ಡಿ.30ಕ್ಕೆ ʼಜಮಾಲಿಗುಡ್ಡʼದಲ್ಲಿ ಸಿಗ್ತಾರೆ ಡಾಲಿ ಧನಂಜಯ್‌..!

ಸ್ಯಾಂಡಲ್‌ವುಡ್‌ ಈ ವರ್ಷದ ಮೋಸ್ಟ್‌ ಬ್ಯುಸಿಯೆಸ್ಟ್‌ ನಟ ಅಂದ್ರೆ ಡಾಲಿ ಧನಂಜಯ್‌. ಇದೀಗ ʼಹೆಡ್‌ಬುಷ್‌ʼ ಯಶಸ್ಸಿನ ಖುಷಿಯಲ್ಲಿರುವ ನಟರಾಕ್ಷಸನ ವರ್ಷದ ಕೊನೆಯ ಸಿನಿಮಾ, ʼಒನ್ಸ್‌ ಅಪಾನ್‌ ಏ ಟೈಮ್‌ ಇನ್‌ ಜಮಾಲಿಗುಡ್ಡʼ ಡಿ.30ರಂದು ತೆರೆಗೆ ಬರಲು ಸಿದ್ಧವಾಗಿದೆ.

Written by - Krishna N K | Last Updated : Nov 14, 2022, 10:26 AM IST
  • ನಟರಾಕ್ಷಸನ ವರ್ಷದ ಕೊನೆಯ ಸಿನಿಮಾ ಬಿಡುಗಡೆ ಡೇಟ್‌ ಫಿಕ್ಸ್‌
  • ಡಿ.30ಕ್ಕೆ ಡಾಲಿ ಧನಂಜಯ್‌ ಅಭಿನಯದ ʼಜಮಾಲಿಗುಡ್ಡʼ ರಿಲೀಸ್‌
  • ʼಒನ್ಸ್‌ ಅಪಾನ್‌ ಏ ಟೈಮ್‌ ಇನ್‌ ಜಮಾಲಿಗುಡ್ಡʼ ಡಿ.30ರಂದು ತೆರೆಗೆ
ಡಿ.30ಕ್ಕೆ ʼಜಮಾಲಿಗುಡ್ಡʼದಲ್ಲಿ ಸಿಗ್ತಾರೆ ಡಾಲಿ ಧನಂಜಯ್‌..! title=

ಬೆಂಗಳೂರು : ಸ್ಯಾಂಡಲ್‌ವುಡ್‌ ಈ ವರ್ಷದ ಮೋಸ್ಟ್‌ ಬ್ಯುಸಿಯೆಸ್ಟ್‌ ನಟ ಅಂದ್ರೆ ಡಾಲಿ ಧನಂಜಯ್‌. ಇದೀಗ ʼಹೆಡ್‌ಬುಷ್‌ʼ ಯಶಸ್ಸಿನ ಖುಷಿಯಲ್ಲಿರುವ ನಟರಾಕ್ಷಸನ ವರ್ಷದ ಕೊನೆಯ ಸಿನಿಮಾ, ʼಒನ್ಸ್‌ ಅಪಾನ್‌ ಏ ಟೈಮ್‌ ಇನ್‌ ಜಮಾಲಿಗುಡ್ಡʼ ಡಿ.30ರಂದು ತೆರೆಗೆ ಬರಲು ಸಿದ್ಧವಾಗಿದೆ.

ಕನ್ನಡ ಇಂಡಸ್ಟ್ರಿಯ ಮೋಸ್ಟ್‌ ಲಕ್ಕಿಯೆಸ್ಟ್‌ ವೀಕ್‌ ಅಂತಲೇ ಪಾಪ್ಯುಲರ್‌ ಆಗಿರೋ ಡಿಸೆಂಬರ್‌ ಕೊನೆಯವಾರದಲ್ಲಿ ರಿಲೀಸ್‌ ಆಗ್ತಾ ಇರೋ ʼಜಮಾಲಿಗುಡ್ಡʼ, ತನ್ನ ವಿಭಿನ್ನ ಮೇಕಿಂಗ್‌, ಸಾಂಗ್‌ ಎಲ್ಲಕ್ಕೂ ಮೊದಲು ಸಿನಿಮಾದ ಟೈಟಲ್‌ನಿಂದ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಬ್ಯಾಕ್‌ ಟು ಬ್ಯಾಕ್‌ ಆಕ್ಷನ್‌ & ರೊಮ್ಯಾಂಟಿಕ್‌ ಸಿನಿಮಾಗಳಲ್ಲಿ ನಟಿಸ್ತಾ ಇರೋ ಡಾಲಿ ಧನಂಜಯ್‌, ಮೊದಲ ಬಾರಿಗೆ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ತಾ ಇದ್ದಾರೆ ಅವರ ಫ್ಯಾನ್ಸ್‌ಗೆ ಖುಷಿ ನೀಡಿದೆ.

ಇದನ್ನೂ ಓದಿ: ಸಾನಿಯಾ - ಶೋಯೆಬ್ ವಿಚ್ಛೇದನ ವಿಚಾರದಲ್ಲಿ ಬಿಗ್‌ ಟ್ವಿಸ್ಟ್!?

ಕನ್ನಡ ಹಾಗೂ ತೆಲುಗಿನಲ್ಲಿ ತೆರೆಗೆ ಬರ್ತಾ ಇರೋ ಸಿನಿಮಾದಲ್ಲಿ ಡಾಲಿ ಧನಂಜಯ್‌ಗೆ ಜೊತೆಗೆ ಅದಿತಿ ಪ್ರಭುದೇವ, ಬಾಲ ಕಲಾವಿದೆ ಪ್ರಾಣ್ಯ ರಾವ್‌, ಭಾವನಾ ರಾಮಯ್ಯ ಮುಂತಾದವರು ನಟಿಸಿದ್ದಾರೆ. ಕುಶಾಲ್‌ ಗೌಡ ನಿರ್ದೇಶನದಲ್ಲಿ ರೆಡಿಯಾಗಿರೋ ಸಿನಿಮಾಕ್ಕೆ ಮ್ಯಾಜಿಕಲ್‌ ಕಂಪೋಸರ್‌ ಅರ್ಜುನ್‌ ಜನ್ಯ ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ. ಈಗಾಗ್ಲೆ ಸಿನಿಮಾದ ʼಸಾಗಿದೆ ಹಾಡುʼ ಪಾಪ್ಯುಲರ್‌ ಆಗಿದೆ. ಶ್ರೀಹರಿ ನಿರ್ಮಾಣ ಮಾಡಿರೋ ಸಿನಿಮಾ ಮೂಲಕ ಡಾಲಿಯ ಮತ್ತೊಂದು ಅವತಾರ ಅನಾವರಣ ಆಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News