Chanakya Niti for Wife Husband: ಮಹಾನ್ ಅರ್ಥಶಾಸ್ತ್ರಜ್ಞ ಮತ್ತು ರಾಜತಾಂತ್ರಿಕರಾಗಿದ್ದ ಆಚಾರ್ಯ ಚಾಣಕ್ಯರು ವೈವಾಹಿಕ ಜೀವನವನ್ನು ಸುಖಮಯವಾಗಿಸಲು ತಮ್ಮ ನೀತಿ ಶಾಸ್ತ್ರದಲ್ಲಿ ಹಲವು ಸಂಗತಿಗಳ ಕುರಿತು ಉಲ್ಲೇಖಿಸಿದ್ದಾರೆ. ಇದರೊಂದಿಗೆ, ಅವರು ತಮ್ಮ ನೀತಿಗಳಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಅನೇಕ ಸಲಹೆಗಳನ್ನು ನೀಡಿದ್ದಾರೆ. ಇವುಗಳನ್ನು ಪತಿ ಪತ್ನಿಯರು ತಮ್ಮ ಜೀವನದಲ್ಲಿ ದಿನನಿತ್ಯ ಅಳವಡಿಸಿಕೊಂಡರೆ ಅವರ ಸಂಬಂಧದಲ್ಲಿ ಯಾವುದೇ ಅಂತರ ಉಂಟಾಗುವುದಿಲ್ಲ ಎಂದು ಹೇಳಿದ್ದಾರೆ. ಅಂದರೆ, ಚಾಣಕ್ಯ ಸೂಚಿಸಿರುವ ಸಲಹೆಗಳನ್ನು ಅನುಸರಿಸುವವರ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ ಎನ್ನಲಾಗುತ್ತದೆ. ಹಾಗಾದರೆ ಆಚಾರ್ಯ ಚಾಣಕ್ಯರು ಪ್ರತಿದಿನ ಯಾವ ಕೆಲಸ ಮಾಡಬೇಕೆಂದು ಸಲಹೆಗಳನ್ನು ನೀಡಿದ್ದಾರೆ ಮತ್ತು ಅದು ಪತಿ-ಪತ್ನಿಯರ ನಡುವಿನ ಸಂಬಂಧವನ್ನು ಹೇಗೆ ಬಲಪಡಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಪತಿ-ಪತ್ನಿಯರು ಪರಸ್ಪರ ಗೌರವಿಸಬೇಕು
ವೈವಾಹಿಕ ಜೀವನವನ್ನು ಉತ್ತಮಗೊಳಿಸಲು, ಪತಿ-ಪತ್ನಿ ಇಬ್ಬರ ನಡುವೆ ಪ್ರೀತಿ ಮತ್ತು ಇಬ್ಬರೂ ಪರಸ್ಪರ ಗೌರವಿಸುವುದು ತುಂಬಾ ಮುಖ್ಯ. ಚಾಣಕ್ಯ ನೀತಿಯಲ್ಲಿ, ಪ್ರೀತಿಯೊಂದಿಗೆ ಗೌರವವಿದ್ದಾಗ ಸಂಬಂಧವು ಸುಂದರವಾಗಿರುತ್ತದೆ ಎಂದು ಹೇಳಲಾಗಿದೆ. ಆದ್ದರಿಂದ, ಗಂಡ ಮತ್ತು ಹೆಂಡತಿ ಯಾವಾಗಲೂ ಪರಸ್ಪರ ಪ್ರೀತಿಸಬೇಕು ಮತ್ತು ಮತ್ತು ಪರಸ್ಪರರ ಭಾವನೆಯನ್ನು ಗೌರವಿಸಬೇಕು.
ಎಂದಿಗೂ ಅಹಂಕಾರಪಡಬೇಡಿ
ಆಚಾರ್ಯ ಚಾಣಕ್ಯರ ಪ್ರಕಾರ, ಪತಿ ಮತ್ತು ಪತ್ನಿ ಎಂದರೆ ಸಂಸಾರ ಎಂಬ ಬಂಡಿಯ ಎರಡು ಗಾಲಿಗಳಿದ್ದಂತೆ ಎರಡು ಗಾಲಿಗಳು ಒಟ್ಟಿಗೆ ಮುಂದಕ್ಕೆ ಚಲಿಸಿದಾಗ ಮಾತ್ರ ಸಂಬಂಧವು ಉತ್ತಮವಾಗಿರುತ್ತದೆ. ಪತಿ-ಪತ್ನಿಯರು ಯಾವತ್ತೂ ಯಾವುದರ ಬಗ್ಗೆಯೂ ಅಹಂಕಾರ ಪಡಬಾರದು ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ನೀವು ಪರಸ್ಪರರಿಗೆ ಅಹಂಕಾರವನ್ನು ತೋರಿಸಿದರೆ ಸಂಬಂಧವು ಹಾಳಾಗುತ್ತದೆ.
ಪತಿ ಪತ್ನಿಯರು ತಾಳ್ಮೆಯಿಂದಿರಬೇಕು
ಯಾವುದೇ ಸಂದರ್ಭದಲ್ಲೂ ಸಂಯಮವನ್ನು ಕಾಯ್ದುಕೊಳ್ಳುವವರು ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬಹುದು ಮತ್ತು ಎಂತಹ ಕಷ್ಟದ ಪರಿಸ್ಥಿತಿ ಎದುರಾದರೂ ಕೂಡ ಆ ಪರಿಷ್ಟಿತಿಯಿಂದ ಹೊರಬರಬಹುದು ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಸಂಬಂಧವನ್ನು ಕಾಪಾಡಿಕೊಳ್ಳಲು ಪತಿ-ಪತ್ನಿಯರು ಯಾವಾಗಲೂ ತಾಳ್ಮೆಯನ್ನು ಇಟ್ಟುಕೊಳ್ಳುವುದು ಸಹ ತುಂಬಾ ಮುಖ್ಯವಾಗಿದೆ.
ಇದನ್ನೂ ಓದಿ-Lucky Moles: ದೇಹದ ಈ ಅಂಗದ ಮೇಲೆ ಮಚ್ಚೆ ಇದ್ದರೆ, ಸೌಂದರ್ಯ ಮತ್ತು ಬುದ್ಧಿಮತ್ತೆಯಲ್ಲಿ ನಿಮಗೆ ನೀವೇ ಸರಿಸಾಟಿ ಎಂದರ್ಥ
ತಮ್ಮ ನಡುವಿನ ಖಾಸಗಿ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು
ಪತಿ-ಪತ್ನಿ ತಮ್ಮ ಖಾಸಗಿ ವಿಚಾರಗಳನ್ನು ಯಾರಿಗೂ ಹೇಳಬಾರದು ಎಂದು ಆಚಾರ್ಯ ಚಾಣಕ್ಯ ತಮ್ಮ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ. ಹೀಗೆ ಮಾಡುವುದರಿಂದ ಸಂಬಂಧ ಹದಗೆಡುತ್ತದೆ, ಏಕೆಂದರೆ ಪತಿ-ಪತ್ನಿಯರ ನಡುವೆ ನಡೆಯುವ ವಿಷಯಗಳನ್ನು ಹಂಚಿಕೊಳ್ಳುವುದು ಪರಸ್ಪರರ ನಂಬಿಕೆಗೆ ಪೆಟ್ಟು ಕೊಡುತ್ತದೆ. ಪತಿ ಮತ್ತು ಪತ್ನಿ ಇಬ್ಬರೂ ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಇದನ್ನೂ ಓದಿ-Vastu Tips: ದಾಂಪತ್ಯ ಜೀವನದಲ್ಲಿ ಸಮಸ್ಯೆಯೇ, ಅಶೋಕ ಮರದ ಎಲೆಗಳ ಈ ಉಪಾಯ ಟ್ರೈ ಮಾಡಿ ನೋಡಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.