Mercedes-Benz Electric Car: ಐಷಾರಾಮಿ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಜ್ ತನ್ನ ಎಲೆಕ್ಟ್ರಿಕ್ ಕಾರ್ ಆಗಿರುವ ಮರ್ಸಿಡಿಸ್-ಬೆಂಜ್ ಇಕ್ಯೂಎಸ್ 580 ಅನ್ನು ಕೆಲವು ತಿಂಗಳ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಇದುವರೆಗೆ ಅದು ಸಂಪೂರ್ಣ ಚಾರ್ಜ್ ನಲ್ಲಿ 857 ಕಿಮೀ ಓಡುವ ದೇಶದಲ್ಲೇ ಅತ್ಯಂತ ಹೆಚ್ಚು ರೇಂಜ್ ನೀಡುವ ಕಾರು ಎನಿಸಿಕೊಂಡಿತ್ತು. ಆದರೆ ಇದೀಗ ಕಂಪನಿಯು ಮತ್ತೊಂದು ತನ್ನ ಶಕ್ತಿಶಾಲಿ ಎಲೆಕ್ಟ್ರಿಕ್ ಕಾರ್ ಮರ್ಸಿಡಿಸ್ ಬೆಂಝ್ ವಿಷನ್ ಇಕ್ಯೂಎಕ್ಸ್ಎಕ್ಸ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಕಾರು ಒಮ್ಮೆ ಚಾರ್ಜ್ ಮಾಡಿದರೆ 1000 ಕಿಲೋಮೀಟರ್ ಓಡಬಹುದು. ವಿಷನ್ EQXX EV ಪರಿಕಲ್ಪನೆಯನ್ನು ಈ ವರ್ಷದ ಆರಂಭದಲ್ಲಿ ಜಾಗತಿಕವಾಗಿ ಪ್ರದರ್ಶಿಸಲಾಗಿತ್ತು ಎಂಬುದು ಇಲ್ಲಿ ಗಮನಾರ್ಹ .
ಬ್ಯಾಟರಿ ಒಂದು ತಿಂಗಳವರೆಗೆ ಇರುತ್ತದೆ
ಕಂಪನಿಯು ಈ ಕಾರಿನ ಕಾರ್ಯಕ್ಷಮತೆಗಿಂತ ದಕ್ಷತೆಯ ಮೇಲೆ ಹೆಚ್ಚು ಗಮನಹರಿಸಿದೆ. ಇದು 244hp (180kW) ಉತ್ಪಾದಿಸುವ ಏಕೈಕ ಎಲೆಕ್ಟ್ರಿಕ್ ಮೋಟರ್ನಿಂದ ಚಾಲಿತವಾಗಿದೆ. ಇದು 900V ವರೆಗಿನ ಚಾರ್ಜಿಂಗ್ ವೇಗವನ್ನು ಬೆಂಬಲಿಸುವ 100kWh ಬ್ಯಾಟರಿಯನ್ನು ಹೊಂದಿದೆ.
ಇದನ್ನೂ ಓದಿ-ಕೇವಲ 999 ರೂಪಾಯಿಗೆ ಖರೀದಿಸಿ Electric Bike! ಒಂದು ಕಿ.ಮೀಗೆ ತಗಲುವ ವೆಚ್ಚ 25 ಪೈಸೆ
ವ್ಯಾಪ್ತಿಯನ್ನು ಹೆಚ್ಚಿಸಲು, ಛಾವಣಿಯ ಮೇಲೆ ಸೌರ ಫಲಕವನ್ನು ಸಹ ಇರಿಸಲಾಗಿದೆ, ಅದರ ಮೂಲಕ ಬ್ಯಾಟರಿಯ ವ್ಯಾಪ್ತಿಯು ಒಂದು ದಿನದಲ್ಲಿ 25KM ವರೆಗೆ ಹೆಚ್ಚಾಗುತ್ತದೆ. ಆದಾಗ್ಯೂ, ಈ ಸೋಲಾರ್ ಪ್ಯಾನೆಲ್ಗಳು ಹಿಂಬದಿಯ ಕಿಟಕಿಯನ್ನು ಸಹ ಆವರಿಸುವ ಕಾರಣ ಚಾಲನೆಗೆ ಸ್ವಲ್ಪ ಅಡ್ಡಿಯನ್ನುಂಟು ಮಾಡುತ್ತವೆ. ಒಟ್ಟಾರೆಯಾಗಿ, ನೀವು ನಿತ್ಯ ನಿಮ್ಮ ಕಚೇರಿಗೆ 20 ಕಿಮೀ ಹೋಗುತ್ತಿದ್ದರೆ, ತಿಂಗಳಿಗೆ 25 ಕೆಲಸದ ದಿನಗಳ ಲೆಕ್ಕಾಚಾರದಲ್ಲಿ, ಈ ಕಾರಿನ ಬ್ಯಾಟರಿಯು ನಿಮಗೆ ಒಂದು ತಿಂಗಳಿಗಾಗುವಷ್ಟು ಬ್ಯಾಕಪ್ ನೀಡುತ್ತವೆ.
ಇದನ್ನೂ ಓದಿ-ರಾಯಲ್ ಎನ್ಫೀಲ್ಡ್ಗೆ ಟಕ್ಕರ್ ನೀಡುತ್ತಿದ್ದ ಹೀರೋದ ಈ ಜನಪ್ರಿಯ ಬೈಕ್ ಮಾರಾಟ ಸ್ಥಗಿತ .!
ಕಾರಿನ ವಿನ್ಯಾಸ ಮನಸೂರೆಗೊಳ್ಳುವಂತಿದೆ
ಮರ್ಸಿಡಿಸ್ ನ ಈ ಎಲೆಕ್ಟ್ರಿಕ್ ಕಾರಿನ ವಿನ್ಯಾಸ ಅತ್ಯಂತ ಆಕರ್ಷಕವಾಗಿದ್ದು, ಮನಸೂರೆಗೊಳ್ಳುವಂತಿದೆ. ಮುಂಭಾಗದಲ್ಲಿ, ಕಾರಿನ ಅಗಲಕ್ಕೆ ತಕ್ಕಂತೆ LED ಹೆಡ್ ಲ್ಯಾಂಪ್ ನೀಡಲಾಗಿದೆ. ಮರ್ಸಿಡಿಸ್ ಬೆಂಝ್ ಲೋಗೋವನ್ನು ಬಾನೆಟ್ನಲ್ಲಿ ಸ್ಟಿಕ್ಕರ್ ರೂಪದಲ್ಲಿ ನೀಡಲಾಗಿದೆ. ಇದರ ವಿನ್ಯಾಸವನ್ನು ಅತ್ಯಂತ ಏರೋಡೈನಾಮಿಕ್ ಆಗಿ ಇರಿಸಲಾಗಿದೆ. ಇದು ಫ್ಲಶ್ ಡೋರ್ ಹ್ಯಾಂಡಲ್ಗಳನ್ನು ಸಹ ಒಳಗೊಂಡಿದೆ. ಮರ್ಸಿಡಿಸ್ ಸಾಕಷ್ಟು ಮರುಬಳಕೆಯ ವಸ್ತುಗಳನ್ನು ಇದರಲ್ಲಿ ಬಳಸಿದೆ. ವಾಹನವನ್ನು ಅತ್ಯಂತ ಹಗುರವಾಗಿ ಇರಿಸಲಾಗಿದೆ. ಇದರ ತೂಕ ಕೇವಲ 1750 ಕೆಜಿ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.