ಈ ಎಲ್ಲಾ ಉಚಿತ ಸೌಲಭ್ಯಗಳೊಂದಿಗೆ ರೈಲ್ವೆ ನಡೆಸುತ್ತಿದೆ ರಾಮಾಯಣ ಯಾತ್ರೆ .! ಪ್ರಯಾಣದ ವೇಳಾಪಟ್ಟಿ ಹೀಗಿದೆ

Ramayana Yatra:ಈ ರೈಲ್ವೆ ಪ್ಯಾಕೇಜ್‌ನ ಹೆಸರು ಹೋಳಿ ರಾಮಾಯಣ ಯಾತ್ರೆ. ಇದರಲ್ಲಿ  ಅಯೋಧ್ಯೆ, ಸೀತಾಮರ್ಹಿ, ಜನಕ್‌ಪುರ, ಬಕ್ಸರ್, ಪ್ರಯಾಗರಾಜ್, ವಾರಣಾಸಿ ಮತ್ತು ಚಿತ್ರಕೂಟಕ್ಕೆ ಭೇಟಿ ನೀಡುವ ಅವಕಾಶ ಸಿಗಲಿದೆ.  ಸ್ವದೇಶ್ ದರ್ಶನ್ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸುವ ಅವಕಾಶವೂ ಇರುತ್ತದೆ. 

Written by - Ranjitha R K | Last Updated : Nov 22, 2022, 02:41 PM IST
  • ಈ ರೈಲ್ವೆ ಪ್ಯಾಕೇಜ್‌ನ ಹೆಸರು ಹೋಳಿ ರಾಮಾಯಣ ಯಾತ್ರೆ.
  • ಸ್ವದೇಶ್ ದರ್ಶನ್ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸುವ ಅವಕಾಶ ಇಲ್ಲಿರುತ್ತದೆ
  • ಯಾವ ಸ್ಥಳಗಳಿಗೆ ಭೇಟಿ ನೀಡಬಹುದು?
ಈ ಎಲ್ಲಾ ಉಚಿತ  ಸೌಲಭ್ಯಗಳೊಂದಿಗೆ ರೈಲ್ವೆ ನಡೆಸುತ್ತಿದೆ ರಾಮಾಯಣ ಯಾತ್ರೆ .! ಪ್ರಯಾಣದ ವೇಳಾಪಟ್ಟಿ ಹೀಗಿದೆ  title=
Ramayana Yatre

Ramayana Yatra : ಧಾರ್ಮಿಕ ಪ್ರವಾಸ ಕೊಗೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ರೈಲ್ವೆ ನಿಮಗಾಗಿ ವಿಶೇಷ ಪ್ಯಾಕೇಜ್ ಅನ್ನು ಹೊರ ತಂದಿದೆ. ಇದರ ಅಡಿಯಲ್ಲಿ ಅಯೋಧ್ಯೆ, ಸೀತಾಮರ್ಹಿ ಸೇರಿದಂತೆ ಹಲವು ಸ್ಥಳಗಳಿಗೆ ಪ್ರಯಾಣಿಸುವ ಅವಕಾಶ ಸಿಗಲಿದೆ. ರೈಲ್ವೆ ಹಮ್ಮಿಕೊಂಡಿರುವ ರಾಮಾಯಣ ಯಾತ್ರೆಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯಗಳನ್ನು ಒದಗಿಸಲಿದೆ.

ಯಾವ ಸ್ಥಳಗಳಿಗೆ ಭೇಟಿ ನೀಡಬಹುದು? : 
ಈ ರೈಲ್ವೆ ಪ್ಯಾಕೇಜ್‌ನ ಹೆಸರು ಹೋಳಿ ರಾಮಾಯಣ ಯಾತ್ರೆ. ಇದರಲ್ಲಿ ಅಯೋಧ್ಯೆ, ಸೀತಾಮರ್ಹಿ, ಜನಕ್‌ಪುರ, ಬಕ್ಸರ್, ಪ್ರಯಾಗರಾಜ್, ವಾರಣಾಸಿ ಮತ್ತು ಚಿತ್ರಕೂಟಕ್ಕೆ ಭೇಟಿ ನೀಡುವ ಅವಕಾಶ ಸಿಗಲಿದೆ.  ಸ್ವದೇಶ್ ದರ್ಶನ್ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸುವ ಅವಕಾಶವೂ ಇರುತ್ತದೆ. 

ಇದನ್ನೂ ಓದಿ : Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭಾರೀ ಕುಸಿತ!

ಸಿಗಲಿದೆ ಉಚಿತ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ  :
ಫೆಬ್ರವರಿ 18, 2023 ರಿಂದ  ಫೆಬ್ರವರಿ 26, 2023 ರವರೆಗೆ ಒಟ್ಟು 8 ದಿನಗಳವರೆಗೆ ಈ ಯಾತ್ರೆ ಇರಲಿದೆ. ಈ ಪ್ಯಾಕೇಜ್‌ನಲ್ಲಿ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ಸೌಲಭ್ಯವನ್ನು ಉಚಿತವಾಗಿ ನೀಡಲಾಗುವುದು.  

 

ಪ್ಯಾಕೇಜ್ ಬೆಲೆ ಎಷ್ಟು? :
ಈ ಪ್ಯಾಕೇಜ್‌ನಲ್ಲಿ, ಸ್ಟ್ಯಾಂಡರ್ಡ್ ಅಂದರೆ ಸ್ಲೀಪರ್ ಕ್ಲಾಸ್‌ಗೆ ಪ್ರತಿ ವ್ಯಕ್ತಿಗೆ 15,770 ರೂ. ಮತ್ತು ಕಂಫರ್ಟ್ ಕ್ಲಾಸ್‌ಗೆ ಪ್ರತಿ ವ್ಯಕ್ತಿಗೆ 18,575 ರೂ. ಪಾವತಿಸಬೇಕಾಗುತ್ತದೆ. ಇದಲ್ಲದೇ ಉಳಿದುಕೊಳ್ಳಲು ಹೋಟೆಲ್ ಸೌಲಭ್ಯಗಳು ಲಭ್ಯವಿದ್ದು, ಇದು ಡಬಲ್ ಮತ್ತು ಟ್ರಿಪಲ್ ಹಂಚಿಕೆಯ ಆಧಾರದ ಮೇಲೆ ಇರುತ್ತದೆ. ಇದಲ್ಲದೆ ದಿನಕ್ಕೆ 1 ಲೀಟರ್ ನೀರಿನ ಬಾಟಲ್  ನೀಡಲಾಗುತ್ತದೆ. 

ಇದನ್ನೂ ಓದಿ : Gold Price Today : ಅಗ್ಗವಾಯಿತು ಚಿನ್ನ ಬೆಳ್ಳಿ ದರ .!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News