ನವದೆಹಲಿ: ಹನುಮಾನ್ ಜಾತೀಯ ಹುಡುಕಾಟ ಈಗ ತೀವ್ರಗೊಂಡಿದೆ.ಈ ಹಿಂದೆ ಉತ್ತರಪ್ರದೇಶದ ಸಿಎಂ ಆದಿತ್ಯನಾಥ್ ಹನುಮಾನ್ ನ್ನು ದಲಿತ ಸಮುದಾಯಕ್ಕೆ ಸೇರಿದವನು ಎಂದು ಕರೆದಿದ್ದರು.ಇದಾದ ಬೆನ್ನಲ್ಲಿ NCST ಅಧ್ಯಕ್ಷ ನಂದ ಕುಮಾರ್ ಅವರು ಆದಿವಾಸಿ ಸಮುದಾಯ ಎಂದು ತಿಳಿಸಿದ್ದರು.
ಈಗ ಎಲ್ಲ ಹೇಳಿಕೆಗಳ ಬೆನ್ನಲ್ಲೇ ಈಗ ಮತ್ತೊಂದು ಸುದ್ದಿ ಹೊರಬಂದಿದೆ.ಅದೇನಪ್ಪಾ ಅಂದ್ರೆ ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ಈಗ ಹನುಮಾನ್ ಆರ್ಯ ಜಾತಿಯವನು ಎಂದು ಹೇಳಿದ್ದಾರೆ.
Hanuman ji arya theyy. Iss baat ko maine spasht kiya hai, uss samay arya jaati thi aur Hanuman ji usi arya jaati ke mahapurush theyy: Union Minister Satypal Singh (30.11.2018) https://t.co/XmpaaNbzzH
— ANI (@ANI) December 1, 2018
ಎಎನ್ಐ ಉಲ್ಲೇಖಿಸಿರುವ ಸತ್ಯಪಾಲ್ ಸಿಂಗ್ ಅವರ ಹೇಳಿಕೆಯಲ್ಲಿ " ಭಗವಾನ್ ರಾಮ ಅಥವಾ ಹನುಮಾನ್ ಇದ್ದ ಕಾಲದಲ್ಲಿ ಈ ದೇಶದಲ್ಲಿ ಯಾವುದೇ ರೀತಿಯ ಜಾತಿ ವ್ಯವಸ್ಥೆ ಇರಲಿಲ್ಲ. ದಲಿತ ವಂಚಿತ, ಶೋಷಿತ ಎಂದು ಯಾವುದು ಇರಲಿಲ್ಲ. ನೀವು ವಾಲ್ಮೀಕಿ ರಾಮಾಯಣ ಅಥವಾ ರಾಮಚರಿತ್ರ ಮಾನಸವನ್ನು ಓದಿದ್ದೆ ಆದಲ್ಲಿ ಆ ಸಮಯದಲ್ಲಿ ಯಾವುದೇ ಜಾತಿ ವ್ಯವಸ್ಥೆ ಇಲ್ಲವೆನ್ನುವುದರ ಬಗ್ಗೆ ತಿಳಿಯುತ್ತದೆ. ಹನುಮಾನ್ ಆರ್ಯ ಜಾತಿಗೆ ಸೇರಿದವನು ಎನ್ನುವುದನ್ನು ನಾನು ಸ್ಪಷ್ಟಪಡಿಸುತ್ತೇನೆ,ಆಗ ಆರ್ಯ ಜಾತಿ ಅಸ್ತಿತ್ವದಲ್ಲಿತ್ತು. ಹನುಮಾನ್ ಕೂಡ ಅದೇ ಆರ್ಯ ಜಾತಿಗೆ ಸೇರಿದ ಮಹಾಪುರುಷ" ಎಂದು ಅವರು ತಿಳಿಸಿದ್ದಾರೆ.
ಕಳೆದ ವಾರ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹನುಮಂತ ಒಬ್ಬ ಅರಣ್ಯವಾಸಿ.ಎಲ್ಲ ಸಮುದಾಯಗಳನ್ನು ಉತ್ತರದಿಂದ ದಕ್ಷಿಣಕ್ಕೆ ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ಸಂಪರ್ಕಿಸಲು ಕೆಲಸ ಮಾಡಿದ ಒಬ್ಬ ದಲಿತ' ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದರು. ಇದರ ನಂತರ ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಆಯೋಗ (NCST) ಅಧ್ಯಕ್ಷ ನಂದಕುಮಾರ್ ಸಾಯಿ ಹನುಮಾನ್ ಬುಡಕಟ್ಟು ಸಮುದಾಯಕ್ಕೆ ಸೇರಿದವನು ಎಂದು ಹೇಳಿದ್ದರು.