ನವದೆಹಲಿ: ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಳೆಯ ನೋಟುಗಳು ಮತ್ತು ನಾಣ್ಯಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇಂತಹ ಹಳೆಯ ನೋಟು ಖರೀದಿಸಲು ಅಥವಾ ಮಾರಾಟ ಮಾಡುವ ಅನೇಕ ಆನ್ಲೈನ್ ವೆಬ್ಸೈಟ್ಗಳಿವೆ. ಇಲ್ಲಿ ಜನರು ಹಳೆಯ, ಪುರಾತನ ಮತ್ತು ವಿಶೇಷ ನೋಟುಗಳು ಹಾಗೂ ನಾಣ್ಯಗಳನ್ನು ಖರೀದಿಸುತ್ತಾರೆ.
ನಿಮ್ಮ ಬಳಿಯೂ ಈ ಹಳೆಯ 1 ರೂಪಾಯಿ ನೋಟು ಇದ್ದರೆ ಅದೃಷ್ಟವೇ ಬದಲಾಗುತ್ತದೆ. ಹೌದು, ನಾವು ಹೇಳುತ್ತಿರುವುದು ನಿಜ. ಎಷ್ಟೋ ಜನರಿಗೆ ಇದರ ಬಗ್ಗೆ ಅರಿವಿಲ್ಲ. ಅನೇಕರ ಮನೆಗಳಲ್ಲಿ ಹಳೆಯ ನೋಟು ಮತ್ತು ನಾಣ್ಯಗಳು ಮೂಲೆ ಸೇರಿರುತ್ತವೆ. ಆದರೆ ಇಂತಹ ನೋಟು ಮತ್ತು ನಾಣ್ಯಗಳ ಮೌಲ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಗಳಿಂದ ಹಿಡಿದು ಕೋಟಿ ಕೋಟಿವರೆಗೆ ಇದೆ ಎಂದರೆ ನೀವು ನಂಬುತ್ತೀರಾ? ನೀವು ಸಹ ಈ ರೀತಿಯ ನೋಟುಗಳನ್ನು ಹೊಂದಿದ್ದರೆ ಮಿಲಿಯನೇರ್ ಆಗುವ ಸುವರ್ಣಾವಕಾಶವಿದೆ.
ಇದನ್ನೂ ಓದಿ: Saving Account Interest: ಈ ಬ್ಯಾಂಕ್ ಗಳು ಉಳಿತಾಯ ಖಾತೆಯ ಮೇಲೆ ಗ್ರಾಹಕರಿಗೆ ಶೇ.7.5 ರಷ್ಟು ಬಡ್ಡಿ ಪಾವತಿಸುತ್ತಿವೆ
ಸಾಮಾನ್ಯವಾಗಿ ನಾವು ಹಳೆಯ ನಾಣ್ಯ ಮತ್ತು ನೋಟುಗಳ ಬಗ್ಗೆ ನಿರ್ಲಕ್ಷ್ಯವಹಿಸುತ್ತೇವೆ. ಆದರೆ ಈ ನೋಟುಗಳಿಗೆ ಇರುವ ಮೌಲ್ಯ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಕೆಲವರು ಹಳೆಯ ಮತ್ತು ಪುರಾತನ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿರುತ್ತಾರೆ. ಅವರ ಬಳಿ ಅನೇಕ ವಿಶೇಷ ನಾಣ್ಯ ಮತ್ತು ನೋಟುಗಳ ಸಂಗ್ರಹವಿರುತ್ತದೆ. ಇದೇ ರೀತಿಯ ಹವ್ಯಾಸ ನಿಮಗೂ ಇದ್ದರೆ, ಹಳೆಯ ಮತ್ತು ವಿಶೇಷ ನೋಟುಗಳಿದ್ದರೆ ನಿಮ್ಮ ಅದೃಷ್ಟ ಖುಲಾಯಿಸಿತು ಅಂತಲೇ ಅರ್ಥ.
ಅತ್ಯಂತ ಅಪರೂಪದ ನೋಟು
ನಿಮ್ಮ ಬಳಿ ಈ 1 ರೂಪಾಯಿ ನೋಟು ಇದ್ದರೆ ನೀವು ಅದನ್ನು ಆನ್ಲೈನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಕ್ಷ ಲಕ್ಷ ಹಣ ಗಳಿಸಬಹುದು. ಈ ನೋಟಿನ ವಿಶೇಷತೆಯನ್ನು ಹೊಂದಿದ್ದರೆ ಮಾತ್ರ ಕೈತುಂಬಾ ಹಣ ಸಿಗುತ್ತದೆ. 1957ರಲ್ಲಿ ರಾಜ್ಯಪಾಲ ಎಚ್.ಎಂ.ಪಟೇಲ್ ಸಹಿ ಮಾಡಿರುವ ಈ ನೋಟಿನ ಮೇಲೆ ಕ್ರಮಸಂಖ್ಯೆ 786 ಅಥವಾ 123456 ಅಂಕೆಗಳನ್ನು ಮುದ್ರಿಸಿರಬೇಕು. ಈ ನೋಟನ್ನು ನೀಉ ಆನ್ಲೈನ್ನಲ್ಲಿ ಮಾರಾಟ ಮಾಡಿ ಲಕ್ಷ ಲಕ್ಷ ಹಣ ಗಳಿಸಬಹುದು. ಕೆಲವು ನೋಟುಗಳಿಗೆ ಕೋಟಿ ಕೋಟಿ ರೂ. ಹಣ ಸಿಗುತ್ತದೆ.
ಇದನ್ನೂ ಓದಿ: Big Update: ರೈಲು ಪ್ರಯಾಣಿರಿಗೊಂದು ಭಾರಿ ಸಂತಸದ ಸುದ್ದಿ ಪ್ರಕಟಿಸಿದ ರೇಲ್ವೆ ಸಚಿವರು
ಎಲ್ಲಿ ಮಾರಾಟ ಮಾಡಬಹುದು?
ನೀವು ಈ 1 ರೂ. ನೋಟನ್ನು ಮಾರಾಟ ಮಾಡಬಯಸಿದರೆ ಮೊದಲು Ebay, CoinBazaar ಮತ್ತು Quikrನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಇದರ ನಂತರ ನಾಣ್ಯ ಅಥವಾ ನೋಟಿನ ಫೋಟೋವನ್ನು ತೆಗೆದುಕೊಂಡು ಅದನ್ನು ಅಪ್ಲೋಡ್ ಮಾಡಬೇಕು. ಯಾರಾದರೂ ಈ ನಾಣ್ಯವನ್ನು ಖರೀದಿಸಬಯಸಿದರೆ, ಅವರೇ ನಿಮ್ಮನ್ನು ನೇರವಾಗಿ ಸಂಪರ್ಕಿಸುತ್ತಾರೆ. ಅವರ ಜೊತೆಗೆ ಮಾತುಕತೆ ನಡೆಸಿ ನಿಮಗಿಷ್ಟವಾದರೆ ನಾಣ್ಯ ಮತ್ತು ನೋಟುಗಳನ್ನು ಮಾರಾಟ ಮಾಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.