ಮಂಡ್ಯದ ಮನ್ಮುಲ್ನಲ್ಲಿ ತಯಾರಾಗ್ತಿರೋ ಬೆಲ್ಲದ ಬರ್ಫಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್

ಮಂಡ್ಯದ ಮನ್ಮುಲ್ ನಿಂದ ಬಾಯಿಯಲ್ಲಿ ನೀರೂರಿಸುವ ಮತ್ತೊಂದು ಖಾದ್ಯ ತಯಾರಾಗುತ್ತಿದ್ದು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಕಳೆದ ವಾರವಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ರಿಂದ ಲೋಕಾರ್ಪಣೆ ಗೊಂಡಿದ್ದ ಮಂಡ್ಯದ ಮೆಗಾ ಡೇರಿಯಲ್ಲಿ ತಯಾರಾಗೋ ಬೆಲ್ಲದ ಬರ್ಫಿಗೆ ಗ್ರಾಹಕರು ಫಿದಾ ಆಗಿದ್ದಾರೆ.

Written by - Yashaswini V | Last Updated : Jan 10, 2023, 02:53 PM IST
  • ಹೊಸ ಟ್ರೆಂಡ್ ಸೃಷ್ಠಿಸಿದ ಮಂಡ್ಯದ ಮನ್ಮುಲ್
  • ಮಂಡ್ಯದ ಬೆಲ್ಲದ ಬರ್ಫಿಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್
  • ಆರ್ಗ್ಯಾನಿಕ್ ಬೆಲ್ಲ ಬಳಸಿ ತಯಾರಾಗುತ್ತಿರುವ ಬರ್ಫಿ
ಮಂಡ್ಯದ ಮನ್ಮುಲ್ನಲ್ಲಿ ತಯಾರಾಗ್ತಿರೋ ಬೆಲ್ಲದ ಬರ್ಫಿಗೆ ಈಗ ಸಿಕ್ಕಾಪಟ್ಟೆ ಡಿಮ್ಯಾಂಡ್ title=
Bellada Barfi

ಮಂಡ್ಯ:  ಧಾರವಾಡ ಅಂದ್ರೆ ಪೇಡಾ... ಬೆಳಗಾವಿ ಅಂದ್ರೆ ಕುಂದಾ ಅನ್ನೋ ರೀತಿಯಲ್ಲಿ ಇದೀಗ ಮಂಡ್ಯ ಅಂದ್ರೆ ಬೆಲ್ಲದ ಬರ್ಫಿ ಎಂಬ ಹೊಸ ಟ್ರೆಂಡ್ ಸದ್ದು ಮಾಡುತ್ತಿದೆ. ಮಂಡ್ಯದ ಮೈಮುಲ್ ನ ಮೆಗಾ ಡೇರಿಯಲ್ಲಿ ಹೊಸದಾಗಿ ಉತ್ಪಾದನೆ ಮಾಡುತ್ತಿರೋ ಬೆಲ್ಲದ ಬರ್ಫಿಗೆ ಇದೀಗ  ಡಿಮ್ಯಾಂಡಪ್ಪೋ, ಡಿಮ್ಯಾಂಡ್!

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಇತ್ತೀಚಿಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾರಿಂದ ಉದ್ಘಾಟನೆಗೊಂಡ ಮೆಗಾ ಡೇರಿಯಲ್ಲಿ ಬಾಯಿಯಲ್ಲಿ ನೀರೂರಿಸುವ ಮತ್ತೊಂದು ಖಾದ್ಯ ತಯಾರಾಗುತ್ತಿದ್ದು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಅದೇ ಬೆಲ್ಲದ ಬರ್ಫಿ.

ಇದನ್ನೂ ಓದಿ- ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ವಿಚಾರ: ಬಿಜೆಪಿ-ಜೆಡಿಎಸ್ ಲೆಕ್ಕಾಚಾರ ಏನು..?

ಏನೀ ಬೆಲ್ಲದ ಬರ್ಫಿಯ ವಿಶೇಷತೆ?
ಅಷ್ಟಕ್ಕೂ ಈ ಬೆಲ್ಲದ ಬರ್ಫಿಯ ವಿಶೇಷತೆ ಏನು ಅದಕ್ಕೆ ಏನೆಲ್ಲ ಮಿಶ್ರಣ ಮಾಡ್ತಾರೆ ಅಂತ ನೋಡುವುದಾದ್ರೆ. ಇದಕ್ಕೆ ಕೆಮಿಕಲ್ ರಹಿತ ಬೆಲ್ಲವನ್ನ ಮಂಡ್ಯ ವಿ.ಸಿ ಫಾರ್ಮ್ ನಲ್ಲಿ ರೈತರಿಂದ ನೇರವಾಗಿ ಕೊಳ್ಳಲಾಗುತ್ತದೆ. ಬಳಿಕ ಆ ಬೆಲ್ಲವನ್ನ ಪಾಕ ಮಾಡಿ ಅದಕ್ಕೆ ಡ್ರೈ ಫ್ರೂಟ್ ಗಳಾದ ಗೋಡಂಬಿ, ಬಾದಾಮಿ ಹಾಗೂ ಕಲ್ಲಂಗಡಿ ಹಣ್ಣಿನ ಬೀಜಗಳನ್ನ ಮಿಶ್ರಣ ಮಾಡಿ ಶುದ್ಧ ಬೆಲ್ಲದ ಬರ್ಫಿಯನ್ನ ತಯಾರು ಮಾಡಲಾಗುತ್ತದೆ. ಇನ್ನು ವಿಶೇಷ ಏನಪ್ಪ ಅಂದ್ರೆ ಮಧುಮೇಹಿಗಳು ಸಹ ಈ ಬೆಲ್ಲದ ಬರ್ಫಿಯನ್ನ ಸವಿಯಬಹುದು. ಹಾಗಾಗಿಯೇ ಈ ಬೆಲ್ಲದ ಬರ್ಫಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಠಿಯಾಗಿದೆ.

ಇದನ್ನೂ ಓದಿ- ಸ್ಯಾಂಟ್ರೋ ರವಿ ಯಾರು ಎಂಬುದೇ ನನಗೆ ಗೊತ್ತಿಲ್ಲ: ಸಂಸದ ರಾಜಾ ಅಮರೇಶ್ವರ ನಾಯ್ಕ್

ಒಟ್ಟಾರೆ ಮಂಡ್ಯದ ಮನ್ಮುಲ್ ಮೆಗಾ ಡೇರಿಯಲ್ಲಿ ಇದೀಗ ದಿನಕ್ಕೆ ನೂರು ಕೆಜಿಯಷ್ಟು ಬೆಲ್ಲದ ಬರ್ಫಿ ತಯಾರಾಗುತ್ತಿದೆ. ಈಗ ಮಾರುಕಟ್ಟೆಯಲ್ಲಿ ಬೆಲ್ಲದ ಬರ್ಫಿಗೆ ಸಿಕ್ಕಾ ಪಟ್ಟೆ ಡಿಮ್ಯಾಂಡ್ ಸೃಷ್ಠಿಯಾಗಿದ್ದು, ಮುಂಬರುವ ದಿನಗಳಲ್ಲಿ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಲು ಮನ್ಮುಲ್ ನಿರ್ಧರಿಸಿದೆ. ಮಂಡ್ಯದ ಬೆಲ್ಲದ ಬರ್ಫಿಗೆ ಡಿಮ್ಯಾಂಡ್ ಬರ್ತಾ ಇರೋದು ಕೇವಲ ಮನ್ಮುಲ್ ಗಷ್ಟೇ ಅಲ್ಲದೆ, ರೈತರ ಮೊಗದಲ್ಲೂ ಕೂಡ ಮಂದಹಾಸ ಮೂಡಿಸಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News