ಹುಟ್ಟಿನಿಂದಲೇ ರಾಜಯೋಗ ಪಡೆದುಕೊಂಡು ಜನಿಸುತ್ತಾರೆ ಈ ರಾಶಿಗಳ ಜನರು, ನಿಮ್ಮ ರಾಶಿ ಇದೆಯಾ ಈ ಪಟ್ಟಿಯಲ್ಲಿ!

Rajyog In Kundali: ತುಂಬಾ ಅದೃಷ್ಟವಂತರೆಂದು ಪರಿಗಣಿಸಲ್ಪಡುವ ಅಂತಹ ಅನೇಕ ಜನರನ್ನು ನೀವು ಭೇಟಿಯಾಗಿರಬಹುದು. ಅವರನ್ನು ನೋಡಿದರೆ ಅವರ ಜಾತಕದಲ್ಲಿ ರಾಜಯೋಗ ಬರೆದಿರಬೇಕು ಎನ್ನಿಸುತ್ತದೆ. ಇಂದು ನಾವು ಅಂತಹ ಕೆಲವು ರಾಶಿಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.  

Written by - Nitin Tabib | Last Updated : Jul 20, 2023, 06:29 PM IST
  • ಎಷ್ಟೋ ಜನರ ಜಾತಕದಲ್ಲಿ ಹುಟ್ಟಿದ ತಕ್ಷಣ ರಾಜಯೋಗ ಬರೆದಿರುತ್ತದೆ.
  • ಅಂತಹವರ ಹುಟ್ಟಿನಿಂದ ಅವರ ಕುಟುಂಬದ ಅದೃಷ್ಟವೇ ಬದಲಾಗುತ್ತದೆ ಮತ್ತು ಬೆಳೆದ ನಂತರ ಈ ಜನರು ಉನ್ನತ ಸ್ಥಾನವನ್ನು ಅಲಂಕರಿಸುತ್ತಾರೆ
  • ಮತ್ತು ಜೀವನದಲ್ಲಿ ಅವರಿಗೆ ಯಾವುದೇ ರೀತಿಯ ಕೊರತೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಹುಟ್ಟಿನಿಂದಲೇ ರಾಜಯೋಗ ಪಡೆದುಕೊಂಡು ಜನಿಸುತ್ತಾರೆ ಈ ರಾಶಿಗಳ ಜನರು, ನಿಮ್ಮ ರಾಶಿ ಇದೆಯಾ ಈ ಪಟ್ಟಿಯಲ್ಲಿ!  title=

ಬೆಂಗಳೂರು:  ಹಿಂದೂ ಧರ್ಮದಲ್ಲಿ ಜಾತಕ ಅಥವಾ ಜನ್ಮಕುಂಡಲಿಗೆ  ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅದರ ಆಧಾರದ ಮೇಲೆ ವ್ಯಕ್ತಿಯ ನಡವಳಿಕೆ, ನಡತೆ ಮತ್ತು ಭವಿಷ್ಯ ಹೇಗಿರುತ್ತದೆ ಎಂಬುದು ತಿಳಿದ್ಯುತ್ತದೆ. ಸ್ಥಳೀಯರ ಸಮಯ, ಸ್ಥಳ, ಗ್ರಹಗಳು ಮತ್ತು ನಕ್ಷತ್ರಗಳ ಆಧಾರದ ಮೇಲೆ ಜಾತಕವನ್ನು ಸಿದ್ಧಪಡಿಸಲಾಗುತಡೆ. ಜಾತಕದಲ್ಲಿ ಹುಟ್ಟಿನಿಂದಲೇ ಅನೇಕ ರೀತಿಯ ಯೋಗಗಳು ರೂಪುಗೊಂಡಿವೆಯೋ ಅಥವಾ ಇಲ್ಲವೋ ತಿಳಿದುಕೊಳ್ಳಬಹುದು. ಅವುಗಳಲ್ಲಿ ಕೆಲ ಯೋಗಗಳು ಶುಭ ಹಾಗೂ ಕೆಲ ಯೋಗಗಳು ಅಶುಭಕರವೂ ಆಗಿರಬಹುದು. ಎಷ್ಟೋ ಜನರ ಜಾತಕದಲ್ಲಿ ಹುಟ್ಟಿದ ತಕ್ಷಣ ರಾಜಯೋಗ ಬರೆದಿರುತ್ತದೆ. ಅಂತಹವರ ಹುಟ್ಟಿನಿಂದ ಅವರ ಕುಟುಂಬದ ಅದೃಷ್ಟವೇ ಬದಲಾಗುತ್ತದೆ ಮತ್ತು ಬೆಳೆದ ನಂತರ ಈ ಜನರು ಉನ್ನತ ಸ್ಥಾನವನ್ನು ಅಲಂಕರಿಸುತ್ತಾರೆ ಮತ್ತು ಜೀವನದಲ್ಲಿ ಅವರಿಗೆ ಯಾವುದೇ ರೀತಿಯ ಕೊರತೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ.

ತುಲಾ ರಾಶಿ
ತುಲಾ ರಾಶಿಯವರಿಗೆ ಜಾತಕದಲ್ಲಿ ಹುಟ್ಟಿನಿಂದಲೇ ರಾಜಯೋಗ ಬರೆದಿರುತ್ತದೆ. ಇವರು ತುಂಬಾ ಅದೃಷ್ಟವನ್ನು ಹೊಂದಿರುತ್ತಾರೆ ಮತ್ತು ಎಲ್ಲವನ್ನೂ ಸುಲಭವಾಗಿ ಪಡೆದುಕೊಳ್ಳುತ್ತಾರೆ. ಈ ಜನರು ಕಡಿಮೆ ಪ್ರಯತ್ನದಿಂದ ಹೆಚ್ಚಿನ ಫಲಿತಾಂಶಗಳನ್ನು ಪಡೆಯುತ್ತಾರೆ. ಅವರು ತೀಕ್ಷ್ಣವಾದ ಬುದ್ಧಿವಂತಿಕೆಯಿಂದ ಶ್ರೀಮಂತರಾಗಿರುತ್ತಾರೆ ಮತ್ತು ಜೀವನದಲ್ಲಿ ಸಾಕಷ್ಟು ಹಣವನ್ನು ಇವರು ಸಂಪಾದಿಸುತ್ತಾರೆ.

ವೃಷಭ ರಾಶಿ
ವೃಷಭ ರಾಶಿಯ ಜನರೂ ಕೂಡ ಹುಟ್ಟಿನಿಂದಲೇ ರಾಜಯೋಗ ಪಡೆದುಕೊಂಡು ಬಂದಿರುತ್ತಾರೆ. ಈ ಜನರು ತುಂಬಾ ಶ್ರಮಜೀವಿಗಳು ಮತ್ತು ಅವರು ಅದರ ಸಂಪೂರ್ಣ ಲಾಭವನ್ನು ಸಹ ಪಡೆಯುತ್ತಾರೆ. ಈ ಜನರು ಕೆಲಸದ ಸ್ಥಳದಲ್ಲಿ ಸಾಕಷ್ಟು ಯಶಸ್ಸನ್ನು ಸಾಧಿಸುತ್ತಾರೆ. ಈ ಜನರಿಗೆ ಜೀವನದಲ್ಲಿ ಭೌತಿಕ ಸಂತೋಷದ ಸಾಧನಗಳ ಕೊರತೆ ಇರುವುದಿಲ್ಲ.

ಇದನ್ನೂ ಓದಿ-ಈ ಜನರ ಸ್ಪರ್ಶದಿಂದ ಮಣ್ಣು ಕೂಡ ಹೊನ್ನಾಗುತ್ತದೆ, ಕಾರಣ ತುಂಬಾ ರೋಚಕವಾಗಿದೆ!

ಸಿಂಹ ರಾಶಿ
ಸಿಂಹ ರಾಶಿಯ ಜನರ ಭವಿಷ್ಯ ರಾಜರಿಗಿಂತ ಕಡಿಮೆಯಿರುವುದಿಲ್ಲ. ಈ ಜನರ ಜಾತಕದಲ್ಲಿ ರಾಜಯೋಗದಂತಹ ಅನೇಕ ಶುಭ ಯೋಗಗಳಿವೆ. ಇವರು ಜೀವನದಲ್ಲಿ ಧನ-ಸಂಪತ್ತು, ಸಂತೋಷ ಮತ್ತು ಸುಖ-ಸಮೃದ್ಧಿ ಎಲ್ಲವನ್ನೂ ಪಡೆಯುತ್ತಾರೆ. ಸಿಂಹ ರಾಶಿಯ ಜನರು ಯಾವುದೇ ಸಂಗತಿಗಳಿಗಾಗಿ ಎಂದಿಗೂ ಹಂಬಲಿಸುವುದಿಲ್ಲ. ಇವರಲ್ಲಿ ಆತ್ಮವಿಶ್ವಾಸದ ಕೊರತೆ ಇರುವುದಿಲ್ಲ ಮತ್ತು ಇವರು ತಮ್ಮ ಪ್ರತಿಯೊಂದು ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸುತ್ತಾರೆ.

ಇದನ್ನೂ ಓದಿ-ಇಪ್ಪತ್ನಾಲ್ಕು ಗಂಟೆಗಳಲ್ಲಿ ನಿಮ್ಮನ್ನು ಸಾಹುಕಾರನನ್ನಾಗಿಸುತ್ತವೆ ಅರಿಶಿನದ ಈ ಉಪಾಯಗಳು!

ಕುಂಭ ರಾಶಿ
ಅಕ್ವೇರಿಯಸ್ ಜನರು ಅದೃಷ್ಟದ ವಿಷಯದಲ್ಲಿ ಇತರ ರಾಶಿಗಳ ಜನರಿಗೆ ಯಾವುದಕ್ಕೂ ಕಡಿಮೆ ಇರುವುದಿಲ್ಲ. ಈ ಜನರ ಜೀವನವು ರಾಜಯೋಗ ಹೊಂದಿರುವವರಿಗಿಂತ ಕಡಿಮೆ ಇರುವುದಿಲ್ಲ. ಅದೃಷ್ಟದ ಆಧಾರದ ಮೇಲೆ, ಅವರು ಎಲ್ಲವನ್ನೂ ಸುಲಭವಾಗಿ ಪಡೆಯುತ್ತಾರೆ. ಇವರು ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ಒಮ್ಮೆ ನಿರ್ಧರಿಸಿದರೆ, ಅದನ್ನು ಎಂತಹ ಪರಿಸ್ಥಿತಿಯಲ್ಲೂ ಕೂಡ ಪೂರ್ಣಗೊಳಿಸುತ್ತಾರೆ. ಎಲ್ಲಾ ಸಣ್ಣ ಮತ್ತು ದೊಡ್ಡ ಕೆಲಸಗಳಲ್ಲಿ ಇವರಿಗೆ ಯಶಸ್ಸು ಸಿಗುತ್ತದೆ. ಇವರ ಜೀವನದಲ್ಲಿ ಸಾಧನ ಸೌಕರ್ಯಗಳಿಗೆ ಕೊರತೆ ಇರುವುದಿಲ್ಲ ಮತ್ತು ಇವರು ಐಷಾರಾಮಿ ಜೀವನ ಸಾಗಿಸುತ್ತಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News