Astrology Tips: ಹಿಂದೂ ಧರ್ಮದಲ್ಲಿ ಹಣೆಯ ಮೇಲೆ ತಿಲಕವನ್ನು ಇಟ್ಟುಕೊಳ್ಳುವುದಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಹಣೆಯ ಮೇಲೆ ತಿಲಕವನ್ನು ಅನ್ವಯಿಸುವುದರಿಂದ ವ್ಯಕ್ತಿಯಲ್ಲಿ ಧನಾತ್ಮಕತೆಯ ಭಾವನೆ ಬರುತ್ತದೆ ಮತ್ತು ಜಾತಕದಲ್ಲಿರುವ ಉಗ್ರ ಗ್ರಹಗಳನ್ನು ಅದು ಶಾಂತಗೊಳಿಸುತ್ತದೆ ಎಂದು ಹಿಂದೂ ಧರ್ಮವು ನಂಬುತ್ತದೆ. ಕೆಂಪು ತಿಲಕವನ್ನು ಸಾಮಾನ್ಯವಾಗಿ ಶುಭ ಅಥವಾ ಮಂಗಳಕರ ಸಂದರ್ಭಗಳಲ್ಲಿ ಹಣೆಗೆ ಅನ್ವಯಿಸಲಾಗುತ್ತದೆ, ವಿಶೇಷ ಹಬ್ಬ-ಹರಿದಿನಗಳಲ್ಲಿ ಅನ್ವಯಿಸಲಾಗುತ್ತದೆ. ತಿಲಕವನ್ನು ಹಚ್ಚುವುದರಿಂದ ವ್ಯಕ್ತಿತ್ವದಲ್ಲಿ ಸಾತ್ವಿಕತೆಯು ಪ್ರತಿಫಲಿಸುತ್ತದೆ, ಆದರೆ ಕೆಲ ರಾಶಿಯವರು ಮರೆತೂ ಕೂಡ ಹಣೆಗೆ ಕೆಂಪು ಬಣ್ಣದ ತಿಲಕವನ್ನು ಹಚ್ಚಬಾರದು ಎನ್ನಲಾಗಿದೆ. ಏಕೆ ತಿಳಿದುಕೊಳ್ಳೋಣ ಬನ್ನಿ .
ಕೆಂಪು ತಿಲಕವನ್ನು ಏಕೆ ಹಚ್ಚಬಾರದು?
ಜ್ಯೋತಿಷ್ಯದಲ್ಲಿ, ಗ್ರಹಗಳು ಬಣ್ಣಗಳೊಂದಿಗೆ ಸಂಬಂಧ ಹೊಂದಿವೆ ಎಂದು ಹೇಳಲಾಗಿದೆ. ನಮ್ಮ ಜೀವನದಲ್ಲಿ ಸಂತೋಷ ಮತ್ತು ದುಃಖದ ಆಗಮನ ರಾಶಿ ಮತ್ತು ಗ್ರಹಗಳ ಚಲನೆಯನ್ನು ಅವಲಂಬಿಸಿರುತ್ತದೆ. ಇದರೊಂದಿಗೆ, ಗ್ರಹಗಳಿಗೆ ಸಂಬಂಧಿಸಿದ ಬಣ್ಣಗಳು ಸಹ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಜ್ಯೋತಿಷ್ಯದ ಪ್ರಕಾರ, ಕೆಂಪು ಬಣ್ಣವು ಮಂಗಳ ಗ್ರಹಕ್ಕೆ ಸಂಬಂಧಿಸಿದೆ. ಕೆಂಪು ಬಣ್ಣವನ್ನು ಅತ್ಯಂತ ಶಕ್ತಿಶಾಲಿ ಬಣ್ಣವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ, ಮಂಗಳವನ್ನು ಧೈರ್ಯ ಮತ್ತು ಶಕ್ತಿಯ ಗ್ರಹವೆಂದು ಪರಿಗಣಿಸಲಾಗುತ್ತದೆ. ಇವುಗಳನ್ನು ಕ್ರೂರ ಗ್ರಹ ಎಂದೂ ಕೂಡ ಕರೆಯಲಾಗುತ್ತಿತ್ತು. ಮಂಗಳನಂತೆಯೇ ಕೆಂಪು ಬಣ್ಣವು ಉತ್ಸಾಹ ಮತ್ತು ಕೋಪವನ್ನು ಪ್ರತಿನಿಧಿಸುತ್ತದೆ.
ಇವರು ಕೆಂಪು ತಿಲಕವನ್ನು ಅನ್ವಯಿಸಬಾರದು
ಜ್ಯೋತಿಷ್ಯದಲ್ಲಿ, ಮಂಗಳನಿಗೆ ಮೇಷ ಹಾಗೂ ವೃಶ್ಚಿಕ ರಾಶಿಗಳ ಅಧಿಪತಿ ಗ್ರಹ ಎಂದು ಪರಿಗಣಿಸಲಾಗಿದೆ. ಗ್ರಹಗಳು ಅವುಗಳ ತನ್ನ ಅಧಿಪತ್ಯವಿರುವ ರಾಶಿಗಳ ಮೇಲೆ ಗರಿಷ್ಠ ಪರಿಣಾಮವನ್ನು ಬೀರುತ್ತವೆ. ಮಂಗಳದ ಬಣ್ಣವು ಕೆಂಪು ಬಣ್ಣದ್ದಾಗಿದೆ, ಹೀಗಾಗಿ ಕೆಂಪು ಬಣ್ಣವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹೀಗಿರುವಾಗ ಮೇಷ ಮತ್ತು ವೃಶ್ಚಿಕ ರಾಶಿಯವರ ಜಾತಕದಲ್ಲಿ ಮಂಗಳವು ನೀಚ ಹಾಗೂ ಅಶುಭ ಸ್ಥಾನದಲ್ಲಿದ್ದರೆ ಈ ಜಾತಕರಲ್ಲಿ ಉತ್ಸಾಹ, ಕೋಪ ಹೆಚ್ಚಾಗಿರುತ್ತದೆ. ಅಂತಹವರಿಗೆ ಕೆಂಪು ಬಣ್ಣವು ಶುಭವಲ್ಲ. ಕೆಂಪು ಬಣ್ಣವು ಈ ಜನರಿಗೆ ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಹೀಗಾಗಿ ಈ ರಾಶಿಗಳ ಜನರು ಆದಷ್ಟು ಕೆಂಪು ಬಣ್ಣವನ್ನು ತಪ್ಪಿಸಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ಮತ್ತು ವೃಶ್ಚಿಕ ರಾಶಿಯವರು ಈ ಸಂದರ್ಭಗಳಲ್ಲಿ ಕೆಂಪು ತಿಲಕವನ್ನು ಹಚ್ಚಬಾರದು.
ಇದನ್ನೂ ಓದಿ-December ಮೊದಲ ವಾರದಿಂದಲೇ ಈ ರಾಶಿಯ ಜನರಿಗೆ ಸಾಕಷ್ಟು ಪ್ರೀತಿಯ ಜೊತೆಗೆ ಧನ ಸಂಪತ್ತು ಲಭಿಸಲಿದೆ
ಶನಿದೇವನು ಕೆಂಪು ಬಣ್ಣದಿಂದ ಕೋಪಗೊಳ್ಳುತ್ತಾನೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಮತ್ತು ಮಂಗಳ ಗ್ರಹಗಳು ಪರರ್ಪರ ವಿರುದ್ಧ ಗ್ರಹಗಳಾಗಿವೆ. ಮತ್ತೊಂದೆಡೆ, ಶನಿಯು ಕಪ್ಪು ಬಣ್ಣವನ್ನು ಪ್ರೀತಿಸುತ್ತಾನೆ ಮತ್ತು ಶನಿಯು ಕೆಂಪು ಬಣ್ಣವನ್ನು ದ್ವೇಷಿಸುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ, ಶನಿ, ಮಕರ ಮತ್ತು ಕುಂಭ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ರಾಶಿಗಳ ಜನರಿಗೆ ಕೆಂಪು ಬಣ್ಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ-Kajal Remedies: ಕಾಡಿಗೆ ದಾನ ಮಾಡುವುದರ ಈ ಲಾಭಗಳು ನಿಮಗೆ ತಿಳಿದಿವೆಯೇ?
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.