ಬೆಂಗಳೂರು: ಡಿ ಬಾಸ್ ದರ್ಶನ್ ಬಗ್ಗೆ ಏನಾದ್ರೂ ನ್ಯೂಸ್ ಸಿಗುತ್ತಾ ಅಂತ ಅವರ ಫ್ಯಾನ್ಸ್ ಕಾಯುತ್ತಲೇ ಇರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಡಿ ಬಾಸ್ ಗೆಳೆಯರ ಜೊತೆ ಕ್ರಿಕೆಟ್ ಆಡೋದನ್ನ ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದರು. ಈಗ ಸಿಗ್ತಾ ಇರೋ ಮ್ಯಾಟರ್ ಏನಪ್ಪಾ ಅಂದ್ರೆ ಡಿ ಬಾಸ್ ಈಗ ಕಂಪ್ಲೀಟ್ ಡಯಟ್ ನಲ್ಲಿ ಇದ್ದಾರಂತೆ.
ವಾಸ್ತವವಾಗಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಮುಂದಿನ ಸಿನಿಮಾಗಾಗಿ ದೇಹದ ತೂಕ ಕಂಪ್ಲೀಟ್ ಆಗಿ ಇಳಿಸಿ ಯಂಗ್ ಆಂಡ್ ಎನರ್ಜಿಟಿಕ್ ಕಾಣಿಸಲು ಸಕಲ ರೀತಿಯಲ್ಲೂ ಸಿದ್ಧತೆ ನಡೆಸುತ್ತಿದ್ದಾರೆ. ಈ ಖುಷಿ ಸುದ್ದಿಯನ್ನ ಕೇಳಿದ ಅವರ ಅಭಿಮಾನಿಗಳು ಸಖತ್ ಹ್ಯಾಪಿ ಆಗಿದ್ದಾರೆ.
ಇದನ್ನೂ ಓದಿ- ಶತಕದತ್ತ ಚಿತ್ರಸಾಹಿತಿ ವರದರಾಜ್ ಚಿಕ್ಕಬಳ್ಳಾಪುರ
ನಿಮಗೆಲ್ಲ ಗೊತ್ತಿರೋ ಹಾಗೇ ಡಿ ಬಾಸ್ ತುಂಬಾ ಫುಡ್ಡಿ. ಆದ್ರೆ ಈಗ ಎಲ್ಲವನ್ನು ಕಂಟ್ರೋಲ್ ಮಾಡುತ್ತಿದ್ದಾರೆ ಅಂತೆ. ತಮ್ಮ ಎಲ್ಲಾ ಸಿನಿಮಾಗಳಲ್ಲಿ ಅದ್ಭುತವನ್ನೇ ಕೊಡೋ ಡಿ ಬಾಸ್ ತಮ್ಮ ಮುಂದಿನ ಚಿತ್ರದಲ್ಲಿ ಇನ್ನೊಂದು ಅದ್ಭುತ ಕೊಡುತ್ತಾರೆ ಅಂತ ಹೇಳಲಾಗುತ್ತಿದೆ.
ಡಿ ಬಾಸ್ ರಾಬರ್ಟ್ ಆದ ಬಳಿಕ ಕ್ರಾಂತಿ ಸಿನಿಮಾ ಮಾಡಿದ್ರು. ಕ್ರಾಂತಿ ಜನವರಿ 26ಕ್ಕೆ ರಿಲೀಸ್ ಆಗಿ ಮಹಾಕ್ರಾಂತಿಯನ್ನೇ ಮಾಡಿದೆ. 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡೋ ಮೂಲಕ ಗಲ್ಲಾಪೆಟ್ಟಿಗೆಯನ್ನೇ ಧೂಳ್ ಧೂಳ್ ಮಾಡಿದೆ. ಕ್ರಾಂತಿ ಸಿನಿಮಾ ಮೂಲ ಒಂದೊಳ್ಳೆ ಸಂದೇಶವನ್ನೂ ಕೂಡ ರವಾನಿಸಿದ್ದಾರೆ. ಸರಕಾರಿ ಶಾಲೆಗಳ ಸ್ಥಿತಿಗತಿ ಬಗ್ಗೆ ಅಚ್ಚುಕಟ್ಟಾಗಿ ತೋರಿಸೋ ಪ್ರಯತ್ನ ಇಲ್ಲಿ ಸಾಗಿತ್ತು. ಇದರ ಜೊತೆಗೆ ಕ್ರಾಂತಿ ಸಿನಿಮಾದ ಅಷ್ಟೂ ಹಾಡುಗಳು ಕೂಡ ಸೂಪರ್ ಡೂಪರ್ ಆಗಿ ಹಿಟ್ ಆಗಿವೆ.
ಇದನ್ನೂ ಓದಿ- "ಆಗ ನನಗೆ 19 ವರ್ಷ.. ಆ ನಿರ್ಮಾಪಕ ಬಾತ್ರೂಮ್ಗೆ ಹಿಂಬಾಲಿಸಿದ್ರು.." ಮುಂದೆ?
ಈಗ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ರೆಡಿಯಾಗುತ್ತಿದ್ದಾರೆ. ಇದ್ರ ಜೊತೆಗೆ ಅಭಿಮಾನಿಗಳು ಕೂಡ ಸಿಹಿ ಮ್ಯಾಟರ್ ಗಳಿಗೆ ಕಾಯುತ್ತಲೇ ಇದ್ದಾರೆ. ನಾವು ಡಿ ಬಾಸ್ ಬಗ್ಗೆ ಇನ್ನೊಂದು ಬೆಸ್ಟ್ ವಿಚಾರ ಹೇಳಲೇಬೇಕು. ಅದೇನ್ ಅಂದ್ರೆ ಇತ್ತೀಚಿಗೆ ಸಮಾಜಕ್ಕೆ ಒಳ್ಳೆ ಸಂದೇಶ ಸಾರೋ ಸಿನಿಮಾಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಡಿ ಬಾಸ್. ಇದು ಉತ್ತಮ ಬೆಳವಣಿಗೆ. ಯಾಕಂದ್ರೆ ಅವರನ್ನ ಫಾಲೋ ಮಾಡೋ ಫ್ಯಾನ್ಸ್ ಇದನ್ನ ತಮ್ಮ ರಿಯಲ್ ಲೈಫ್ ನಲ್ಲಿ ಅಳವಡಿಸಿಕೊಳ್ಳುತ್ತಾರೆ. ಎನಿ ವೇ ಅವರ ಮುಂದಿನ ಸಿನಿಮಾಗೆ ನಮ್ಮ ಕಡೆಯಿಂದಲೂ ಆಲ್ ದಿ ಬೆಸ್ಟ್.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.