ಬೆಂಗಳೂರು: ಸಚಿವ ಮುನಿರತ್ನ ವಿರುದ್ಧ 40% ಕಮಿಷನ್ ಆರೋಪದಡಿ ಹೇಳಿಕೆ ನೀಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸೇರಿ 4 ಜನರನ್ನು ಬಂಧಿಸಲಾಗಿದೆ. ಈ ಬಗ್ಗೆ ವಾರೆಂಟ್ ಜಾರಿ ಆಗಿದ್ದ ಹಿನ್ನಲೆ ವೈಯಾಲಿಕಾವಲ್ ಪೊಲೀಸರು ಕೆಂಪಣ್ಣರನ್ನು ಬಂಧಿಸಿದ್ದಾರೆ.
ಈ ಹಿಂದೆ ಪ್ರಕರಣ ಸಂಬಂಧ ವಾರಂಟ್ ಜಾರಿಯಾಗಿತ್ತು. 40% ಕಮಿಷನ್ ಆರೋಪ ವಿಚಾರದಲ್ಲಿ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಪಣ್ಣ ವಿರುದ್ಧ ವಾರೆಂಟ್ ಜಾರಿಯಾಗಿತ್ತು.
ಇದನ್ನೂ ಓದಿ: ಪಿಂಚಣಿದಾರರಿಗೆ ಮನೆಬಾಗಿಲಿಗೆ ಸಿಗಲಿದೆ ಡಿಜಿಟಲ್ ಇ-ಜೀವಂತ ಪ್ರಮಾಣ ಪತ್ರ...!
ಡಿ.ಕೆಂಪಣ್ಣ ವಿರುದ್ಧ ಸಚಿವ ಮುನಿರತ್ನ ಅವರು ಮಾನಹಾನಿ ಕೇಸ್ ಹಾಕಿದ್ದರು. ಕೋರ್ಟ್‍ಗೆ ಗೈರಾಗಿದ್ದ ಡಿ.ಕೆಂಪಣ್ಣ ವಿರುದ್ಧ ವಾರೆಂಟ್ ಜಾರಿಯಾಗಿತ್ತು. 8ನೇ ಎಸಿಎಂಎಂ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ, ವಿ.ಕೃಷ್ಣಾರೆಡ್ಡಿ ಸೇರಿ 19 ಪ್ರತಿವಾದಿಗಳ ವಿರುದ್ಧ ವಾರೆಂಟ್ ಜಾರಿಯಾಗಿತ್ತು. ಇದೀಗ ಈ ಪ್ರಕರಣ ಸಂಬಂಧ ಕೆಂಪಣ್ಣ, ಕೃಷ್ಣಾರೆಡ್ಡಿ, ನಟರಾಜು, ಗುರುಸಿದ್ದಪ್ಪ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಕಸಾಯಿಖಾನೆಗೆ ಸಾಗಿಸುತ್ತಿದ್ದ 78 ಜಾನುವಾರುಗಳ ರಕ್ಷಣೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.