Unique Holi: ಭಾರತದ ಈ ವಿಶಿಷ್ಟ ಗ್ರಾಮದಲ್ಲಿ ಹೋಳಿ ಹಬ್ಬದಂದು ಕಲ್ಲುಗಳ ಸುರಿಮಳೆಯಾಗುತ್ತದೆ

Unique Holi - ದೇಶಾದ್ಯಂತ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇನ್ನೊಂದೆಡೆ ಝಾರ್ಖಂಡ್ ರಾಜ್ಯದ ಲೋಹರ್ದಗಾ ಗ್ರಾಮದಲ್ಲಿ 'ಪತ್ಥರ್ ಮಾರ್ ಹೋಳಿ'ಹಬ್ಬ ಆಚರಿಸಲಾಗುತ್ತದೆ (ಪರಸ್ಪರ ಕಲ್ಲು ಹೊಡೆದು ಹೋಳಿ ಹಬ್ಬ ಆಚರಣೆ). ಈ ಆಚರಣೆಯ ವೇಳೆ ಭೂಮಿಯಲ್ಲಿ ಹೂಳಲಾಗಿರುವ ಒಂದು ಕಂಬವನ್ನು ಕೂಡ ಕಿತ್ತುವ ಪ್ರಯತ್ನ ನಡೆಸಲಾಗುತ್ತದೆ. ಕಳೆದ ಹಲವು ವರ್ಷಗಳಿಂದ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.  

Written by - Nitin Tabib | Last Updated : Mar 18, 2022, 08:27 PM IST
  • ಝಾರ್ಖಂಡ್ ನ ಗ್ರಾಮವೊಂದರಲ್ಲಿ ವಿಶಿಷ್ಟ ಹೋಳಿ ಹಬ್ಬ ಆಚರಿಸಲಾಗುತ್ತದೆ.
  • ನೆಲದಲ್ಲಿ ಹೂಳಲಾದ ಕಂಬವನ್ನು ಕಿತ್ತುವ ಪ್ರಯತ್ನ ಮಾಡಲಾಗುತ್ತದೆ.

    ಈ ವೇಳೆ ಜನರು ಪರಸ್ಪರರಿಗೆ ಕಲ್ಲು ಹೊಡೆಯುತ್ತಾರಂತೆ
Unique Holi: ಭಾರತದ ಈ ವಿಶಿಷ್ಟ ಗ್ರಾಮದಲ್ಲಿ ಹೋಳಿ ಹಬ್ಬದಂದು ಕಲ್ಲುಗಳ ಸುರಿಮಳೆಯಾಗುತ್ತದೆ title=
Unique Holi (File Photo)

ರಾಂಚಿ: Stone Pelting Holi - ಜಾರ್ಖಂಡ್‌ನ (Jharkhand ) ಲೋಹರ್ದಗಾ (Lohardaga) ಜಿಲ್ಲೆಯ ಬರ್ಹಿ ಚಟಕ್‌ಪುರ್ ಗ್ರಾಮದಲ್ಲಿ (Chatakpur Village) ವಿಶಿಷ್ಟ ಹೋಳಿ ಹಬ್ಬ ಆಚರಿಸಲಾಗುತ್ತದೆ. ಇಲ್ಲಿ ಹೋಳಿ (Holi 2022) ದಿನದಂದು ಗದ್ದೆಯಲ್ಲಿ ಹೂತಿಟ್ಟಿರುವ ಮರದ ಕೊಂಬೆಯನ್ನು (ಕಂಬ) ಕಿತ್ತು ಹಾಕಲು ಹಲವರು ಪ್ರಯತ್ನಿಸುತ್ತಾರೆ ಮತ್ತು ಈ ವೇಳೆ ಗದ್ದೆಯಲ್ಲಿ ನೆರೆದಿದ್ದ ಜನಸಮೂಹ ಅವರ ಮೇಲೆ 'ಢೇಲಾ' (ಅಂದರೆ ಕಲ್ಲು) ಎಸೆಯುತ್ತಾರೆ, ಅಲ್ಲಿ ಕಂಬ ಕಿತ್ತು ಹಾಕುವಲ್ಲಿ ಯಶಸ್ವಿಯಾಗುವವರನ್ನು ಅದೃಷ್ಟಶಾಲಿಗಳು ಎಂದು ಪರಿಗಣಿಸಲಾಗುತ್ತದೆ.

ಸಹೋದರತ್ವದ ಭಾವನೆಯಿಂದ ಈ ಸಂಪ್ರದಾಯ ಆಚರಿಸಲಾಗುತ್ತದೆ
ಕಂಬ ಕಿತ್ತು ಹಾಕುವ ಮತ್ತು 'ಢೇಲಾ'  ಎಸೆಯುವ ಈ ಸಂಪ್ರದಾಯದ ಹಿಂದೆ ಯಾವುದೇ ದುರುದ್ದೇಶ ಅಥವಾ ದ್ವೇಷ ಇರುವುದಿಲ್ಲ, ಆದರೆ ಜನರು ಈ ಸಂಪ್ರದಾಯವನ್ನು ಸಹೋದರತ್ವದ ಮನೋಭಾವದಿಂದ ಆಟದಂತೆ ಅನುಸರಿಸುತ್ತಾರೆ. ಕಳೆದ ಹಲವು ವರ್ಷಗಳಿಂದ ಈ ಬರ್ಹಿ ಚಟಕಪುರದ ಹೋಳಿಯನ್ನು ನೋಡಲು ಲೋಹರ್ದಗಾ ಹೊರತುಪಡಿಸಿ ಸುತ್ತಮುತ್ತಲಿನ ಜಿಲ್ಲೆಯಿಂದ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಆದರೆ ಈ ಗ್ರಾಮದ ಜನರಿಗೆ ಮಾತ್ರ ಇದರಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಲೋಹರ್ದಗಾ ಹಿರಿಯ ಪತ್ರಕರ್ತ ಸಂಜಯಕುಮಾರ್ ಹೇಳುತ್ತಾರೆ.

ನೂರಾರು ವರ್ಷಗಳಿಂದ ಈ ಸಂಪ್ರದಾಯ ಆಚರಿಸಿಕೊಂಡು ಬರಲಾಗುತ್ತಿದೆ
ಲೋಹರ್ದಗಾ ಗ್ರಾಮದಲ್ಲಿ ಕಳೆದ ನೂರಾರು ವರ್ಷಗಳಿಂದ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಂಪ್ರದಾಯ ಯಾವಾಗ ಪ್ರಾರಂಭವಾಯಿತು ಮತ್ತು ಅದರ ಹಿಂದಿನ ಕಥೆ ಏನು ಎಂಬುದು ಯಾರಿಗೂ ತಿಳಿದಿಲ್ಲ. ಕಾಮ ದಹನದ ದಿನದಂದು ಪೂಜೆಯ ನಂತರ, ಗ್ರಾಮದ ಅರ್ಚಕರು ಕಂಬವನ್ನು ನೆಲದಲ್ಲಿ ಹೂಳುತ್ತಾರೆ ಮತ್ತು ಮರುದಿನ ಗ್ರಾಮದ ಎಲ್ಲಾ ಜನರು ಅದನ್ನು ಕಿತ್ತುಹಾಕುವ ಮತ್ತು ಕಲ್ಲು ತೋರುವ ಆಟದಲ್ಲಿ ಪಾಲ್ಗೊಳ್ಳುತ್ತಾರೆ.

ಇದನ್ನೂ ಓದಿ-Holi ಹಬ್ಬ ಹಾಗೂ ಬಣ್ಣಗಳ ಕುರಿತಾದ ಈ ಕನಸು ಬಿದ್ದರೆ ಏನರ್ಥ?

ಸುಖ ಸೌಭಾಗ್ಯ ಪ್ರಾಪ್ತಿಯಾಗುತ್ತದೆ
ಕಲ್ಲು ತೂರಾಟಕ್ಕೆ ಒಳಗಾಗುವ ಭಯವನ್ನು ಬಿಟ್ಟು ಕಂಬ ಕಿತ್ತು ಹಾಕಲು ಮುಂದಾದವರಿಗೆ ಸುಖ, ಸೌಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬುದು ಲೋಹರ್ದಗಾ ಗ್ರಾಮದ ಜನರ ನಂಬಿಕೆ. ಅವರು ಸತ್ಯದ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ಅಲ್ಲಿ ಪರಿಗಣಿಸಲಾಗುತ್ತದೆ. ಈ ಕಲ್ಲು ತೂರಾಟದ ಹೋಳಿಯಲ್ಲಿ ಇದುವರೆಗೆ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಗ್ರಾಮದ ಜನರು ಹೇಳುತ್ತಾರೆ.

ಇದನ್ನೂ ಓದಿ-ಹೊಳಿ ಹಬ್ಬ: ರಾಶಿಚಕ್ರದ ಪ್ರಕಾರ ಈ ಮಂತ್ರಗಳನ್ನು ಪಠಿಸಿದರೆ ಅದೃಷ್ಟ ಖುಲಾಯಿಸಲಿದೆ

ಮುಸ್ಲಿಮರೂ ಪಾಲ್ಗೊಳ್ಳುತ್ತಾರೆ
ಈ ಆಟದ ವಿಶೇಷತೆ ಎಂದರೆ ಈ ಆಟದಲ್ಲಿ ಗ್ರಾಮದ ಮುಸ್ಲಿಮರೂ ಕೂಡ ಭಾಗವಹಿಸುತ್ತಾರೆ. ಇಂದಿನ ಢೇಲಾ ಮಾರ್ ಹೋಳಿ ನೋಡಲು ಬೇರೆ ಜಿಲ್ಲೆಗಳಿಂದಲೂ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. 

ಇದನ್ನೂ ಓದಿ-Holi 2022 : ಅಭಿಮಾನಿಗಳಿಗೆ ಹೋಳಿ ಉಡುಗೊರೆ ನೀಡಿದ ಎಂಎಸ್ ಧೋನಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News