ಬೆಂಗಳೂರು : ಒಬ್ಬ ವ್ಯಕ್ತಿಯ ಹೆಸರು ಅವನ ಜೀವನ ಮತ್ತು ಸ್ವಭಾವದ ಮೇಲೆ ಪರಿಣಾಮ ಬೀರುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇದೇ ಕಾರಣಕ್ಕೆ ಮಗುವಿನ ನಾಮಕರಣದ ವೇಳೆ ಯೋಚಿಸಿ ಹೆಸರಿಡಬೇಕು ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಹೆಸರು ಅವನಿಗೆ ತುಂಬಾ ವಿಶೇಷವಾಗಿರುತ್ತದೆ. ಯಾಕೆಂದರೆ ಯಾವುದೇ ವ್ಯಕ್ತಿಯನ್ನು ಆತನ ಹೆಸರಿನಿಂದಲೇ ಗುರುತಿಸಲಾಗುತ್ತದೆ. ನಾಮ ಶಾಸ್ತ್ರ ಅಥವಾ ನೇಮ್ ಅಸ್ಟ್ರಾಲಜಿ ಪ್ರಕಾರ, ವ್ಯಕ್ತಿಯ ಹೆಸರಿನ ಮೊದಲ ಅಕ್ಷರದಿಂದ ಅವನ ಸ್ವಭಾವ ಮತ್ತು ಭವಿಷ್ಯವನ್ನು ತಿಳಿದುಕೊಳ್ಳಬಹುದಾಗಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವ್ಯಕ್ತಿಯ ಜನ್ಮ ದಿನಾಂಕ, ಸಮಯ ಮತ್ತು ಹುಟ್ಟಿದ ಸ್ಥಳದ ಆಧಾರದ ಮೇಲೆ ರಾಶಿಯನ್ನು ನಿರ್ಧರಿಸಲಾಗುತ್ತದೆ. ರಾಶಿಯ ಆಧಾರದ ಮೇಲೆ ಹೆಸರನ್ನು ಇಡಲಾಗುತ್ತದೆ. ರಾಶಿ ಪ್ರಕಾರ ಹೆಸರನ್ನು ಇರಿಸಿದರೆ, ವ್ಯಕ್ತಿಯ ಗುಣ ಸ್ವಭಾವವನ್ನು ಅರ್ಥಮಾಡಿಕೊಳ್ಳುವುದು ಸುಲಭ. ಹೆಸರಿನ ಮೊದಲ ಅಕ್ಷರದಲ್ಲಿ ಸಾಕಷ್ಟು ಶಕ್ತಿಯಿದ್ದು ಅದರ ಗುಣಗಳು ಅದಕ್ಕೆ ಅಂಟಿಕೊಂಡಿರುತ್ತವೆ. ಜ್ಯೋತಿಷ್ಯದ ಪ್ರಕಾರ, B ಅಕ್ಷರದಿಂದ ಪ್ರಾರಂಭವಾಗುವ ಜನರು ಕರ್ಕ ರಾಶಿ ಮತ್ತು ಚಂದ್ರನ ಪ್ರಭಾವಕ್ಕೆ ಒಳಪಟ್ಟಿರುತ್ತಾರೆ.
ಇದನ್ನೂ ಓದಿ : Astro Tips: ಗುರುವಾರ ಬಾಳೆ ಮರಕ್ಕೆ ಈ ರೀತಿ ಪೂಜಿಸಿದ್ರೆ ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ!
B ಅಕ್ಷರದಿಂದ ಹೆಸರು ಆರಂಭವಾಗುವವರು ಯಾರಿಗೂ ಹೆದರುವುದಿಲ್ಲ :
ನಾಮ ಶಾಸ್ತ್ರದ ಪ್ರಕಾರ B ಹೆಸರಿನವರು ಯಾರಿಗೂ ಹೆದರುವುದಿಲ್ಲ. ಇವರು ನಿರ್ಭೀತರು ಮತ್ತು ಯಾರ ಮುಂದೆಯೂ ಸುಲಭವಾಗಿ ತಲೆಬಾಗಲು ಇಷ್ಟಪಡುವುದಿಲ್ಲ. ಇವರು ಬಹಳ ಸಂವೇದನಾಶೀಲರು. ಇತರರ ಬಗ್ಗೆ ಅಪಾರ ಕಾಳಜಿ ವಹಿಸುತ್ತಾರೆ. ನಾಮ ಶಾಸ್ತ್ರದ ಪ್ರಕಾರ, ಈ ಜನರು ಸ್ವಭಾವತಃ ರೋಮ್ಯಾಂಟಿಕ್ ಆಗಿರುತ್ತಾರೆ. ಪ್ರೀತಿಯ ಜೀವನದಲ್ಲಿ ತುಂಬಾ ಅದೃಷ್ಟಶಾಲಿಗಳು. B ಅಕ್ಷರದಿಂದ ಹೆಸರು ಆರಂಭವಾಗುವವರು ಹೆಚ್ಚಾಗಿ ಪ್ರೇಮ ವಿವಾಹವನ್ನೇ ಮಾಡಿಕೊಳ್ಳುತ್ತಾರೆ.
ಅಷ್ಟೇ ಅಲ್ಲ, ಇವರು ಆರ್ಥಿಕವಾಗಿ ತುಂಬಾ ಸದೃಢರಾಗಿರುತ್ತಾರೆ. ಸಮಾಜಸೇವೆಯಲ್ಲೂ ಅಪಾರ ಆಸಕ್ತಿ ಇರುತ್ತದೆ. ಅವರು ಸದಾ ಸುಂದರವಾಗಿ ಕಾಣಲು ಇಷ್ಟಪಡುತ್ತಾರೆ. ತುಂಬಾ ಧೈರ್ಯಶಾಲಿ ಮತ್ತು ಶ್ರಮಶೀಲರು. ಇವರು ಜೀವನದಲ್ಲಿ ತಮಗೆ ಏನು ಬೇಕು ಎಂದು ಬಯಸುತ್ತಾರೆ ಅದನ್ನು ಪಡೆಯಲು ಸಂಪೂರ್ಣ ಶ್ರಮ ವಹಿಸುತ್ತಾರೆ. ತಾವು ಅಂದುಕೊಂಡ ಕೆಲಸವನ್ನು ಮಾಡಿಯೇ ನಿಟ್ಟುಸಿರು ಬಿಡುತ್ತಾರೆ.
ಇದನ್ನೂ ಓದಿ : Lucky Names : ಮದುವೆಯ ನಂತರ ಹೊಳೆಯುತ್ತದೆ ಈ ಹೆಸರಿನವರ ಅದೃಷ್ಟ : ನಿಮ್ಮ ಹೆಸರಿದೆಯಾ? ನೋಡಿ
ಮೂಗಿನ ಮೇಲೆ ಕೋಪ :
B ಅಕ್ಷರದಿಂದ ಹೆಸರು ಆರಂಭವಾಗುವವರ ಮಾತುಗಳ ಪರಿಣಾಮವು ಜನರ ಮೇಲೆ ಬೇಗನೇ ಆಗುತ್ತದೆ. ಅವರು ಸಣ್ಣ ವಿಷಯಗಳನ್ನು ಬಹಳ ಬೇಗ ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ. ಬೇಗನೆ ಕೋಪಗೊಳ್ಳುತ್ತಾರೆ. ಹೃದಯ ವೈಶಾಲ್ಯತೆ ಹೊಂದಿರುತ್ತಾರೆ. ಜನರನ್ನು ಬಹಳ ಬೇಗ ಕ್ಷಮಿಸುತ್ತಾರೆ. ನಾಮ ಶಾಸ್ತ್ರದ ಪ್ರಕಾರ ಈ ಜನರು ಮೂಡಿ ಸ್ವಭಾವದವರು. ಹೆಚ್ಚು ಸ್ನೇಹಿತರೂ ಇವರಿಗೆ ಇರುವುದಿಲ್ಲ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.