NRI News: ಕ್ಯಾಲಿಫೋರ್ನಿಯಾದ ಮೇಯರ್ ಆಗಿ ಆಯ್ಕೆಯಾದ ಅನಿವಾಸಿ ಭಾರತೀಯ: ಯಾರವರು ಗೊತ್ತಾ?

NRI News: ಹೊಸದಾಗಿ ಚುನಾಯಿತ ಕೌನ್ಸಿಲರ್ ಲಿಸಾ ಕ್ರೇಗ್ ಅವರಿಂದ ನಾಮನಿರ್ದೇಶನಗೊಂಡಿದ್ದರು. ಕಳೆದ ವರ್ಷ ಮೇಯರ್ ಚಾಂಡ್ಲರ್ ಅವರ ನೇತೃತ್ವದಲ್ಲಿ ಉಪಮೇಯರ್ ಆಗಿ ಸೇವೆ ಸಲ್ಲಿಸಿದ ಅವರು ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರೂ ಸಹ ಅವಿರೋಧವಾಗಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

Written by - Bhavishya Shetty | Last Updated : Dec 27, 2022, 05:14 PM IST
    • ಕ್ಯಾಲಿಫೋರ್ನಿಯಾದ ಲೋಡಿ ನಗರದ ಮೇಯರ್ ಆಗಿ ಆಯ್ಕೆಯಾದ ಎನ್ ಆರ್ ಐ
    • ಅನಿವಾಸಿ ಭಾರತೀಯ ಮೈಕಿ ಹೋಥಿ ಈ ಮೂಲಕ ಇತಿಹಾಸ ನಿರ್ಮಿಸಿದ್ದಾರೆ
    • ಹೋಥಿಯವರ ಪೋಷಕರು ಭಾರತ ಮೂಲದವರು
NRI News: ಕ್ಯಾಲಿಫೋರ್ನಿಯಾದ ಮೇಯರ್ ಆಗಿ ಆಯ್ಕೆಯಾದ ಅನಿವಾಸಿ ಭಾರತೀಯ: ಯಾರವರು ಗೊತ್ತಾ? title=
NRI

NRI News: ಅನಿವಾಸಿ ಭಾರತೀಯ ಮೈಕಿ ಹೋಥಿ ಕ್ಯಾಲಿಫೋರ್ನಿಯಾದ ಲೋಡಿ ನಗರದ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಹೋಥಿಯವರ ಪೋಷಕರು ಭಾರತ ಮೂಲದವರು. ಉತ್ತರ ಕ್ಯಾಲಿಫೋರ್ನಿಯಾದ ಲೋಡಿ ನಗರದ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಲೋಡಿ ನಗರದ ಇತಿಹಾಸದಲ್ಲಿ ಮೇಯರ್ ಆಗಿ ಆಯ್ಕೆಯಾದ ಮೊದಲ ಸಿಖ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಭೇಟಿ-ಮದುವೆ ಪ್ರಸ್ತಾಪ: 63 ವರ್ಷದ NRI ಮಹಿಳೆಗೆ 34 ಲಕ್ಷ ಪಂಗನಾಮ ಹಾಕಿದ ವ್ಯಕ್ತಿ

ಹೊಸದಾಗಿ ಚುನಾಯಿತ ಕೌನ್ಸಿಲರ್ ಲಿಸಾ ಕ್ರೇಗ್ ಅವರಿಂದ ನಾಮನಿರ್ದೇಶನಗೊಂಡಿದ್ದರು. ಕಳೆದ ವರ್ಷ ಮೇಯರ್ ಚಾಂಡ್ಲರ್ ಅವರ ನೇತೃತ್ವದಲ್ಲಿ ಉಪಮೇಯರ್ ಆಗಿ ಸೇವೆ ಸಲ್ಲಿಸಿದ ಅವರು ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರೂ ಸಹ ಅವಿರೋಧವಾಗಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

"ಲೋಡಿ ನಗರದ 117 ನೇ ಮೇಯರ್ ಆಗಿ ಪ್ರಮಾಣವಚನ ಸ್ವೀಕರಿಸಲು ಹೆಮ್ಮೆಪಡುತ್ತೇನೆ" ಎಂದು ಹೋಥಿ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ಸ್ಥಳೀಯ ಕ್ಯಾಲಿಫೋರ್ನಿಯಾ ಪತ್ರಿಕೆಯಾದ ದಿ ಲೋಡಿ ನ್ಯೂಸ್-ಸೆಂಟಿನೆಲ್ ಪ್ರಕಾರ, ಆರ್ಮ್‌ಸ್ಟ್ರಾಂಗ್ ರಸ್ತೆಯಲ್ಲಿ ಸಿಖ್ ದೇವಾಲಯವನ್ನು ಸ್ಥಾಪಿಸುವಲ್ಲಿ ಅವರ ಕುಟುಂಬವೂ ಪ್ರಮುಖ ಪಾತ್ರ ವಹಿಸಿದೆ.

"ನಮ್ಮ ಪೂರ್ವಜರು ಲೋಡಿಗೆ ಬಂದಿದ್ದರು. ಏಕೆಂದರೆ ಇದು ಸುರಕ್ಷಿತ ನಗರ ಎಂದು ಅವರು ಅರಿತುಕೊಂಡರು . ಈ ಪಟ್ಟಣವು ಉತ್ತಮ ಶಿಕ್ಷಣ, ಶ್ರೇಷ್ಠ ವ್ಯಕ್ತಿಗಳು, ಶ್ರೇಷ್ಠ ಸಂಸ್ಕೃತಿ, ಶ್ರೇಷ್ಠ ಮೌಲ್ಯಗಳು ಮತ್ತು ಶ್ರಮಜೀವಿಗಳನ್ನು ಹೊಂದಿದೆ. ಲೋಡಿಯನ್ನು ಮೇಯರ್ ಆಗಿ ಪ್ರತಿನಿಧಿಸಲು ನಾನು ಹೆಮ್ಮೆಪಡುತ್ತೇನೆ" ಎಂದು ಹೋಥಿ ಹೇಳಿದರು.

2008ರಲ್ಲಿ ಪದವೀಧರರಾದ ಹೋಥಿ, 9/11 ಟ್ವಿನ್ ಟವರ್ಸ್ ದಾಳಿಯ ನಂತರ ಮುಸ್ಲಿಮರು ಮತ್ತು ಸಿಖ್ಖರ ನಡುವಿನ ಸಂಘರ್ಷದಿಂದ ನ್ಯಾಯಸಮ್ಮತವಲ್ಲದ ಕಿರುಕುಳವನ್ನು ಅನುಭವಿಸಿದರು ಎಂದು ಹೇಳಿದರು. ಆದರೆ ಅವರ ಕುಟುಂಬವು ಲೋಡಿಯಲ್ಲಿ ಶಾಂತಿಯುತವಾಗಿ ಬದುಕಲು ಸಾಧ್ಯವಾಯಿತು ಎಂದು ಅವರು ಉಲ್ಲೇಖಿಸಿದ್ದಾರೆ

ಇದನ್ನೂ ಓದಿ: Omicron BF.7 detected: ಚೀನಾ ಕೋವಿಡ್ ಉಲ್ಬಣದ ನಡುವೆ ಗುಜರಾತ್-ಒಡಿಶಾದಲ್ಲಿ Omicron BF.7 ಪತ್ತೆ

ಹೋಥಿ  ಅವರ ಪೋಷಕರು ಪಂಜಾಬ್ ಮೂಲದವರು. ಲೋದಿ ನಗರವು ಅವರನ್ನು ಶಾಂತಿ ಮತ್ತು ಸಮೃದ್ಧಿಯಲ್ಲಿ ಬದುಕುವಂತೆ ಮಾಡಿದೆ ಎಂದು ಹೇಳಿದರು. ಭಾರತೀಯರು ವ್ಯಾಪಾರ ಮಾಲೀಕರು ಮತ್ತು ಲೋಡಿಯಲ್ಲಿ ಯಶಸ್ವಿ ಕಂಪನಿಗಳನ್ನು ನಡೆಸುತ್ತಿರುವ ಉದ್ಯಮಿಗಳು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News