2023ರ ಸಾರ್ವತ್ರಿಕ ಚುನಾವಣೆ: ಬಿಜೆಪಿ ಅಜೆಂಡಾ ಇದೇ..!; ಕೈ ಗೆ ಸವಾಲಗಿದ್ಯಾ ಈ ಕಾಯ್ದೆ?!

2018ರ ಸಾರ್ವತ್ರಿಕ ಚುನಾವಣೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ವಾಗ್ದಾನ ನೀಡಿ, ನುಡಿದಂತೆ ನಡೆದ ಬಿಜೆಪಿ, ಈಗ 2023 ರ ಚುನಾವಣೆಗೆ ಏಕರೂಪ ನಾಗರಿಕ ನೀತಿಸಂಹಿತೆ ಜಾರಿಗೆ ತರುವ ಬಗ್ಗೆ ಬಿಜೆಪಿ ಸಿದ್ಧತೆ ನಡೆಸಿದೆ.  

Written by - Prashobh Devanahalli | Edited by - Manjunath N | Last Updated : Dec 28, 2022, 11:29 AM IST
  • ಪೋರ್ಚುಗೀಸ್ ಆಳ್ವಿಕೆ ನಡೆಸಿದ ಇಂದಿಗೂ ಸಿವಿಲ್ ಕೋಡ್ ಜಾರಿಯಲ್ಲಿದೆ.
  • ಗೋವಾದಲ್ಲಿ ಮುಸ್ಲಿಂ ಪುರುಷರಿಗೆ ಬಹು ಪತ್ನಿತ್ವಕ್ಕೆ ಅವಕಾಶ ಇಲ್ಲ,
  • ಮೆಸಪಟೋಮಿಯಾ ನಾಗರಿಕತೆಯ ಕಾಲದಲ್ಲೂ ಉರ್ ಅನ್ನೋ ಸಿವಿಲ್ ಕೋಡ್ ಜಾರಿಯಲ್ಲಿತ್ತು
2023ರ ಸಾರ್ವತ್ರಿಕ ಚುನಾವಣೆ: ಬಿಜೆಪಿ ಅಜೆಂಡಾ ಇದೇ..!; ಕೈ ಗೆ ಸವಾಲಗಿದ್ಯಾ ಈ ಕಾಯ್ದೆ?! title=
file photo

ಬೆಂಗಳೂರು : 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ವಾಗ್ದಾನ ನೀಡಿ, ನುಡಿದಂತೆ ನಡೆದ ಬಿಜೆಪಿ, ಈಗ 2023 ರ ಚುನಾವಣೆಗೆ ಏಕರೂಪ ನಾಗರಿಕ ನೀತಿಸಂಹಿತೆ ಜಾರಿಗೆ ತರುವ ಬಗ್ಗೆ ಬಿಜೆಪಿ ಸಿದ್ಧತೆ ನಡೆಸಿದೆ.

2023ರ ಸಾರ್ವತ್ರಿಕ ಚುನಾವಣೆ ಏಕರೂಪ ನಾಗರಿಕ ನೀತಿಸಂಹಿತೆ ಜಾರಿಗೆ ತರುವ ಭರವಸೆ ನೀಡಲು ಸಜ್ಜಾದ ರಾಜ್ಯ ಕಮಲ ನಾಯಕರು,ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಂತೆ,ಏಕ ರೂಪ ನಾಗರೀಕ ನೀತಿ ಸಂಹಿತೆ ಜಾರಿಗೊಳಿಸಲು ಕಟಿಬದ್ದವಾಗಿದ್ದೇವೆ ಎಂಬ ಅಸ್ತ್ರ ಪ್ರಯೋಗಿಸಲು ಸಜಾಗಿದ್ದಾರೆ.

ಏಕರೂಪ ನಾಗರಿಕ ನೀತಿಸಂಹಿತೆ ಎಂದರೇನು?: 

ಜನರು ಒಳಪಡುವ ಧರ್ಮ, ಜಾತಿ ಮತ್ತು ಜನಾಂಗ, ಬುಡಕಟ್ಟುಗಳ ಎಲ್ಲಾ ಜನರಿಗೆ ಅನ್ವಯಿಸುವ ವೈಯಕ್ತಿಕ ಕಾನೂನುಗಳನ್ನ ರದ್ದು ಮಾಡಿ, ಸಂವಿಧಾನ ಅಡಿಯಲ್ಲಿ ಆಡಳಿತಕ್ಕೆ ಒಳಪಡುವ ಎಲ್ಲಾ ನಾಗರೀಕರಿಗೆ ಒಂದೇ ಕಾನೂನು ಅನ್ವಯ

ನಾಗರೀಕ ನೀತಿ ಸಂಹಿತೆಗೆ ಒಳ ಪಡುವ ಸಾಮಾನ್ಯ ಕ್ಷೇತ್ರಗಳೆಂದರೆ, ಆಸ್ತಿ ಪಾಸ್ತಿ ಸ್ವಾದೀನಪಡಿಸಿ ಕೊಳ್ಳುವಿಕೆ ಮತ್ತು ಆಡಳಿತ, ಮದುವೆ, ವಿಚ್ಛೇದನ ಮತ್ತು ದತ್ತು ಸ್ವೀಕಾರ ಧರ್ಮ ಆಧಾರಿತ, ವೈಯಕ್ತಿಕ ಕಾನೂನುಗಳು ರದ್ದಾಗುತ್ತವೆ. ಯಾವುದೇ ಧರ್ಮಕ್ಕೂ ಪ್ರತ್ಯೇಕ ಕಾಯ್ದೆ ಕಾನೂನು ಇರಲ್ಲ.

ಇದನ್ನೂ ಓದಿ : ಬಿಜೆಪಿಯಲ್ಲಿರುವ ಬಹುತೇಕರು ಸಿ.ಟಿ.ರವಿಯರಂತೆ ಕೊಳಕು ಗಿರಾಕಿಗಳು: ದಿನೇಶ್ ಗುಂಡೂರಾವ್

ಎಲ್ಲಾ ಧರ್ಮದವರು ವಿವಾಹ ವಿಚ್ಛೇದನ, ಜೀವನಾಂಶ, ಆಸ್ತಿ ಹಂಚಿಕೆ, ಉತ್ತರಾಧಿಕಾರ, ಮಕ್ಕಳ ದತ್ತು ಪಡೆಯುವಿಕೆ, ಗಾರ್ಡಿಯನ್ ಶಿಪ್ ಗೆ ಸಂಬಂಧಿಸಿದಂತೆ ಒಂದೇ ಕಾನೂನಿನನ್ನ ಪಾಲೋ ಮಾಡಬೇಕಾಗುತ್ತದೆ.ಒಂದುವೇಳೆ ಏಕರೂಪ ನಾಗರಿಕ ನೀತಿಸಂಹಿತೆ ಜಾರಿ ಆದ್ರೆ, ಮುಸ್ಲಿಮರು, ಹದೀಸ್ ಅಥವಾ ಶರೀಯತ್ ನ ಖಾಸಗಿ ಕಾನೂನು (Personal laws) ಅನ್ವಯ ಆಗುವುದಿಲ್ಲ.

ಬಿಜೆಪಿ 90ರ ದಶಕದಿಂದಲೂ ಯುನಿಫಾರ್ಮ್ ಸಿವಿಲ್ ಕೋಡ್ ಜಾರಿಗೆ ತರುವುದಾಗಿ ಹೇಳ್ತಿದೆ,2019ರ ಲೋಕಸಭಾ ಚುನಾವಣೆ, ಮೊನ್ನೆ ನಡೆದ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯಲ್ಲೂ ಏಕ ರೂಪ ನಾಗರೀಕ ಸಂಹಿತೆಯನ್ನು ಜಾರಿಗೆ ತರುವ ಪ್ರಸ್ತಾಪ ಮಾಡಿದ್ದ ಬಿಜೆಪಿ, ಈಗ ಕರ್ನಾಟಕದಲ್ಲೂ ಇದೇ ರೀತಿ ಅನುಸರಿಸಲು ಮುಂದಾಗಿದೆ.

ಪೋರ್ಚುಗೀಸ್ ಆಳ್ವಿಕೆ ನಡೆಸಿದ ಇಂದಿಗೂ ಸಿವಿಲ್ ಕೋಡ್ ಜಾರಿಯಲ್ಲಿದೆ. ಗೋವಾದಲ್ಲಿ ಮುಸ್ಲಿಂ ಪುರುಷರಿಗೆ ಬಹು ಪತ್ನಿತ್ವಕ್ಕೆ ಅವಕಾಶ ಇಲ್ಲ,ಈ ಯೂನಿಫಾರ್ಮ್ ಸಿವಿಲ್ ಕೋಡ್ ರೋಮನ್ ಕಾಲದ್ದು ಎಂಬ ಮಾಹಿತಿ. ಮೆಸಪಟೋಮಿಯಾ ನಾಗರಿಕತೆಯ ಕಾಲದಲ್ಲೂ ಉರ್ ಅನ್ನೋ ಸಿವಿಲ್ ಕೋಡ್ ಜಾರಿಯಲ್ಲಿತ್ತು.

ಇದನ್ನೂ ಓದಿ : ಕುತೂಹಲ ಮೂಡಿಸಿದೆ ‘ಜೂಲಿಯೆಟ್ 2’ ಚಿತ್ರದ ಫಸ್ಟ್ ಲುಕ್

ಏಕರೂಪ ನಾಗರಿಕ ನೀತಿಸಂಹಿತೆಗೆ ರಾಜಕೀಯ ಪಕ್ಷಗಳು ವಿರೋಧ ಇರಲಿದ್ದು ಯೂನಿಫಾರ್ಮ್ ಸಿವಿಲ್ ಕೋಡ್ ಜಾತ್ಯಾತೀತತೆಗೆ ವಿರುದ್ಧವಾಗಿದೆ ಎಂಬ ವಾದ ಹಲವು ನಾಯಕರದ್ದು ಆಗಿದೆ.ಹಲವು ರಾಜಕೀಯ ಪಕ್ಷಗಳ ನಾಯಕರು ಈ ಕಾಯ್ದೆ ಮೂಲಕ ಮುಸ್ಲಿಂ ಸಮುದಾಯವನ್ನ ಟಾರ್ಗೆಟ್ ಮಾಡಲಾಗ್ತಿದೆ ಎಂಬ ವಾದವನ್ನು ಮಂಡಿಸಿದ್ದಾರೆ.

ಒಟ್ಟಾರೆ ಕಾಂಗ್ರೆಸ್ ಏಕರೂಪ ನಾಗರಿಕ ನೀತಿಸಂಹಿತೆ ಮೂಲಕ ಮುಸ್ಲಿಂ ಸಮುದಾಯವನ್ನ ಟಾರ್ಗೆಟ್ ಮಾಡಲಾಗ್ತಿದಿಯಾ?ಗೋವಾ ರಾಜ್ಯದಂತೆ ರಾಜ್ಯದಲ್ಲೂ ಮುಸ್ಲಿಂ ಸಮುದಾಯದ ಪುರುಷರ ಬಹು ಪತ್ನಿತ್ವಕ್ಕೆ ಬೀಳುತ್ತಾ ಬ್ರೇಕ್? ಎಂಬ ಆಕ್ಷೇಪ ಹೊರಹಾಕುತ್ತಿದ್ದಾರೆ.

ಕಾಂಗ್ರೆಸ್ ಮುಸ್ಲಿಂ ಸಮುದಾಯದ ಓಲೈಕೆಗೆ ಬಿಜೆಪಿ ನಾಯಕರು ಏಕರೂಪ ನಾಗರಿಕ ನೀತಿಸಂಹಿತೆ ಅಸ್ತ್ರ ಪ್ರಯೋಗ ಮಾಡುತ್ತಿದ್ದು ಏಕರೂಪ ನಾಗರಿಕ ನೀತಿಸಂಹಿತೆ ವಿಚಾರ ಪ್ರಸ್ತಾಪ ಮಾಡಿ, ಬಿಜೆಪಿ ಹಿಂದೂ ಮತಗಳನ್ನು ಗಟ್ಟಿಗೊಳಿಸುವ ತಂತ್ರನಾ ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News