Viral Video: ಹೆಬ್ಬಾವನ್ನು ಸೆರೆಹಿಡಿಯಲು ಚಿಕನ್ ಆಮೀಷ, ಮುಂದೇನಾಯ್ತು? ವಿಡಿಯೋ ನೋಡಿ

Trending Video: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಇದುವರೆಗೆ 49 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 1 ಲಕ್ಷ 31 ಸಾವಿರಕ್ಕೂ ಹೆಚ್ಚು ಜನರು ಈ ಅಪಾಯಕಾರಿ ದೃಶ್ಯವನ್ನು ಲೈಕ್ ಮಾಡಿದ್ದಾರೆ.

Written by - Nitin Tabib | Last Updated : Nov 18, 2022, 03:44 PM IST
  • ಹೆಬ್ಬಾವನ್ನು ಬಲೆಗೆ ಬೀಳಿಸಲು ಕೋಳಿ ಮಾಂಸವನ್ನು ಬಳಸಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ನೀವು ನೋಡಬಹುದು.
  • ಹೆಬ್ಬಾವು ಕೋಳಿ ಮಾಂಸವನ್ನು ತಿನ್ನಲು ಅದರ ಕಡೆಗೆ ಹೋಗುತ್ತದೆ.
  • ಆದರೆ ಕೋಳಿ ಮಾಂಸದ ಬಳಿಗೆ ತಲುಪಲು ಹಾವು ನೀಲಿ ಬಣ್ಣದ ಪೈಪ್ ಮೂಲಕ ಹೋಗಬೇಕು.
Viral Video: ಹೆಬ್ಬಾವನ್ನು ಸೆರೆಹಿಡಿಯಲು ಚಿಕನ್ ಆಮೀಷ, ಮುಂದೇನಾಯ್ತು? ವಿಡಿಯೋ ನೋಡಿ title=
Trending Python Catch Video

Viral News: ಅನೇಕ ಅಪಾಯಕಾರಿ ಕಾಡು ಪ್ರಾಣಿಗಳ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುತ್ತವೆ. ಈ ವೀಡಿಯೊಗಳಲ್ಲಿ, ಕೆಲವೊಮ್ಮೆ ಪ್ರಾಣಿಗಳು ಪರಸ್ಪರ ಜಗಳವಾಡುವುದನ್ನು ಮತ್ತು ಕೆಲವೊಮ್ಮೆ ಜನರನ್ನು ಬೇಟೆಯಾಡುವುದನ್ನು ನೋಡಬಹುದು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ದೊಡ್ಡ ಹೆಬ್ಬಾವೊಂದನ್ನು  ಬಲೆ ಬೀಸಿ ಹಿಡಿಯಲಾಗುತ್ತದೆ. ಈ ದೊಡ್ಡ ಹೆಬ್ಬಾವನ್ನು ಬೇಟೆಯಾಡಲು ಬಹಳ ಬುದ್ಧಿವಂತಿಕೆಯಿಂದ ಬಲೆ ಬೀಸಲಾಗಿದೆ.

ಇದನ್ನೂ ಓದಿ-Viral Video: ಟೀ ಅಂಗಡಿಗೆ ಬಂದ ಸಾಂಬಾರ್ ಜಿಂಕೆ ಏನು ಮಾಡಿದೆ ನೋಡಿ

ಹೆಬ್ಬಾವನ್ನು ಬಲೆಗೆ ಬೀಳಿಸಲು ಕೋಳಿ ಮಾಂಸವನ್ನು ಬಳಸಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ನೀವು ನೋಡಬಹುದು. ಹೆಬ್ಬಾವು ಕೋಳಿ ಮಾಂಸವನ್ನು ತಿನ್ನಲು ಅದರ ಕಡೆಗೆ ಹೋಗುತ್ತದೆ. ಆದರೆ ಕೋಳಿ ಮಾಂಸದ ಬಳಿಗೆ ತಲುಪಲು ಹಾವು ನೀಲಿ ಬಣ್ಣದ ಪೈಪ್ ಮೂಲಕ ಹೋಗಬೇಕು. ಹೆಬ್ಬಾವು ಅದರೊಳಗೆ ಪ್ರವೇಶಿಸುತ್ತಿದ್ದಂತೆ ತಕ್ಷಣ ಅದರಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ.

ಇದನ್ನೂ ಓದಿ-Dangerous Stunt: ಪತ್ನಿಯನ್ನು ಬೈಕ್ ಮೇಲೆ ಕೂರಿಸಿ ಅಪಾಯಕಾರಿ ಸ್ಟಂಟ್ ಗಿಳಿದ ಭೂಪ... ವಿಡಿಯೋ ನೋಡಿ

ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ oddly Terrifying ಎಂಬ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ. 'ಲೈವ್ ಚಿಕನ್ ಬಳಸಿ ಹೆಬ್ಬಾವಿನ ಬೇಟೆ' ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. 49 ಲಕ್ಷಕ್ಕೂ ಹೆಚ್ಚು ಬಳಕೆದಾರರು ವೈರಲ್ ವೀಡಿಯೊವನ್ನು ವೀಕ್ಷಿಸಿದ್ದಾರೆ. ಈ ವಿಡಿಯೋವನ್ನು 1 ಲಕ್ಷ 31 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೋಗೆ ಜನರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ. ಅನೇಕ ಬಳಕೆದಾರರು ಇದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ, ಆದರೆ ಕೆಲ ಬಳಕೆದಾರರು ಇದನ್ನು ನಕಲಿ ಎಂದು ಕೂಡ ಕರೆಯುತ್ತಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News