Shash Rajyog: ಶೀಘ್ರದಲ್ಲೇ ಶನಿ ಉದಯದಿಂದ 'ಶಶ ಮಹಾಪುರುಷ ರಾಜಯೋಗ' ನಿರ್ಮಾಣ, ಚಿನ್ನದಂತೆ ಹೊಳೆಯಲಿದೆ ಈ ಜನರ ಭಾಗ್ಯ!

Shash Mahapurush Rajyog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರಗಲ್ಲಿಯೇ ಶನಿದೆವನ ಉದಯ ನೆರವೇರಲಿದೆ. ಶನಿ ದೇವ ಉದಯಿಸುತ್ತಲೇ ಒಟ್ಟು ಮೂರು ರಾಶಿಗಳ ಜಾತಕದವರಿಗೆ ಅಪಾರ ಧನಸಂಪತ್ತು ಮತ್ತು ಯಶಸ್ಸನ್ನು ಕರುಣಿಸಲಿದ್ದಾನೆ. ಈ ಮೂರು ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Feb 18, 2023, 09:39 PM IST
  • ಮಾರ್ಚ್ 9 ರಂದು ಶನಿದೇವನು ಉದಯಿಸಲಿದ್ದಾನೆ.
  • ಇದರಿಂದ ಶಶ ಮಹಾಪುರುಷರು ರಾಜಯೋಗ ರೂಪುಗೊಳ್ಳಲಿದೆ.
  • ಈ ರಾಜಯೋಗದ ಪರಿಣಾಮವು ಎಲ್ಲಾ ದ್ವಾದಶ ರಾಶಿಗಳ ಸ್ಥಳೀಯರ ಮೇಲೆ ಕಂಡುಬರಲಿದೆ.
Shash Rajyog: ಶೀಘ್ರದಲ್ಲೇ ಶನಿ ಉದಯದಿಂದ 'ಶಶ ಮಹಾಪುರುಷ ರಾಜಯೋಗ' ನಿರ್ಮಾಣ, ಚಿನ್ನದಂತೆ ಹೊಳೆಯಲಿದೆ ಈ ಜನರ ಭಾಗ್ಯ! title=
ಶಶ ಮಹಾಪುರುಷ ರಾಜಯೋಗ

Saturn Rise In Aquarius 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ಅಸ್ತಮಿಸುತ್ತವೆ ಮತ್ತು ಉದಯಿಸುತ್ತವೆ ಹಾಗೂ ಅನೇಕ ಶುಭ ಮತ್ತು ಅಶುಭ ಯೋಗಗಳನ್ನು ಸೃಷ್ಟಿಸುತ್ತವೆ. ಇದರ ಪರಿಣಾಮ ಮಾನವ ಜೀವನದ ಮೇಲೆ ಮತ್ತು ಭೂಮಿಯ ಮೇಲೆ ಕಂಡುಬರುತ್ತದೆ. ಮಾರ್ಚ್ 9 ರಂದು ಶನಿದೇವನು ಉದಯಿಸಲಿದ್ದಾನೆ.ಇದರಿಂದ ಶಶ ಮಹಾಪುರುಷರು ರಾಜಯೋಗ ರೂಪುಗೊಳ್ಳಲಿದೆ. ಈ ರಾಜಯೋಗದ ಪರಿಣಾಮವು ಎಲ್ಲಾ ದ್ವಾದಶ ರಾಶಿಗಳ ಸ್ಥಳೀಯರ ಮೇಲೆ ಕಂಡುಬರಲಿದೆ. ಆದರೆ 3 ರಾಶಿಗಳ ಜನರಿಗೆ ಈ ರಾಜಯೋಗವು ಸಾಕಷ್ಟು ಧನ ಸಂಪತ್ತು ಮತ್ತು ಭಾಗ್ಯವನ್ನು ಕರುಣಿಸಲಿದೆ. ಈ ಅದೃಷ್ಟದ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

ಮೇಷ ರಾಶಿ
ಶಶ ಮಹಾಪುರುಷ ರಾಜಯೋಗದ ರಚನೆಯಿಂದಾಗಿ, ಮೇಷ ರಾಶಿಯ ಜನರ ಆದಾಯದಲ್ಲಿ ಅಗಾಧವಾದ ಹೆಚ್ಚಳವಾಗಲಿದೆ. ಏಕೆಂದರೆ ಶನಿ ದೇವನು ನಿಮ್ಮ ರಾಶಿಯ ಆದಾಯದ ಸ್ಥಳದಲ್ಲಿ ಇರಲಿದ್ದಾನೆ. ಆದ್ದರಿಂದಲೇ ಈ ಸಮಯದಲ್ಲಿ ಆರ್ಥಿಕ ಸುಧಾರಣೆಗಾಗಿ ಮಾಡಿದ ಯೋಜನೆಯೂ ಯಶಸ್ವಿಯಾಗುತ್ತದೆ. ಉದ್ಯೋಗಿಗಳಿಗೆ ಬಡ್ತಿ ಮತ್ತು ವೇತನ ಹೆಚ್ಚಳದ ಅವಕಾಶಗಳಿವೆ. ಇದರೊಂದಿಗೆ ಉದ್ಯಮಿಗಳ ಆದಾಯದಲ್ಲಿ ಭಾರಿ ಏರಿಕೆಯಾಗಬಹುದು. ಈ ಅವಧಿಯಲ್ಲಿ ನೀವು ಷೇರುಗಳು, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ಉತ್ತಮ ಲಾಭವನ್ನು ಪಡೆಯಬಹುದು.

ಇದನ್ನೂ ಓದಿ-Gajlakshmi Rajyog: 12 ವರ್ಷಗಳ ಬಳಿಕ ಜಾತಕದಲ್ಲಿ 'ಗಜಲಕ್ಷ್ಮಿ ರಾಜಯೋಗ', 3 ರಾಶಿಗಳಿಗೆ ಆಕಸ್ಮಿಕ ಧನಲಾಭ-ಭಾಗ್ಯೋದಯ ಯೋಗ!

ಧನು ರಾಶಿ
ಶಶ ಮಹಾಪುರುಷ ರಾಜಯೋಗದ ರಚನೆ ಧನು ರಾಶಿಯವರಿಗೆ ಒಳ್ಳೆಯ ದಿನಗಳನ್ನು ತರಲಿದೆ. ಏಕೆಂದರೆ ಶನಿದೇವನು ನಿಮ್ಮ ರಾಶಿಯಿಂದ ತೃತೀಯ ಭಾವದಲ್ಲಿ ಉದಯಿಸಲಿದ್ದಾನೆ. ಇದನ್ನು ಧೈರ್ಯ ಮತ್ತು ಶಕ್ತಿಯ ಸ್ಥಳವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸುವಿರಿ. ಅಲ್ಲದೆ, ಯಾರ ಕೆಲಸವು ಪ್ರವಾಸೋದ್ಯಮ, ಕಬ್ಬಿಣ ಅಥವಾ ವಿದೇಶಗಳಿಗೆ ಸಂಬಂಧಿಸಿದೆಯೋ ಅವರಿಗೆ ಲಾಭ ಸಿಗುವ ಬಲವಾದ ಅವಕಾಶಗಳಿವೆ. ಇದೇ ವೇಳೆ ಈ ಅವಧಿಯು ನಿಮಗೆ ಭಾರಿ ಅದೃಷ್ಟಶಾಲಿ ಸಾಬೀತಾಗಲಿದೆ. ಕಲೆ, ಗಾಯಕ ಅಥವಾ ಕಲಾವಿದರಾಗಿರುವ ಜನರಿಗೆ ಈ ಅವಧಿಯಲ್ಲಿ  ಸಹೋದರ ಸಹೋದರಿಯರ ಬೆಂಬಲ ಸಿಗಲಿದೆ. ಇದರೊಂದಿಗೆ ಸಾಡೇಸಾತಿಯಿಂದ ಮುಕ್ತಿ ಪಡೆದು ನಿಮ್ಮೆಲ್ಲ ಕೆಲಸಗಳೂ ಪೂರ್ಣಗೊಳ್ಳಲಿವೆ.

ಇದನ್ನೂ ಓದಿ-Mahashivratri 2023: ಇಂದು ನಿರ್ಮಾಣಗೊಳ್ಳುತ್ತಿದೆ ಈ ಅದ್ಭುತ ಯೋಗ, ಶಿವನ ಆರಾಧನೆಗೆ ಮುಹೂರ್ತಗಳ ಪಟ್ಟಿ ಇಲ್ಲಿದೆ

ಕುಂಭ ರಾಶಿ
ಶಶ ರಾಜಯೋಗವು ನಿಮಗೆ ಮಂಗಳಕರ ಮತ್ತು ಫಲಪ್ರದವಾಗಿದೆ. ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದ ಲಗ್ನ ಭಾವದಲ್ಲಿ ಶನಿದೇವನು ಉದಯಿಸಲಿದ್ದಾನೆ. ಹೀಗಾಗಿ ಈ ಸಮಯದಲ್ಲಿ ನಿಮ್ಮ ಆರೋಗ್ಯವು ಸುಧಾರಿಸುತ್ತದೆ. ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದಾರೆ ಅದರಿಂದ ನಿಮಗೆ ಮುಕ್ತಿ ಸಿಗಲಿದೆ. ನೀವು ಮೊದಲಿಗಿಂತ ಹೆಚ್ಚು ಶಕ್ತಿಯನ್ನು ನಿಮ್ಮೊಳಗೆ ಕಾಣುವಿರಿ. ಇದರೊಂದಿಗೆ, ಈ ಸಮಯದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಮತ್ತೊಂದೆಡೆ, ರಾಜಕೀಯದೊಂದಿಗೆ ಸಂಬಂಧ ಹೊಂದಿರುವರಿಗೆ ಅಧಿಕಾರ ಹುದ್ದೆ ಸಿಗುವ ಸಾಧ್ಯತೆ ಇದೆ. ಮತ್ತೊಂದೆಡೆ, ಶನಿದೇವನ ಉದಯದಿಂದಾಗಿ, ಈ ರಾಶಿಯ ಉದ್ಯೋಗಿಗಳಿಗೆ ಬಡ್ತಿ ಅಥವಾ ಇನ್ಕ್ರಿಮೆಂಟ್ ಸಿಗಬಹುದು. ಮತ್ತೊಂದೆಡೆ, ಅವಿವಾಹಿತರಿಗೆ ಮದುವೆಯ ಪ್ರಸ್ತಾವ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ-Mahashivratri 2023: ಕುಂಭ ಸೇರಿದಂತೆ ಈ ರಾಶಿಗಳ ಜನರ ಮೇಲೆ ಶಿವನ ಅಪಾರ ಕೃಪಾವೃಷ್ಠಿ, ಒಳ್ಳೆಯ ದಿನಗಳು ಆರಂಭ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಟಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News