ಬೆಂಗಳೂರು: ರಾಜ್ಯದ ಜನರಲ್ಲಿ ವಿಚಿತ್ರ ಕ್ಯಾನ್ಸರ್ ಖಾಯಿಲೆಯೊಂದು ಹೆಚ್ಚಾಗಿ ಕಂಡುಬರುತ್ತಿದೆ. ಕೇವಲ ರಾಜ್ಯವಷ್ಟೇ ಅಲ್ಲ ವಿವಿಧ ರಾಜ್ಯ-ವಿದೇಶಗಳಲ್ಲೂ ಈ ಖಾಯಿಲೆ ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಕ್ಯಾನ್ಸರ್ ಮೊದಲ ಸ್ಟೇಜ್‍ನಲ್ಲಿ ಇರೋವಾಗ್ಲೇ ಚಿಕಿತ್ಸೆ ಮಾಡಿಸಿ, ಇಲ್ಲದಿದ್ರೆ ಪ್ರಾಣಕ್ಕೆ ಕುತ್ತು ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ವಿಶಿಷ್ಟ ಕ್ಯಾನ್ಸರ್ ಖಾಯಿಲೆ ಬಂದ್ರೆ ಕೂಡಲೇ ಚಿಕಿತ್ಸೆ ಮಾಡಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹಾಗಿದೆ ಯಾವುದು ಗೊತ್ತಾ ಆ ವಿಚಿತ್ರ ಕ್ಯಾನ್ಸರ್? ಮನುಷ್ಯನ ಯಾವ ಅಂಗಾಗದ ಮೂಲಕ ಕ್ಯಾನ್ಸರ್ ಬರುತ್ತೆ ಗೊತ್ತಾ...!? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: ಕೊಲೆ ಮಾಡಿ ಬೈಕ್‌ನಲ್ಲಿ ಹೆಣ ಸಾಗಿಸಿದ ಹಂತಕರು: ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
ಡೇಂಜರಸ್ ಪ್ರಾಸ್ಟೇಟ್ ಕ್ಯಾನ್ಸರ್
ಕರ್ನಾಟಕವೂ ಸೇರಿದಂತೆ ದೇಶ-ವಿದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಡೇಂಜರಸ್ ಪ್ರಾಸ್ಟೇಟ್ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಬೆಂಗಳೂರಿನ ಜನರಲ್ಲೂ ಈ ಮಾರಕ ಪ್ರಾಸ್ಟೆಸ್ಟ್ ಕ್ಯಾನ್ಸರ್ ಕಾಡ್ತಿದೆ. ಮನುಷ್ಯನ ಗುದ ದ್ವಾರದ ಭಾಗದಲ್ಲಿ ಈ ವಿಚಿತ್ರ ಕ್ಯಾನ್ಸರ್ ಕಾಣಿಸಿಕೊಳ್ತಿದೆ. 50ಕ್ಕಿಂತ ಹೆಚ್ಚಿನ ವಯಸ್ಸಿಗರಲ್ಲೇ ಹೆಚ್ಚಾಗಿ ಈ ಕ್ಯಾನ್ಸರ್ ಪತ್ತೆಯಾಗಿದೆ.
ಹೊಸ ತಂತ್ರಜ್ಞಾನ ಆವಿಷ್ಕಾರ
ಈ ಡೇಂಜರಸ್ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆಗೆ ಹೊಸ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಲಾಗಿದೆ. ನಗರದ ಅಪೊಲೊ ಆಸ್ಪತ್ರೆಯ ವೈದ್ಯರಿಂದ ಪ್ರಾಸ್ಟೆಸ್ಟ್ ಕ್ಯಾನ್ಸರ್ ಪತ್ತೆಗೆ ಸಂಶೋಧನೆ ನಡೆಸಲಾಗಿದೆ. ಅಪೊಲೊ ಆಸ್ಪತ್ರೆಯ ವೈದ್ಯರಿಂದ ಸಂಶೋಧನೆ ಮತ್ತು ಸಲಹೆ ನೀಡಲಾಗಿದೆ. ಕ್ಯಾನ್ಸರ್ ಮೊದಲ ಮತ್ತು 2ನೇ ಹಂತದಲ್ಲಿರುವಾಗಲೇ ಈ ತಂತ್ರಜ್ಞಾನ ಪತ್ತೆ ಮಾಡಲಿದೆ. ‘ಎಂಆರ್ಐ ಪ್ಯೂಷನ್ ಬಯಾಪ್ಸಿ’ ಎಂಬ ತಂತ್ರಜ್ಞಾನದ ಮೂಲಕ ಪ್ರಾಸ್ಟೇಟ್ ಖಾಯಿಲೆ ಪತ್ತೆ ಹಚ್ಚಲಾಗುತ್ತದೆ. ಹೀಗಾಗಿ ಈ ನೂತನ ತಂತ್ರಜ್ಞಾನವನ್ನು ಅಪೊಲೊ ಆಸ್ಪತ್ರೆಯ ವೈದ್ಯರ ತಂಡ ಪರಿಚಯಿಸಿದೆ.
ಇದನ್ನೂ ಓದಿ: ಹಣ ಕೊಡಲಿಲ್ಲ ಅಂತಾ ಮಹಿಳೆಯ ಖಾಸಗಿ ವಿಡಿಯೋ ಹರಿಬಿಟ್ಟು ವಿಕೃತಿ: ಆರೋಪಿ ಬಂಧನ
ಪ್ರಾಸ್ಟೇಟ್ ಕ್ಯಾನ್ಸರ್‍ಗೆ ಚಿಕಿತ್ಸೆ ನೀಡಲು ಈ ತಂತ್ರಜ್ಞಾನ ಸಹಕಾರಿಯಾಗಿದೆ. ಈ ಟೆಕ್ನಲಾಜಿ ಬಳಸಿ ಈಗಾಗಲೇ 42 ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ವರ್ಷಕ್ಕೆ 1 ಲಕ್ಷಕ್ಕೂ ಅಧಿಕ ಜನರು ಈ ಕ್ಯಾನ್ಸರ್‍ಗೆ ತುತ್ತಾಗುತ್ತಿದ್ದಾರೆ. 60 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಈ ಕ್ಯಾನ್ಸರ್ ಕಂಡುಬರುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.