆಲಸದಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತದೆ. ಹೊಸ ಉದ್ಯೋಗ ಸಿಗಬಹುದು. ಆತ್ಮವಿಶ್ವಾಸ ಹೆಚ್ಚಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಹಣದ ಜೊತೆಗೆ ಸ್ಥಾನ, ಗೌರವ ಕೂಡ ಸಿಗುತ್ತದೆ. ಹೂಡಿಕೆ ಮಾಡಲು ಇದು ಉತ್ತಮ ಸಮಯ.
ಇದನ್ನೂ ಓದಿ : Bad Luck Sign: ಈ ಅಭ್ಯಾಸಗಳಿಂದ ಜೀವನದಲ್ಲಿ ಎದುರಾಗುತ್ತೆ ಸಂಕಷ್ಟ!
ಮೀನ ರಾಶಿ (Pisces) :
ಮಾರ್ಚ್ 2022 ಮೀನ ರಾಶಿಯವರಿಗೆ (Pisces) ಬಹಳಷ್ಟು ಸಂತೋಷವನ್ನು ತರುತ್ತದೆ. ವೃತ್ತಿ ಜೀವನದಲ್ಲಿ ಯಶಸ್ಸು ಕಾಣುವಿರಿ. ಹಳೆಯ ವ್ಯವಹಾರಗಳನ್ನು ಇತ್ಯರ್ಥಗೊಳಿಸಲು ಇದು ಉತ್ತಮ ಸಮಯ. ಹಣ ಬರಲು ಹೊಸ ಮಾರ್ಗಗಳಿರುತ್ತವೆ. ಈ ತಿಂಗಳು ನಿಮಗೆ ಅನುಕೂಲಕರವಾಗಿರುತ್ತದೆ. ವಹಿವಾಟುಗಳಿಗೆ ಉತ್ತಮ ಸಮಯ. ಗೌರವ ಸಿಗಲಿದೆ ಒಟ್ಟಿನಲ್ಲಿ ಈ ಬಾರಿ ಸರ್ವತೋಮುಖ ಲಾಭವನ್ನು ಗಳಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.