12 ವರ್ಷದ ಬಳಿಕ ಈ ರಾಶಿಯವರಿಗೆ ಗುರು ದೆಸೆ! ಇನ್ನು ಇವರು ಮುಟ್ಟಿದ್ದೆಲ್ಲಾ ಚಿನ್ನ !

12 ವರ್ಷಗಳ ನಂತರ ಗುರು ಗ್ರಹವು ಮೇಷ ರಾಶಿಯನ್ನು ಪ್ರವೇಶಿಸುತ್ತಿದೆ. ಗುರುವು ಯಾವುದೇ ರಾಶಿಯಲ್ಲಿ ಸಂಕ್ರಮಿಸಿದಾಗಲೂ ಅದು ಕೆಲವು ರಾಶಿಯವರ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತದೆ.

Written by - Ranjitha R K | Last Updated : Jan 23, 2023, 01:27 PM IST
  • ಶನಿಯ ಹಾಗೆ ಗುರುವಿನ ಸಂಕ್ರಮಣವೂ ಬಹಳ ಮುಖ್ಯ.
  • ಈ ಎರಡೂ ಗ್ರಹಗಳು ಬಹಳ ನಿಧಾನವಾಗಿ ಚಲಿಸುತ್ತವೆ.
  • ಜಾತಕದ ಮೇಲೆ ಎರಡು ಗ್ರಹಗಳ ಪ್ರಭಾವ ಬಹಳ ಸಮಯದವರೆಗೆ ಇರುತ್ತದೆ.
12 ವರ್ಷದ ಬಳಿಕ ಈ ರಾಶಿಯವರಿಗೆ ಗುರು ದೆಸೆ! ಇನ್ನು ಇವರು ಮುಟ್ಟಿದ್ದೆಲ್ಲಾ ಚಿನ್ನ ! title=

ಬೆಂಗಳೂರು : ಶನಿಯ ಹಾಗೆ ಗುರುವಿನ ಸಂಕ್ರಮಣವೂ ಬಹಳ ಮುಖ್ಯ. ಈ ಎರಡೂ ಗ್ರಹಗಳು ಬಹಳ ನಿಧಾನವಾಗಿ ಚಲಿಸುತ್ತವೆ. ಮಾತ್ರವಲ್ಲ ಜಾತಕದ ಮೇಲೆ ಈ ಎರಡು ಗ್ರಹಗಳ ಪ್ರಭಾವ ಕೂಡಾ ಬಹಳ ಸಮಯದವರೆಗೆ ಇರುತ್ತದೆ. ಗುರುವನ್ನು ಅತ್ಯಂತ ಮಂಗಳಕರ ಗ್ರಹ ಎಂದು ಕರೆಯಲಾಗುತ್ತದೆ. ಯಾರ ಮೇಲೆ ಗುರುವಿನ ದೃಷ್ಟಿ ಬೀಳುತ್ತದೆಯೋ, ಅವರು ಶುಭ ಫಲಿತಾಂಶಗಳನ್ನೇ ಪಡೆಯಲು ಆರಂಭಿಸುತ್ತಾರೆ. ಗುರು ಗ್ರಹವು ಏಪ್ರಿಲ್ 22  ರಂದು ಮೇಷ ರಾಶಿಯನ್ನು ಪ್ರವೇಶಿಸಲಿದೆ. 

ಗುರುವಿನ ಪ್ರಭಾವ:
ಶನಿಯು ಎರಡೂವರೆ ವರ್ಷಗಳಲ್ಲಿ ರಾಶಿಯನ್ನು ಬದಲಾಯಿಸುತ್ತಾನೆ. ಆದರೆ ಗುರುವು ಸುಮಾರು 13 ತಿಂಗಳುಗಳಲ್ಲಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುತ್ತಾನೆ. ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿ ಗುರು. ಗುರುವು ಯಾವುದೇ ರಾಶಿಯಲ್ಲಿ ಸಂಕ್ರಮಿಸಿದಾಗಲೂ ಅದು ಕೆಲವು ರಾಶಿಯವರ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತದೆ. 12 ವರ್ಷಗಳ ನಂತರ ಗುರು ಗ್ರಹವು ಮೇಷ ರಾಶಿಯನ್ನು ಪ್ರವೇಶಿಸುತ್ತಿದೆ. 

ಇದನ್ನೂ ಓದಿ : Tulsi plant: ತುಳಸಿ ಗಿಡದ ಪಕ್ಕದಲ್ಲಿ ಬೆಳೆಯುವ ಈ ಸಸ್ಯದಲ್ಲಿ ವಾಸಿಸುತ್ತಾರೆ ಲಕ್ಷ್ಮೀ-ವಿಷ್ಣು: ಇದು ಶ್ರೀಮಂತಿಕೆ ಒದಗುವ ಸಂಕೇತ!

ಈ ರಾಶಿಯವರಿಗೆ ಆಗುವುದು ವಿಶೇಷ ಲಾಭ : 
ಮೇಷ ರಾಶಿ : ಮೇಷ ರಾಶಿಯ ಮೊದಲ ಮನೆಯಲ್ಲಿ ಗುರುವಿನ ಸಂಚಾರ ನಡೆಯಲಿದೆ. ಏಪ್ರಿಲ್ 22 ರಿಂದ, ಗುರುವು ಮುಂದಿನ ಒಂದು ವರ್ಷದವರೆಗೆ ಶುಭ ಫಲವನ್ನೇ ನೀಡುತ್ತಾನೆ. ಗುರುಗ್ರಹದ ಸಂಚಾರದಿಂದ ನಿಮ್ಮ ಪ್ರಗತಿಯಾಗಲಿದೆ. ಸಮಾಜದಲ್ಲಿ ಗೌರವವೂ ಹೆಚ್ಚಾಗುತ್ತದೆ. ಗುರುವಿನ ರಾಶಿ ಬದಲಾವಣೆಯಿಂದ ವಿವಾಹಿತರು ಉತ್ತಮ ಫಲ ಪಡೆಯಲಿದ್ದಾರೆ. 

ಕರ್ಕಾಟಕ ರಾಶಿ : 
ದೇವಗುರು ಗುರುವಿನ ಸಂಕ್ರಮಣ ಈ ರಾಶಿಯ ಕರ್ಮದ ಭಾವದಲ್ಲಿ ನಡೆಯುವುದು. ಇದು ನಿಮ್ಮ ಕೆಲಸದ ಮೇಲೆ ಉತ್ತಮ ಪರಿಣಾಮ ಬೀರಲಿದೆ.  ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ. ಕೆಲಸ ಮಾಡುವ ಸ್ಥಳದಲ್ಲಿ  ಗೌರವ ಮತ್ತು ಆದಾಯ ಹೆಚ್ಚಾಗುವುದು. ಪೂರ್ವಿಕರ ಆಸ್ತಿಯಿಂದ ಪ್ರಯೋಜನವಾಗಲಿದೆ. 

ಇದನ್ನೂ ಓದಿ : Mangal Margi 2023: ವೃಷಭ ರಾಶಿಯಲ್ಲಿ ಮಂಗಳ ಸಂಚಾರ: ಈ ರಾಶಿಯ ಜನರಿಗೆ ಎಣಿಸಲಾಗದಷ್ಟು ಧನಾಗಮನ ಖಂಡಿತ

ಮೀನ ರಾಶಿ : 
ಈ ರಾಶಿಯ ಎರಡನೇ ಮನೆಯಲ್ಲಿ ಗುರುವಿನ ಸಂಕ್ರಮಣ ನಡೆಯಲಿದೆ.  ಈ ಕಾರಣದಿಂದ ಮೀನ ರಾಶಿಯವರು ಎಚ್ಚರದಿಂದಿರಬೇಕು. ಗುರುವು ತನ್ನ ಸ್ವಂತ ರಾಶಿಯಿಂದ ಮೇಷ ರಾಶಿಗೆ ತೆರಲುವುದು ಮೀನ ರಾಶಿಯವರಿಗೆ ಉತ್ತಮ ಫಲವನ್ನು ನೀಡಲಿದ್ದಾನೆ. ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನೀವು ಮಾಡುವ ವ್ಯವಹಾರದಲ್ಲಿ ಯಶಸ್ವಿಯಾಗುವಿರಿ.  

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News