Funny Video : ಪತಿಗೆ ಹಿಡಿದ ದೆವ್ವವನ್ನು ಒಂದೇ ಏಟಿಗೆ ಓಡಿಸಿದ ಪತ್ನಿ! ಜನ್ಮಕ್ಕೆ ಹಿಂತಿರುಗುವುದಿಲ್ಲ ಆ ದೆವ್ವ

Funny Video : ಇದೀಗ ಬಹಳ  ತಮಾಷೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.  ಈ ವಿಡಿಯೋದಲ್ಲಿ ಪತ್ನಿಯೊಬ್ಬಳು ತನ್ನ ಪತಿಗೆ ಹಿಡಿದಿರುವ ದೆವ್ವವನ್ನು ಬಿಡಿಸುತ್ತಿದ್ದಾಳೆಯಂತೆ. 

Written by - Ranjitha R K | Last Updated : Feb 14, 2023, 04:19 PM IST
  • ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
  • ಕೆಲವು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿ ಬಿಡುತ್ತದೆ.
  • ತಮಾಷೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ
Funny Video : ಪತಿಗೆ ಹಿಡಿದ ದೆವ್ವವನ್ನು ಒಂದೇ ಏಟಿಗೆ ಓಡಿಸಿದ ಪತ್ನಿ! ಜನ್ಮಕ್ಕೆ ಹಿಂತಿರುಗುವುದಿಲ್ಲ ಆ ದೆವ್ವ  title=

Funny Video : ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇವುಗಲ್ಲಿ ಕೆಲವು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿ ಬಿಡುತ್ತದೆ. ಕೆಲವರು ಒತ್ತಡ ಮರೆಯುವ ಸಲುವಾಗಿಯೇ ಸಾಮಾಜಿಕ ಮಾಧ್ಯಮಗಳ ಮೊರೆ ಹೋಗುತ್ತಾರೆ. ಅಲ್ಲಿ ಹಾಕಲಾಗಿರುವ ವಿಡಿಯೋಗಳಲ್ಲಿ ಮೈ ಮರೆತು ಮನಸ್ಸು ಹಗುರಾಗಿಸಿಕೊಳ್ಳುವವರ ಸಂಖ್ಯೆಯೂ ಬಹಳ ದೊಡ್ಡದಿದೆ. ಇದೀಗ ಬಹಳ  ತಮಾಷೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.  ಈ ವಿಡಿಯೋದಲ್ಲಿ ಪತ್ನಿಯೊಬ್ಬಳು ತನ್ನ ಪತಿಗೆ ಹಿಡಿದಿರುವ ದೆವ್ವವನ್ನು ಬಿಡಿಸುತ್ತಿದ್ದಾಳೆಯಂತೆ. 

ಹೆಂಡತಿಯ ವಿಚಿತ್ರ ಕೃತ್ಯ ಕ್ಯಾಮೆರಾದಲ್ಲಿ ಸೆರೆ : 
ಇಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ನದಿಯಲ್ಲಿ ಸ್ನಾನ ಮಾಡುತ್ತಿರುವುದನ್ನು  ನೋಡಬಹುದು. ತಕ್ಷಣಕ್ಕೆ ಈ ವಿಡಿಯೋ ನೋಡುವಾಗ ವಿಹಾರಕ್ಕೆ ಬಂದ ಗಂಡ ಹೆಂಡತಿ ನೀರಿನಲ್ಲಿ ಮೋಜಿಗೆ ಇಳಿದಿದ್ದಾರೆ ಎಂದು ಅನ್ನಿಸುತ್ತದೆ. ಆದರೆ ಇದ್ದಕ್ಕಿದ್ದಂತೆ  ಪತ್ನಿ ತನ್ನ ಕೈಯ್ಯಲ್ಲಿ ಕೆಲವೊಂದು ಎಲೆಗಳನ್ನು ಹಿಡಿದುಕೊಂಡು ಪತಿಯ ಬಳಿ ಹೋಗುತ್ತಾಳೆ. ಅದೇನಾಯಿತೋ ಗೊತ್ತಿಲ್ಲ. ಪತಿಯ ತಲೆ ಮೇಲೆ ಆ ಎಲೆಗಳನ್ನು ಇಟ್ಟು  ಪತಿಯನ್ನು ನೀರಿನಲ್ಲಿ ಮುಳುಗಿ ಮುಳುಗಿಸಿ ಎಬ್ಬಿಸುತ್ತಾಳೆ. ಈ ವೀಡಿಯೋ ನೋಡುವಾಗ ಗಂಡನ ದೆವ್ವವನ್ನು ಓಡಿಸುವಂತಿದೆ.  ಆದರೆ ಇಲ್ಲಿ ದೆವ್ವ ಯಾರ ಮೈ ಮೇಲೆ ಇದೆ ಎನ್ನುವುದೇ ಪ್ರಶ್ನೆ! 

ಇದನ್ನೂ ಓದಿ : Viral Video : ಇದ್ದಕ್ಕಿದ್ದಂತೆ ವಾಹನದ ಮೇಲೆ ಆನೆ ದಾಳಿ.! ಬಡಪಾಯಿ ಚಾಲಕನ ಪಾಡು ನೋಡಿ..

ಈ ವಿಡಿಯೋವನ್ನು ಯಾರು ಎಲ್ಲಿ ಶೂಟ್ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ವಿಡಿಯೋ ನೋಡಿದವರು ಬಿದ್ದು ಬಿದ್ದು ನಗುವುದು ಮಾತ್ರ ಗ್ಯಾರಂಟಿ. 

 

ಇದನ್ನೂ ಓದಿ :  Viral Video: ಬೆಳಗಾವಿ ಆಟಗಾರನ ಅದ್ಭುತ ಕ್ಯಾಚ್‍ಗೆ ಸಚಿನ್ ತೆಂಡೂಲ್ಕರ್ ಫಿದಾ!

ಕೆಲವೇ ಸೆಕೆಂಡುಗಳ ಈ ವಿಡಿಯೋ ವೈರಲ್ ಆಗಿದೆ. ಈ ವೀಡಿಯೊವನ್ನು ಟ್ವಿಟರ್ ಖಾತೆ @Elchiki_hn ನಲ್ಲಿ ಹಂಚಿಕೊಳ್ಳಲಾಗಿದೆ. ಅಲ್ಲದೆ, ಈ ವಿಡಿಯೋ ವೀಕ್ಷಿಸಿದ ನೆಟ್ಟಿಗರು ಕೂಡಾ ಹಲವಾರು ರೀತಿಯಲ್ಲಿ   ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ವೀಡಿಯೋವನ್ನು ಇದುವರೆಗೆ ಲಕ್ಷ ಲಕ್ಷ ಮಂದಿ ವೀಕ್ಷಿಸಿದ್ದಾರೆ. 

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

 

Trending News