Kailash Kher Life Story : ಬಾಲಿವುಡ್ನ ಜನಪ್ರಿಯ ಗಾಯಕ ಕೈಲಾಶ್ ಖೇರ್ ಮೇಲೆ ಇತ್ತೀಚೆಗೆ ಲೈವ್ ಮ್ಯೂಸಿಕ್ ಕಾನ್ಸರ್ಟ್ನಲ್ಲಿ ಬಾಟಲಿ ಎಸೆಯಲಾಯಿತು. ಈ ಮೂಲಕ ಖ್ಯಾತ ಗಾಯಕ ಸುದ್ದಿಯಲ್ಲಿದ್ದರು. ಆದರೆ, ಅವರು ಬಾಟಲಿ ಹೊಡೆತದಿಂದ ಸ್ವಲ್ಪ ದೂರದಲ್ಲಿ ಪಾರಾಗಿದ್ದಾರೆ ಮತ್ತು ದಾಳಿಕೋರನನ್ನು ತಕ್ಷಣವೇ ಬಂಧಿಸಲಾಯಿತು. ಈಗ ಮತ್ತೊಮ್ಮೆ ಕೈಲಾಶ್ ಖೇರ್ ಬಗ್ಗೆ ಚಿತ್ರರಂಗದಲ್ಲಿ ಚರ್ಚೆಯಾಗುತ್ತಿದೆ. ಈಬಾರಿ ಅವರೂ ಸುದ್ದಿಯಲ್ಲಿರುವುದು ಹಾಡುಗಳಿಗಾಗಿ ಅಲ್ಲ. ಅವರ ವೈಯಕ್ತಿಕ ಜೀವನದಲ್ಲಿನ ಕೆಟ್ಟ ಘಟನೆಯಿಂದ ಕೈಲಾಶ್ ಖೇರ್ ಸುದ್ದಿಯಲ್ಲಿದ್ದಾರೆ. ಸಂದರ್ಶನವೊಂದರಲ್ಲಿ ಕೈಲಾಶ್ ಖೇರ್ ಅವರು ತಮ್ಮ ಜೀವನದ ಬಗ್ಗೆ ಮಾತನಾಡಿದ್ದಾರೆ. ತಾವು ಆತ್ಮಹತ್ಯೆಯ ಭಯಾನಕ ನಿರ್ಧಾರ ತೆಗೆದುಕೊಂಡಿದ್ದ ಬಗ್ಗೆ ಹೇಳಿದ್ದಾರೆ.
ಕೈಲಾಶ್ ಖೇರ್ ಹಿಂದಿ ಚಿತ್ರರಂಗದಲ್ಲಿ ಅತ್ಯುತ್ತಮ ಹಾಡುಗಳನ್ನು ಹಾಡಿದ್ದಾರೆ. ಇಂದು ಅವರು ಯಶಸ್ವಿ ಗಾಯಕರಾಗಿದ್ದಾರೆ. ಅವರ ಕಂಠಸಿರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಆದರೆ ಇಂತಹ ಯಶಸ್ವಿ ಗಾಯಕ ಕೂಡ ಜೀವನದ ಒಂದು ಹಂತದಲ್ಲಿ ಕುಗ್ಗಿದ್ದರು. ಸೂಸೈಡ್ ಮಾಡಿಕೊಳ್ಳಲು ನಿರ್ಧರಿಸಿದ್ದರು. 20 ಅಥವಾ 21 ವರ್ಷ ವಯಸ್ಸಿನವರಿದ್ದಾಗ ಕೈಲಾಶ್ ಖೇರ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದರಂತೆ. ಸಂದರ್ಶನದ ಸಮಯದಲ್ಲಿ, ಕೈಲಾಶ್ ಅವರು ಈ ಬಗ್ಗೆ ಹೇಳಿದ್ದಾರೆ. ಸಾಯಬೇಕೆಂದು ಗಂಗಾ ನದಿಗೆ ಹಾರಿದ್ದೆ ಎಂದಿದ್ದಾರೆ.
ಇದನ್ನೂ ಓದಿ : "ನನಗೆ ಈಗಾಗಲೇ 3 ಪಕ್ಷಗಳಿಂದಲೂ.." ರಾಜಕೀಯ ಎಂಟ್ರಿ ಬಗ್ಗೆ ರಿಷಬ್ ಶೆಟ್ಟಿ ಸ್ಪಷ್ಟನೆ
"ಜೀವನ ನಡೆಸಲು ಹಲವು ವಿಚಿತ್ರ ಕೆಲಸಗಳನ್ನು ಮಾಡಿದ್ದೆ. ನಾನು ದೆಹಲಿಯಲ್ಲಿ ರಫ್ತು ವ್ಯಾಪಾರ ಮಾಡಲು ಪ್ರಾರಂಭಿಸಿದಾಗ ನನಗೆ 20 ಅಥವಾ 21 ವರ್ಷ. ನಾನು ಜರ್ಮನಿಗೆ ಕರಕುಶಲ ವಸ್ತುಗಳನ್ನು ಕಳುಹಿಸುತ್ತಿದ್ದೆ, ದುರದೃಷ್ಟವಶಾತ್ ಆ ವ್ಯವಹಾರವು ಇದ್ದಕ್ಕಿದ್ದಂತೆ ಲಾಸ್ ಆಯ್ತು. ವ್ಯಾಪಾರದಲ್ಲಿ ನಷ್ಟದ ನಂತರ, ನಾನು ಪಂಡಿತ್ ಆಗಲು ಋಷಿಕೇಶಕ್ಕೆ ಹೋದೆ. ಆದಾಗ್ಯೂ, ನನ್ನ ಸಹೋದ್ಯೋಗಿಗಳು ನನಗಿಂತ ಚಿಕ್ಕವರಾಗಿರುವುದರಿಂದ ಮತ್ತು ನನ್ನ ಅಭಿಪ್ರಾಯಗಳು ಅವರ ದೃಷ್ಟಿಕೋನಕ್ಕೆ ಹೊಂದಿಕೆಯಾಗದ ಕಾರಣ ಅಲ್ಲಿರುವುದು ಯಾವುದೇ ಪ್ರಯೋಜನವಿಲ್ಲ ಎಂದು ನನಗೆ ಅನಿಸಿತು. ನಾನು ಎಲ್ಲದರಲ್ಲೂ ವಿಫಲವಾಗುತ್ತಿದ್ದರಿಂದ ನಿರಾಶೆಗೊಂಡಿದ್ದೆ" ಎಂದು ಹೇಳಿದ್ದಾರೆ.
"ಹಾಗಾಗಿ ಒಂದು ದಿನ ನಾನು ಗಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದೆ, ಆದರೆ ಘಾಟ್ನಲ್ಲಿದ್ದ ವ್ಯಕ್ತಿ ತಕ್ಷಣ ಗಂಗಾನದಿಗೆ ಹಾರಿ ನನ್ನನ್ನು ರಕ್ಷಿಸಿದರು. ಆ ವ್ಯಕ್ತಿ, ಈಜು ಬರದಿದ್ದರೆ ನದಿಯಲ್ಲಿ ಏಕೆ ಹೋದೆ? ಎಂದು ಕೇಳಿದರು. ಆಗ ನಾನು ಸಾಯಲು ಹೋದೆ ಎಂದು ಉತ್ತರಿಸಿದೆ" ಎಂದು ಹೇಳಿದ್ದಾರೆ. ಆತ್ಮಹತ್ಯೆಯ ಬಗ್ಗೆ ಕೇಳಿದ ನಂತರ ಆ ವ್ಯಕ್ತಿ ಕೈಲಾಶ್ ಅವರ ತಲೆಗೆ ಹೊಡೆದರಂತೆ. ಈಗ ಕೈಲಾಶ್ ಖೇರ್ ಒಬ್ಬ ಯಶಸ್ವಿ ಗಾಯಕ. ಅವರ 20 ವರ್ಷಗಳ ವೃತ್ತಿಜೀವನದಲ್ಲಿ, ಮನಸೋಲುವ ಹಾಡುಗಳನ್ನು ಅವರು ಹಾಡಿದ್ದಾರೆ.
ಇದನ್ನೂ ಓದಿ : Shah Rukh Khan : ನಿಮ್ಮ ಪತಿಗೆ ನಮ್ಮ ವಿಚಾರ ಹೇಳಿದ್ರಾ? ಶಾರುಖ್ ಈ ನಟಿಗೆ ಮಾಡಿದ ಮೆಸೇಜ್ ವೈರಲ್.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.