ಬಿಯರ್ ಕುಡಿದರೆ ಕಿಡ್ನಿಯಲ್ಲಿರುವ ಕಲ್ಲು ಮೂತ್ರದ ಮೂಲಕ ಹೊರ ಹೋಗುತ್ತದೆಯೇ? ಏನೆನ್ನುತ್ತಾರೆ ತಜ್ಞರು

ಕಿಡ್ನಿಯಲ್ಲಿ ಸಮಸ್ಯೆ ಕಾಣಿಸಿಕೊಂಡರೆ ಬೇರೆ ಬೇರೆ ಕಾಯಿಲೆಗಳು ಕೂಡಾ ಉದ್ಬವಿಸಿಕೊಳ್ಳುತ್ತದೆ. ಕಿಡ್ನಿ ಸಮಸ್ಯೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಬಾಧೆ ಎಂದರೆ ಕಿಡ್ನಿ ಸ್ಟೋನ್. 

Written by - Ranjitha R K | Last Updated : Mar 13, 2023, 10:09 AM IST
  • ಕಿಡ್ನಿ ನಮ್ಮ ದೇಹದ ಅತಿ ಮುಖ್ಯವಾದ ಅಂಗ.
  • ರಕ್ತವನ್ನು ಶುದ್ದೀಕರಿಸುವ ಕಾರ್ಯವನ್ನು ಕಿಡ್ನಿ ಮಾಡುತ್ತದೆ.
  • ಪ್ರತಿಯೊಬ್ಬನ ದೇಹದಲ್ಲಿ ಎರಡು ಕಿಡ್ನಿಗಳಿರುತ್ತವೆ.
ಬಿಯರ್ ಕುಡಿದರೆ ಕಿಡ್ನಿಯಲ್ಲಿರುವ ಕಲ್ಲು ಮೂತ್ರದ ಮೂಲಕ ಹೊರ ಹೋಗುತ್ತದೆಯೇ?  ಏನೆನ್ನುತ್ತಾರೆ ತಜ್ಞರು  title=

ಬೆಂಗಳೂರು : ಕಿಡ್ನಿ ನಮ್ಮ ದೇಹದ ಅತಿ ಮುಖ್ಯವಾದ ಅಂಗ. ರಕ್ತವನ್ನು ಶುದ್ದೀಕರಿಸುವ ಕಾರ್ಯವನ್ನು ಕಿಡ್ನಿ ಮಾಡುತ್ತದೆ.  ಪ್ರತಿಯೊಬ್ಬನ ದೇಹದಲ್ಲಿ ಎರಡು ಕಿಡ್ನಿಗಳಿರುತ್ತವೆ. ಪ್ರತಿ ಕಿಡ್ನಿ 120 ರಿಂದ 130 ಗ್ರಾಂ ತೂಕವಿರುತ್ತದೆ ಎಂದು ಹೇಳಲಾಗುತ್ತದೆ.  ಕಿಡ್ನಿ ರಕ್ತವನ್ನು ಶುದ್ದೀ ಕರಿಸುವ ವೇಳೆ ದೇಹದಲ್ಲಿರುವ ಹೆಚ್ಚಿನ ಪ್ರಮಾಣದ ನೀರು ಮತ್ತು ವೇಸ್ಟ್ ಅನ್ನು ದೇಹದಿಂದ ಮೂತ್ರದ ಮೂಲಕ ಹೊರ ಹಾಕುತ್ತದೆ. ಕಿಡ್ನಿ ಆರೋಗ್ಯವಾಗಿರುವುದು ಬಹಳ ಮುಖ್ಯವಾಗಿರುತ್ತದೆ. ಕಿಡ್ನಿಯಲ್ಲಿ ಸಮಸ್ಯೆ ಕಾಣಿಸಿಕೊಂಡರೆ ಬೇರೆ ಬೇರೆ ಕಾಯಿಲೆಗಳು ಕೂಡಾ ಉದ್ಬವಿಸಿಕೊಳ್ಳುತ್ತದೆ. ಕಿಡ್ನಿ ಸಮಸ್ಯೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಬಾಧೆ ಎಂದರೆ ಕಿಡ್ನಿ ಸ್ಟೋನ್.  

ಕಿಡ್ನಿ ಸ್ಟೋನ್ ಹೇಗೆ  ರೂಪುಗೊಳ್ಳುತ್ತದೆ  ? :
ನಾವು ಸೇವಿಸುವ ಆಹಾರ ಜೀರ್ಣವಾಗಿ ರಕ್ತವನ್ನು ಸೇರುತ್ತದೆ. ರಕ್ತದ ಮೂಲಕ ಆ ಆಹಾರದಲ್ಲಿರುವ ಅಂಶಗಳು ನಮ್ಮ ದೇಹದ ಇತರ ಭಾಗವನ್ನು ತಲುಪುತ್ತದೆ. ಹೀಗೆ ಕಿಡ್ನಿಯಲ್ಲಿ ರಕ್ತ ಶುದ್ದಿಕರಣದ ಕಾರ್ಯ ಆಗುವ  ವೇಳೆ, ರಕ್ತದಲ್ಲಿ ಅಧಿಕ ಕ್ಯಾಲ್ಶಿಯಂ  ಮತ್ತು ಅಧಿಕ ಯೂರಿಕ್ ಆಸಿಡ್ ಇದ್ದಲ್ಲಿ ಕಿಡ್ನಿ ಸ್ಟೋನ್ ರೂಪುಗೊಳ್ಳುತ್ತದೆ.  ಹೀಗೆ ರೂಪುಗೊಂಡ ಸ್ಟೋನ್  ಎಲ್ಲಿಯವರೆಗೆ ಕಿಡ್ನಿಯಲ್ಲಿಯೇ ಇರುತ್ತದೆ ಅಲ್ಲಿವರೆಗೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಬಹಳ ಕಡಿಮೆ. ಆದರೆ ಯಾವಾಗ ಆ ಸ್ಟೋನ್ ಮೂತ್ರ ನಾಳಕ್ಕೆ ಹರಿಯುತ್ತದೆಯೋ ಆಗ ನೋವು ಕಾಣಿಸಿಕೊಳ್ಳುತ್ತದೆ.  

ಇದನ್ನೂ ಓದಿ : Weight Loss Tips: ಅಧಿಕ ಕೊಲೆಸ್ಟ್ರಾಲ್, ಬೊಜ್ಜಿಗೆ ದಿನನಿತ್ಯ ಈ ಜ್ಯೂಸ್ ಕುಡಿಯಿರಿ!

ಬಿಯರ್ ಕುಡಿದು ಕಿಡ್ನಿ ಸ್ಟೋನ್ ಹೊರ ಹಾಕಬಹುದೇ ? :
ಬಿಯರ್ ಎನ್ನುವುದು ಇಥೆಲ್ ಆಲ್ಕೋಹಾಲ್. ಇದು ವಾಸೊಪ್ರೆಸ್ಸಿನ್ ಎನ್ನುವ ಹಾರ್ಮೋನ್  ಸ್ರವಿಸುವಿಕೆಯನ್ನು ಪ್ರತಿಬಂಧಿಸುತ್ತದೆ. ಆದ ಕಾರಣ ಮೂತ್ರ ಬಿಡುಗಡೆಯ ಪ್ರಮಾಣ ಹೆಚ್ಚಾಗುತ್ತದೆ. ಹೀಗೆ ದೇಹದಿಂದ ಹೆಚ್ಚಿನ ಪ್ರಮಾಣದಲ್ಲಿ ಮೂತ್ರ ಬಿಡುಗಡೆಯಾಗಿ ಹೊರ ಹೋಗುವಾಗ 5 ಎಂ.ಎಂ ಗಾತ್ರವಿರುವ ಸ್ಟೋನ್ ಮೂತ್ರದ ಮೂಲಕ ಹೊರ ಹೋಗುವ ಸಾಧ್ಯತೆ  ಶೇ.  90ರಷ್ಟಿರುತ್ತದೆ. ಇನ್ನು ಸ್ಟೋನ್ ಗಾತ್ರ 5 ಎಂ.ಎಂನಿಂದ 8 ಎಂ ಎಂವರೆಗೆ ಇದ್ದರೆ ಮೂತ್ರದ ಮೂಲಕ ಸ್ಟೋನ್ ಹೊರ ಹೋಗುವ ಸಾಧ್ಯತೆ  50 ಪರ್ಸೆಂಟ್ ಇರುತ್ತದೆ. ಸ್ಟೋನ್ ಗಾತ್ರ 8 ಎಂ ಎಂ ಗಿಂತ ಜಾಸ್ತಿಯಿದ್ದರೆ  ಅದು ಮೂತ್ರದ ಮೂಲಕ ಹೊರ ಹೋಗುವ ಸಾಧ್ಯತೆ 20 ಪರ್ಸೆಂಟ್ ನಷ್ಟು ಮಾತ್ರ ಇರುತ್ತದೆ ಎಂದು ಹೇಳಲಾಗುತ್ತದೆ.   

ಕೇವಲ ಬಿಯರ್ ಕುಡಿದರೆ ಸಾಕೇ ? : 
ಬಿಯರ್ ಕುಡಿದರೆ ಮೂತ್ರ ಬಿಡುಗಡೆ ಹೆಚ್ಚಾಗಬೇಕಾದರೆ ಬಿಯರ್ ಜೊತೆಗೆ ಹೆಚ್ಚು ಪ್ರಮಾಣದಲ್ಲಿ ನೀರು ಕೂಡಾ ಕುಡಿಯಬೇಕು. ಬಿಯರ್ ಜೊತೆಗೆ ಅತಿ ಹೆಚ್ಚು ನೀರು ಕುಡಿದಾಗ ಮೂತ್ರ ಬಿಡುಗಡೆ ಹೆಚ್ಚಿನ ಪ್ರಮಾಣದಲ್ಲಿ ಆಗಿ ಕಿಡ್ನಿ ಸ್ಟೋನ್ ದೇಹದಿಂದ ಹೊರ ಹೋಗುವ ಸಾಧ್ಯತೆ ಇರುತ್ತದೆ. ಆದರೆ ಕೇವಲ ಬಿಯರ್ ಮಾತ್ರ ಕುಡಿದು, ನೀರು ಕುಡಿಯದೆ ಹೋದಲ್ಲಿ ಡಿ ಹೈಡ್ರೇಟ್ ಆಗಿ ಸ್ಟೋನ್ ಗಾತ್ರ ದೊಡ್ಡದಾಗುವ ಸಾಧ್ಯತೆ ಕೂಡಾ ಇದೆ ಎನ್ನುವುದನ್ನು ಮರೆಯಬಾರದು. 

ಇದನ್ನೂ ಓದಿ : Diabetes ರೋಗಿಗಳಿಗೆ ಒಂದು ಪರಿಣಾಮಕಾರಿ ಮನೆಮದ್ದು ಈ ಚಿರೋಂಜಿ ಮಿಲ್ಕ್!

ತಜ್ಞರ ಸಲಹೆ ಏನು ? : 
ಮೊದಲೇ ಹೇಳಿದ ಹಾಗೆ ಬಿಯರ್ ಅನ್ನುವುದು  ಇಥೆಲ್ ಆಲ್ಕೋಹಾಲ್.  ಇದನ್ನು ಸೇವಿಸಿದರೆ ಅನುಕೂಲಕ್ಕಿಂತ ಅನಾನುಕೂಲವೇ  ಜಾಸ್ತಿ. ಹಾಗಾಗಿ ಕಿಡ್ನಿ ಸ್ಟೋನ್ ಇದೆ ಎನ್ನುವ ಕಾರಣಕ್ಕೆ ಅಭ್ಯಾಸ ಇಲ್ಲದವರು  ಬಿಯರ್ ಮೊರೆ ಹೋಗಬೇಕಾಗಿಲ್ಲ. ಅದರ ಬದಲು ನೀರು ಅಥವಾ ದ್ರವ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೂ ಸ್ಟೋನ್ ಅನ್ನು ಹೊರ ಹಾಕುವುದು ಸಾಧ್ಯವಾಗುತ್ತದೆ.  

ಇನ್ನು, ಕಿಡ್ನಿ ಸ್ಟೋನ್ ಅನ್ನು ದೇಹದಿಂದ ಹೊರ ಹಾಕಲು ಇರುವ ಬೆಸ್ಟ್ ದ್ರವ ಎಂದರೆ ಅದು ನೀರು ಎನ್ನುತ್ತಾರೆ ತಜ್ಞರು. 

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಈ ಸಲಹೆ ಪಾಲಿಸುವ ಮೊದಲು ವೈದ್ಯರ ಸಲಹೆ ಪಾಲಿಸಿರಿ. Zee Kannada News ಇದನ್ನು ದೃಢಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News