Vastu Tips: ಮನೆಯ ಮುಖ್ಯದ್ವಾರದಲ್ಲಿ ಈ 3 ವಸ್ತುಗಳಿದ್ದರೆ ಕುಟುಂಬದಲ್ಲಿ ಪ್ರೀತಿ ಹೆಚ್ಚಲಿದೆ!

Vastu Tips: ನಿಮ್ಮ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಆರೋಗ್ಯವನ್ನು ಪಡೆಯಲು ನೀವು ಬಯಸಿದರೆ, ನಿಮ್ಮ ಮನೆಯ ಮುಖ್ಯ ಬಾಗಿಲಲ್ಲಿ ಈ ವಸ್ತುಗಳನ್ನು ಇರಿಸಿ. ಅವುಗಳನ್ನು ಬಳಸುವುದರಿಂದ ಮನೆಯಲ್ಲಿ ಸಂತೋಷ ಮಾತ್ರವಲ್ಲ, ಧನಾತ್ಮಕ ಶಕ್ತಿಯನ್ನು ತರಬಹುದು.

Written by - Zee Kannada News Desk | Last Updated : Feb 22, 2022, 01:38 PM IST
  • ಮನೆಯಲ್ಲಿ ಶಾಂತಿ, ಸಮೃದ್ಧಿಗಾಗಿ ಮನೆಯ ಮುಖ್ಯ ಬಾಗಿಲಿಗೆ ಮಂಗಳ ಕಲಶವನ್ನು ಹಾಕಬೇಕು
  • ಮಂಗಳ ಕಲಶವು ಸಮೃದ್ಧಿಯ ಸಂಕೇತವಾಗಿದೆ
  • ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ಬಾಗಿಲಿಗೆ ಸ್ವಸ್ತಿಕ್ (Swastika) ಉತ್ತಮ ಆಯ್ಕೆ
Vastu Tips: ಮನೆಯ ಮುಖ್ಯದ್ವಾರದಲ್ಲಿ ಈ 3 ವಸ್ತುಗಳಿದ್ದರೆ ಕುಟುಂಬದಲ್ಲಿ ಪ್ರೀತಿ ಹೆಚ್ಚಲಿದೆ! title=
Vastu tips for happy, prosperity

Vastu Tips: ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಸಂತೋಷದ ವಾತಾವರಣ ಇರಬೇಕು ಮತ್ತು ಎಲ್ಲರೂ ಆರೋಗ್ಯವಾಗಿರಬೇಕು ಎಂದು ಬಯಸುತ್ತಾರೆ . ಇದರೊಂದಿಗೆ ಅವರ ಮನೆಯಲ್ಲಿ ಶಾಂತಿ, ಸುಖ-ಸಮೃದ್ಧಿ ನೆಲಸಬೇಕು ಎಂದು ಇಚ್ಚಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮನೆ ಬಾಗಿಲಲ್ಲಿ ಕೆಲವು ವಸ್ತುಗಳನ್ನು ಇಟ್ಟರೆ ಈ ಆಸೆ ಈಡೇರುತ್ತದೆ ಎಂದು ನಿಮಗೆ ತಿಳಿದಿದೆಯೇ?

 ನಿಮ್ಮ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಆರೋಗ್ಯವನ್ನು ಪಡೆಯಲು ನೀವು ಬಯಸಿದರೆ, ನಿಮ್ಮ ಮನೆಯ ಮುಖ್ಯ ಬಾಗಿಲಲ್ಲಿ ಈ ವಸ್ತುಗಳನ್ನು ಇರಿಸಿ. ಅವುಗಳನ್ನು ಬಳಸುವುದರಿಂದ ಮನೆಯಲ್ಲಿ ಸಂತೋಷ ಮಾತ್ರವಲ್ಲ, ಧನಾತ್ಮಕ ಶಕ್ತಿಯನ್ನು ತರಬಹುದು. ನಿಮ್ಮ ವಾಸ್ತು ಶಾಸ್ತ್ರದ ಪ್ರಕಾರ ಮನೆಯ (Vastu For Home) ಮುಖ್ಯ ಬಾಗಿಲಿಗೆ ಯಾವ ವಸ್ತುವನ್ನು ಇರಿಸಿದರೆ ಒಳಿತು ಎಂದು ತಿಳಿಯಲು ಮುಂದೆ ಓದಿ...
 
 ಇದನ್ನೂ ಓದಿ- Guru Ast: ಕುಂಭ ರಾಶಿಯಲ್ಲಿ ಅಸ್ತಮಿಸಲಿರುವ ಗುರು; ಮುಂದಿನ 28 ದಿನ ಈ 6 ರಾಶಿಯವರಿಗೆ ಅದೃಷ್ಟ
 
 ಮುಖ್ಯ ದ್ವಾರದಲ್ಲಿ ಏನು ಹಾಕಬೇಕು?

 >> ಮನೆಯಲ್ಲಿ ಶಾಂತಿ, ಸಮೃದ್ಧಿಗಾಗಿ ಮನೆಯ ಮುಖ್ಯ ಬಾಗಿಲಿಗೆ ಮಂಗಳ ಕಲಶವನ್ನು ಹಾಕಬೇಕು. ಮಂಗಳ ಕಲಶವು ಸಮೃದ್ಧಿಯ ಸಂಕೇತವಾಗಿದೆ. ಇದು ಶುಕ್ರ ಮತ್ತು ಚಂದ್ರ ಇಬ್ಬರ ಸಂಕೇತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಅಗಲವಾದ ಬಾಯಿಯ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಮತ್ತು ಅದರಲ್ಲಿ ಕೆಲವು ಹೂವುಗಳನ್ನು ಹಾಕಿ. ಹೀಗೆ ಮಾಡುವುದರಿಂದ ಮನೆಯೊಳಗೆ ಪಾಸಿಟಿವ್ ಎನರ್ಜಿ ಬಂದು ನೆಗೆಟಿವ್ ಎನರ್ಜಿ ದೂರವಾಗುತ್ತದೆ.
 
 ಇದನ್ನೂ ಓದಿ- ಮಹಾಶಿವರಾತ್ರಿಯಂದು ಬದಲಾಗಲಿದೆ ಈ 4 ರಾಶಿಯವರ ಅದೃಷ್ಟ ! ಇಡೀ ತಿಂಗಳು ಆಗಲಿದೆ ಧನ ವೃಷ್ಠಿ
 
>> ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ಬಾಗಿಲಿಗೆ ಸ್ವಸ್ತಿಕ್ (Swastika) ಉತ್ತಮ ಆಯ್ಕೆಯಾಗಿದೆ ಎಂದು ಸಾಬೀತುಪಡಿಸಬಹುದು. ನೀವು ಮುಖ್ಯ ಬಾಗಿಲಿನ ಎರಡೂ ಬದಿಗಳಲ್ಲಿ ಕೆಂಪು ಬಣ್ಣದ ಸ್ವಸ್ತಿಕವನ್ನು ಮಾಡಬೇಕು ಮತ್ತು ಮಧ್ಯದಲ್ಲಿ ನೀಲಿ ಸ್ವಸ್ತಿಕವನ್ನು ಮಾಡಬೇಕು. ಹೀಗೆ ಮಾಡುವುದರಿಂದ ವಿಶೇಷ ಲಾಭವನ್ನು ಪಡೆಯಬಹುದು ಎನ್ನಲಾಗುವುದು.

>> ವಿಘ್ನ ವಿನಾಶಕ ಗಣೇಶನ ಮೂರ್ತಿಯನ್ನು ಮುಖ್ಯ ಬಾಗಿಲಿನಲ್ಲಿ ಇಡುವುದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಮುಖ್ಯ ಬಾಗಿಲಲ್ಲಿ ಗಣೇಶನ ವಿಗ್ರಹವನ್ನು ಇಡಬಹುದು. ಆದರೆ ವಿಗ್ರಹ ಅಥವಾ ಚಿತ್ರವನ್ನು ಮನೆಯೊಳಗೆ ಇಡಬೇಕು ಎಂಬುದನ್ನು ನೆನಪಿನಲ್ಲಿಡಿ. ದೇವರ ವಿಗ್ರಹ ಅಥವಾ ದೇವರ ಫೋಟೋವನ್ನು ಮನೆಯ ಹೊರಗೆ ಹಾಕುವುದರಿಂದ ಹಣದ ನಷ್ಟವಾಗಬಹುದು.

ಸೂಚನೆ - ಈ ಲೇಖನದಲ್ಲಿ ನೀಡಲಾದ ಮಾಹಿತಿಯು  ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್

Trending News