"ಶೆಟ್ಟರ್ ರಾಜಕಾರಣದಿಂದ ಹಿಂದೆ ಸರಿಯುವ ಮಾತೇ ಇಲ್ಲ"

  ಶೆಟ್ಟರ್ ರಾಜಕಾರಣ ಹಿಂದೆ ಸರಿಯುವ ಮಾತೇ ಇಲ್ಲ ಇಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.ಈಶ್ವರಪ್ಪನವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಈಗ ಶೆಟ್ಟರ್ ಅವರ ಈ  ಹೇಳಿಕೆ ಬಂದಿದೆ.

Written by - Zee Kannada News Desk | Last Updated : Apr 11, 2023, 06:39 PM IST
  • ಸರ್ವೇದಲ್ಲಿ ಪಾಸಿಟಿವ್ ಇದೆ, ನನ್ನ ಮೇಲೆ ಕಪ್ಪು ಚುಕ್ಕೆ ಇಲ್ಲ
  • ಪಕ್ಷಕ್ಕೆ ರಾಯಲ್ ಆಗಿ ಕೆಲಸ ಮಾಡಿದ್ದೇನೆ
  • ರಾಯಲ್‌ ಆಗಿ ಕೆಲಸ ಮಾಡಿದ್ದಕ್ಕೆ ಈ ಶಿಕ್ಷೆ ಏನು.?
"ಶೆಟ್ಟರ್ ರಾಜಕಾರಣದಿಂದ ಹಿಂದೆ ಸರಿಯುವ ಮಾತೇ ಇಲ್ಲ" title=

ಹುಬ್ಬಳ್ಳಿ:  ಶೆಟ್ಟರ್ ರಾಜಕಾರಣ ಹಿಂದೆ ಸರಿಯುವ ಮಾತೇ ಇಲ್ಲ ಇಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.ಈಶ್ವರಪ್ಪನವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಈಗ ಶೆಟ್ಟರ್ ಅವರ ಈ  ಹೇಳಿಕೆ ಬಂದಿದೆ.

ಈ ಕುರಿತಾಗಿ ಮಾತನಾಡಿದ ಅವರು 'ನನಗೆ ವರಿಷ್ಠರಿಂದ ಪೋನ್ ಬಂದಿದ್ದು ಸತ್ಯ, ಸೀನಿಯರ್ ಅದೀರಿ ಎಂದು ಬೇರೆದವರಿಗೆ ಅವಕಾಶ ಕೊಡಿ ಎಂದು ನನಗೆ ಹೈಕಮಾಂಡ ಹೇಳಿದ್ರು.ಕಳೆದ 30 ವರ್ಷ‌ಗಳಿಂದ ನಾನೂ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ ಎಂದು ಹೇಳಿದ್ದೇನೆ.ನೂರಾರು ಜನರಿಗೆ ಟಿಕೆಟ್ ಕೊಡುವ ಕೆಲಸ ನಾನೂ ಮಾಡಿದ್ದೇನೆ.ನನಗೆ ಟಿಕೆಟ್ ನೀಡಬಾರದು ಎನ್ನಲ್ಲಿಕ್ಕೆ ಕಾರಣ ಏನು..? ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: ಹೊಗೆನಕಲ್ನಲ್ಲಿ ಹಗಲು ದರೋಡೆ: ₹750 ಬೋಟಿಂಗ್ ಗೆ ₹3500 ಶುಲ್ಕ- ಪ್ರವಾಸಿಗರ ಆಕ್ರೋಶ

ಸರ್ವೇದಲ್ಲಿ ಪಾಸಿಟಿವ್ ಇದೆ, ನನ್ನ ಮೇಲೆ ಕಪ್ಪು ಚುಕ್ಕೆ ಇಲ್ಲ, ಪಕ್ಷಕ್ಕೆ ರಾಯಲ್ ಆಗಿ ಕೆಲಸ ಮಾಡಿದ್ದೇನೆ, ರಾಯಲ್‌ ಆಗಿ ಕೆಲಸ ಮಾಡಿದ್ದಕ್ಕೆ ಈ ಶಿಕ್ಷೆ ಏನು.? ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಹೈಕಮಾಂಡ ಹೇಳಿದ್ದಕ್ಕೆ ನನ್ನ ಮನಸ್ಸಿಗೆ ಬೇಜಾರ್ ಆಗಿದೆ.ನಾಮಪತ್ರ ಸಲ್ಲಿಸಲು ಇನ್ನೂ ಎರಡೂ ದಿನ ಸಮಯ ಇದೆ.ಈಗ ಪೋನ್ ಮಾಡಿದ್ರೆ ಏನ್ ಮಾಡಬೇಕು ಬಂದು ಭೇಟಿಯಾಗಿ ಎಂದು ಹೇಳಿದ್ದಾರೆ. ಸರಿಯಾದ ಸ್ಥಾನಮಾನವನ್ನ ಕೊಡುತ್ತೆವೆಂದು ಹೇಳಿದ್ದಾರೆ, ಪಕ್ಷದ ವರಿಷ್ಠರ ಮೇಲೆ ನನಗೆ ನಂಬಿಕೆ ಇದೆ ವೇಟ್ & ಸಿ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರವಾಸಕ್ಕೆ ತೆರಳಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಈಶ್ವರಪ್ಪನವರ ಸ್ಟ್ಯಾಂಡ್ ಬೇರೆ, ನನ್ನ ಸ್ಟ್ಯಾಂಡ್ ಬೇರೆ ಇದೆ ನಾನು ಸ್ಪರ್ಧೆ ಮಾಡುತ್ತೇನೆ, ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಬರ್ತೆನಿ, ಶೆಟ್ಟರ್ ರಾಜಕಾರಣದಿಂದ ಹಿಂದೆ ಸರಿಯುವ ಮಾತೇ ಇಲ್ಲ. ನಾನೂ ಇನ್ನೂ ಹತ್ತು ವರ್ಷಗಳ ಸಕ್ರೀಯ ರಾಜಕಾರಣದಲ್ಲಿ ಇರ್ತೆನಿ ನೂರಾರು ಜನರಿಗೆ ಟಿಕೆಟ್‌ ಕೊಟ್ಟಿದ್ದೇನೆ, ಪಕ್ಷವನ್ನ ಸಂಘಟನೆ ಮಾಡಿದ್ದೇನೆ ನನಗೆ ಈ ರೀತಿ ಆಗಿದ್ದು ಮನಸ್ಸಿಗೆ ನೋವಾಗಿದೆ,  ನಾನು ಸ್ಪರ್ಧೆ ಮಾಡುತ್ತೇನೆ, ನನಗೆ ಟಿಕೆಟ್ ತಪ್ಪಿಸಲಿಕ್ಕೆ ಮೈನಸ್ ಪಾಯಿಂಟ್ ಹೇಳಿ ಇನ್ನೂ ಅಭ್ಯರ್ಥಿಗಳ ಘೋಷಣೆ ಆಗಿಲ್ಲ, ನಾನೇ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೇನಿ ನಾನೂ ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಮಾಡುತ್ತಿದ್ದೇನೆ.ಕ್ಷೇತ್ರದಲ್ಲಿ ಜನರು ನನಗೆ ಪ್ರೀತಿ ವಿಶ್ವಾಸ ಇಟ್ಟಿದ್ದಾರೆ‌ ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News