Lalit Modi: ಐಪಿಎಲ್ ಸೃಷ್ಟಿಕರ್ತ ಲಲಿತ್ ಮೋದಿ ಸ್ಥಿತಿ ನೋಡಿ.. ಐಸಿಯುನಲ್ಲಿ ನರಳುತ್ತಿರುವ ಖ್ಯಾತ ಉದ್ಯಮಿ

Lalit Modi Health Condition : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಲಲಿತ್ ಮೋದಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಲಂಡನ್‌ನ ಆಸ್ಪತ್ರೆಯೊಂದರ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಲಿತ್ ಮೋದಿ ಆಮ್ಲಜನಕದ ಬೆಂಬಲದೊಂದಿಗೆ ಆಸ್ಪತ್ರೆಯಲ್ಲಿದ್ದಾರೆ.   

Written by - Chetana Devarmani | Last Updated : Jan 14, 2023, 06:00 PM IST
  • ಐಪಿಎಲ್ ಸೃಷ್ಟಿಕರ್ತ ಲಲಿತ್ ಮೋದಿ ಸ್ಥಿತಿ ನೋಡಿ
  • ಐಸಿಯುನಲ್ಲಿ ನರಳುತ್ತಿರುವ ಖ್ಯಾತ ಉದ್ಯಮಿ
  • ಲಂಡನ್‌ನ ಆಸ್ಪತ್ರೆಯೊಂದರ ಐಸಿಯುನಲ್ಲಿ ಚಿಕಿತ್ಸೆ
Lalit Modi: ಐಪಿಎಲ್ ಸೃಷ್ಟಿಕರ್ತ ಲಲಿತ್ ಮೋದಿ ಸ್ಥಿತಿ ನೋಡಿ.. ಐಸಿಯುನಲ್ಲಿ ನರಳುತ್ತಿರುವ ಖ್ಯಾತ ಉದ್ಯಮಿ  title=
ಲಲಿತ್ ಮೋದಿ

Lalit Modi in ICU : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಲಲಿತ್ ಮೋದಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಲಂಡನ್‌ನ ಆಸ್ಪತ್ರೆಯೊಂದರ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಲಿತ್ ಮೋದಿ ಆಮ್ಲಜನಕದ ಬೆಂಬಲದೊಂದಿಗೆ ಆಸ್ಪತ್ರೆಯಲ್ಲಿದ್ದಾರೆ. ಕೊರೊನಾ ವೈರಸ್, ನ್ಯುಮೋನಿಯಾ ದಾಳಿಯಿಂದಾಗಿ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು. ಐಪಿಎಲ್‌ನ ಮಾಜಿ ಅಧ್ಯಕ್ಷರು 14 ದಿನಗಳ ಅವಧಿಯಲ್ಲಿ ಎರಡು ಬಾರಿ ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ ಮತ್ತು ನ್ಯುಮೋನಿಯಾ ದಾಳಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಎರಡು ವಾರಗಳಲ್ಲಿ ಎರಡು ಬಾರಿ ಕೊರೊನಾ ಸೋಂಕು ತಗುಲಿದೆ. ಕೋವಿಡ್‌ನಿಂದಾಗಿ ಕ್ವಾರಂಟೈನ್‌ನಲ್ಲಿದ್ದಾಗ, ನ್ಯುಮೋನಿಯಾ ಕೂಡ ಬಂದಿತು ಮತ್ತು ಸ್ವಲ್ಪ ಕಷ್ಟವಾಯಿತು. ಇಬ್ಬರು ವೈದ್ಯರ ಜೊತಡ ಏರ್ ಆಂಬ್ಯುಲೆನ್ಸ್‌ನಲ್ಲಿ ನನ್ನನ್ನು ಲಂಡನ್‌ನಲ್ಲಿರುವ ಆಸ್ಪತ್ರೆಗೆ ಸಾಗಿಸಲಾಯಿತು. ದುರದೃಷ್ಟವಶಾತ್ ಇನ್ನೂ 24/7 ಬಾಹ್ಯ ಆಮ್ಲಜನಕದಲ್ಲಿರಬೇಕು. ನಾನು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದು ಲಲಿತ್ ಮೋದಿ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by Lalit Modi (@lalitkmodi)

 

ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ಆಸ್ಪತ್ರೆಯ ಬೆಡ್‌ನಲ್ಲಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದವರೆಲ್ಲ ‘ಬೇಗ ಗುಣಮುಖರಾಗಿ’ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಬಾಲಿವುಡ್‌ ಬೆಡಗಿ ಸುಶ್ಮಿತಾ ಸೇನ್ ಅವರ ಸಹೋದರ ರಾಜೀವ್ ಸೇನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಲಲಿತ್‌ ಮೋದಿ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ : Santokh Singh Chaudhary: ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್‌ ಸಂಸದ ವಿಧಿವಶ

ಇಂಡಿಯನ್ ಟಿ 20 ಲೀಗ್ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್ ಮಾಡುವ ವಿಚಾರವಾಗಿ ಜುಲೈ 2022 ರಲ್ಲಿ ಸುದ್ದಿಯಾಗಿದ್ದರು. ಮಾಲ್ಡೀವ್ಸ್ ಮತ್ತು ಲಂಡನ್‌ನಲ್ಲಿ ಇಬ್ಬರೂ ಒಟ್ಟಿಗೆ ಇರುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಸದ್ಯ ತಾವು ಡೇಟಿಂಗ್ ಮಾಡುತ್ತಿದ್ದು, ಶೀಘ್ರದಲ್ಲೇ ಮದುವೆಯಾಗುವುದಾಗಿ ಸ್ಪಷ್ಟಪಡಿಸಿದ್ದರು. ಆದರೆ ಕೆಲವು ದಿನಗಳ ನಂತರ ಲಲಿತ್‌ ಮೋದಿ ಮೋದಿ ಮತ್ತು ಸುಶ್ಮಿತಾ ಬೇರ್ಪಟ್ಟರು.

ಲಲಿತ್ ಮೋದಿ ಅವರು ಮಿನಲ್ ಮೋದಿ ಅವರನ್ನು ವಿವಾಹವಾಗಿದ್ದಾರೆ. ದಂಪತಿಗಳು 17 ಅಕ್ಟೋಬರ್ 1991 ರಂದು ಮುಂಬೈನಲ್ಲಿ ವಿವಾಹವಾದರು. ಮಿನಲ್ ಮೋದಿ ಡಿಸೆಂಬರ್ 2018 ರಲ್ಲಿ ಕ್ಯಾನ್ಸರ್ ನಿಂದ ನಿಧನರಾದರು. ನಂತರ ಅವರು ಸುಶ್ಮಿತಾ ಸೇನ್ ಅವರನ್ನು ಭೇಟಿಯಾದರು. ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾರತದಿಂದ ಪರಾರಿಯಾಗಿರುವ ಲಲಿತ್ ಮೋದಿ 2010 ರಿಂದ ಲಂಡನ್‌ನಲ್ಲಿ ನೆಲೆಸಿದ್ದಾರೆ. 

ಇದನ್ನೂ ಓದಿ : Samantha : ಮನಸ್ಸಿನ ಎಲ್ಲಾ ಭಾವನೆಗಳಿಂದ ದೂರ.. ಸಮಂತಾ ಹೀಗೆ ಹೇಳಿದ್ದೇಕೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News