ಬೆಂಗಳೂರು: ಹೈದರಾಬಾದ್ ಮೂಲದ ಎಸ್ಎಎಸ್ ಗ್ರೂಪ್ IPSS ನೊಂದಿಗೆ ಬಹುನಿರೀಕ್ಷಿತ 2023ರ ಕರ್ನಾಟಕ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಆಡಳಿತಾರೂಢ ಬಿಜೆಪಿಗಿಂತಲೂ ಮತದಾರರ ಚಿತ್ರ ಕಾಂಗ್ರೆಸ್ನತ್ತ ಹೆಚ್ಚಿರುವುದು ಕಂಡುಬಂದಿದೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದ ಪ್ರಮುಖ ಪಕ್ಷಗಳ ಪೈಕಿ ಮತದಾರರ ಒಲವು ಯಾರ ಕಡೆ ಹೆಚ್ಚಿದೆ ಎಂಬುದರ ಬಗ್ಗೆ ಸ್ಯಾಂಪಲ್ ಸಂಗ್ರಹಿಸಲಾಗಿದೆ.
ಯಾವುದೇ ಡಿಜಿಟಲ್ ಅಥವಾ ಆನ್ಲೈನ್ ಸ್ಯಾಂಪಲ್ಗಳನ್ನು ಸಂಗ್ರಹಿಸದೆ ನೇರವಾಗಿ ಮತದಾರರ ಬಳಿಯೇ ತೆರಳಿ ಅವರ ಅಭಿಪ್ರಾಯ ಪಡೆಯಲಾಗಿದೆ. ವಿವಿಧ ಸಮುದಾಯಗಳಿಗೆ ಸೇರಿದ ಮತದಾರರೊಂದಿಗೆ ನೇರವಾಗಿ ಮಾತನಾಡಿ ಅಭಿಪ್ರಾಯ ಸಂಗ್ರಹಿಸಿದ್ದು, ಅವರ ಒಲವು ಯಾವ ಪಕ್ಷದ ಪರವಿದೆ ಎಂಬುದನ್ನು ಕಂಡುಕೊಳ್ಳಲಾಗಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಗಳಿಗೆ ನಿರೀಕ್ಷಿತ ಮತ ಹಂಚಿಕೆ
ಸಮೀಕ್ಷೆ ಪ್ರಕಾರ ಕಾಂಗ್ರೆಸ್ಗೆ ಅತಿಹೆಚ್ಚಿನ ಮತ ಸಿಕ್ಕಿದ್ದು, ಶೇ.40ರಷ್ಟು ಮತದಾರರು ‘ಕೈ’ ಪಕ್ಷದ ಪರ ಒಲವು ಹೊಂದಿದ್ದಾರೆಂದು ತಿಳಿದುಬಂದಿದೆ. ಅದೇ ರೀತಿ ಆಡಳಿತಾರೂಢ ಬಿಜೆಪಿ ಪರ ಶೇ.34ರಷ್ಟು ಮತದಾರರು ಒಲವು ಹೊಂದಿದ್ದಾರೆಂದು ತಿಳಿದುಬಂದಿದೆ. ಇನ್ನೂ ಜೆಡಿಎಸ್ ಪರ ಶೇ.17ರಷ್ಟು ಮತದಾರರು ಒಲವು ಹೊಂದಿದ್ದಾರೆ ಮತ್ತು ಶೇ.6ರಷ್ಟು ಜನರು ಇತರರ ಪರವಾಗಿದ್ದರೆ, ಶೇ.3ರಷ್ಟು ಮತದಾರರು ಸೈಲೆಂಟ್ ವೋಟ್ ಫ್ಯಾಕ್ಟರ್(SVF) ಆಗಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: Santro Ravi CID Custody: ಜ.30ರವರೆಗೆ ಸಿಐಡಿ ವಶಕ್ಕೆ ಸ್ಯಾಂಟ್ರೋ ರವಿ!
ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪ್ರಮುಖ ಅಂಶಗಳು (M-ಫ್ಯಾಕ್ಟರ್ಗಳು)
1. ಹಣದುಬ್ಬರ
2. ರೈತರ ಸಮಸ್ಯೆಗಳು, ಕೃಷಿ ಸಾಲಗಳನ್ನು ಹೆಚ್ಚಿಸುವುದು ಮತ್ತು ಕೃಷಿ ಉತ್ಪನ್ನಗಳಿಗೆ MSP
3. ನಿರುದ್ಯೋಗ
4. ಸರ್ಕಾರಿ ಸಂಸ್ಥೆಗಳಲ್ಲಿ ಮತ್ತು ಸರ್ಕಾರಿ ಕೆಲಸಗಳಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರ.
5. ಗ್ಯಾಸ್, ಡೀಸೆಲ್, ಪೆಟ್ರೋಲ್ ಮತ್ತು ಅಗತ್ಯ ವಸ್ತುಗಳಂತಹ ಬೆಲೆಗಳ ಹೆಚ್ಚಳ
6. ಮರಳು ಮತ್ತು ಲಿಕ್ಕರ್ ಮಾಫಿಯಾ
7. ವೈದ್ಯಕೀಯ ಮತ್ತು ಮೂಲಸೌಕರ್ಯಗಳ ಕೊರತೆ
8. ರಿಯಲ್ ಎಸ್ಟೇಟ್ / ಲ್ಯಾಂಡ್ ಮಾಫಿಯಾ
9. ಧರ್ಮ / ಕೆಲವು ಜಾತಿಗಳು / ಸಮುದಾಯಗಳಲ್ಲಿ ಕೋಮು ವ್ಯತ್ಯಾಸಗಳು
10. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸಲು ಬಿಜೆಪಿಯಿಂದ ಶಾಸಕರ ಖರೀದಿ
11. ಪಿಎಸ್ಐ ಹಗರಣ (ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಹಗರಣ)
12. ಗುತ್ತಿಗೆದಾರರ ಸಂಘದಿಂದ 40% ಭ್ರಷ್ಟಾಚಾರ ಆರೋಪ ಆಯೋಗ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ
13. ಮಹಾರಾಷ್ಟ್ರ - ಕರ್ನಾಟಕ ಗಡಿಭಾಗದ ಜಿಲ್ಲೆಗಳ ಸಮಸ್ಯೆ
14. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ಜಲ ವಿವಾದ
ಈ ಎಲ್ಲಾ ಪ್ರಮುಖ ಅಂಶಗಳು ಮುಂಬರುವ ಕೆರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಭಾವ ಬೀರಲಿವೆ ಎಂದು ಈ ಚುನಾವಣಾ ಪೂರ್ವ ಸಮೀಕ್ಷೆ ತಿಳಿಸಿದೆ.
ಇದನ್ನೂ ಓದಿ: Suttur Jatra Mahotsav: ಇಂದಿನಿಂದ 6 ದಿನಗಳ ಕಾಲ ಅದ್ದೂರಿ ಸುತ್ತೂರು ಜಾತ್ರಾ ಮಹೋತ್ಸವ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.