DL vs MI: ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ 20 ವರ್ಷದ ಈ ಕ್ರಿಕೆಟಿಗ IPLಗೆ ಎಂಟ್ರಿ: ಈ ತಂಡ ಚಾಂಪಿಯನ್ ಆಗೋದು ಪಕ್ಕಾ!

Delhi Capitals vs Mumbai Indians: ಅಂಡರ್-19 ವಿಶ್ವಕಪ್ 2022 ರಲ್ಲಿ ಭಾರತವನ್ನು ಚಾಂಪಿಯನ್ ಮಾಡಿದ ನಾಯಕ ಯಶ್ ಧುಲ್, ದೆಹಲಿ ಕ್ಯಾಪಿಟಲ್ಸ್‌ ತಂಡದ ಮೂಲಕ ಐಪಿಎಲ್‌’ಗೆ ಪಾದಾರ್ಪಣೆ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಪ್ಲೇಯಿಂಗ್-11 ರಲ್ಲಿ ಯಶ್‌’ಗೆ ದೆಹಲಿ ತಂಡದ ಮ್ಯಾನೇಜ್‌’ಮೆಂಟ್ ಅವಕಾಶ ನೀಡಿದೆ.

Written by - Bhavishya Shetty | Last Updated : Apr 11, 2023, 09:02 PM IST
    • ಡೆಲ್ಲಿ ತಂಡಕ್ಕೆ ಯುವ ಕ್ರಿಕೆಟಿಗನೊಬ್ಬನ ಪಾದಾರ್ಪಣೆ ಮಾಡಿದ್ದಾನೆ.
    • ಈ ಕ್ರಿಕೆಟಿಗ ತನ್ನ ತಂಡವನ್ನು ಒಮ್ಮೆ ವಿಶ್ವ ಚಾಂಪಿಯನ್‌ ಆಗಿ ಮಾಡಿದ್ದಾನೆ.
    • ಪ್ಲೇಯಿಂಗ್-11 ರಲ್ಲಿ ಯಶ್‌’ಗೆ ದೆಹಲಿ ತಂಡದ ಮ್ಯಾನೇಜ್‌’ಮೆಂಟ್ ಅವಕಾಶ ನೀಡಿದೆ
DL vs MI: ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ 20 ವರ್ಷದ ಈ ಕ್ರಿಕೆಟಿಗ IPLಗೆ ಎಂಟ್ರಿ: ಈ ತಂಡ ಚಾಂಪಿಯನ್ ಆಗೋದು ಪಕ್ಕಾ!  title=
DL vs MI

Delhi Capitals vs Mumbai Indians: ಐಪಿಎಲ್ 2023ರ 16 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿವೆ. ಮುಂಬೈ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದಾರೆ. ಈ ಪಂದ್ಯದಲ್ಲಿ ಡೆಲ್ಲಿ ತಂಡಕ್ಕೆ ಯುವ ಕ್ರಿಕೆಟಿಗನೊಬ್ಬನ ಪಾದಾರ್ಪಣೆ ಮಾಡಿದ್ದಾನೆ. ಈ ಕ್ರಿಕೆಟಿಗ ತನ್ನ ತಂಡವನ್ನು ಒಮ್ಮೆ ವಿಶ್ವ ಚಾಂಪಿಯನ್‌ ಆಗಿ ಮಾಡಿದ್ದಾನೆ.

ಇದನ್ನೂ ಓದಿ: Team India: “ಆಕೆ ಜೊತೆ 2 ದಿನ ರೂಂನಲ್ಲಿ…”: ಬಯಲಾಯ್ತು ಟೀಂ ಇಂಡಿಯಾದ ಸ್ಟಾರ್ ಆಟಗಾರನ ಪ್ರೇಮಪುರಾಣ!

ಈ ಯುವ ಕ್ರಿಕೆಟಿಗನ ಚೊಚ್ಚಲ ಐಪಿಎಲ್:

ಅಂಡರ್-19 ವಿಶ್ವಕಪ್ 2022 ರಲ್ಲಿ ಭಾರತವನ್ನು ಚಾಂಪಿಯನ್ ಮಾಡಿದ ನಾಯಕ ಯಶ್ ಧುಲ್, ದೆಹಲಿ ಕ್ಯಾಪಿಟಲ್ಸ್‌ ತಂಡದ ಮೂಲಕ ಐಪಿಎಲ್‌’ಗೆ ಪಾದಾರ್ಪಣೆ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಪ್ಲೇಯಿಂಗ್-11 ರಲ್ಲಿ ಯಶ್‌’ಗೆ ದೆಹಲಿ ತಂಡದ ಮ್ಯಾನೇಜ್‌’ಮೆಂಟ್ ಅವಕಾಶ ನೀಡಿದೆ. ವೇಗದ ಬೌಲರ್ ಖಲೀಲ್ ಅಹ್ಮದ್ ಬದಲಿಗೆ ಯಶ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಖಲೀಲ್ ಈ ಪಂದ್ಯದಲ್ಲಿ ಆಡಲು ಲಭ್ಯವಿಲ್ಲ.

ಯಶ್ ಧುಲ್ ಅವರ ನಾಯಕತ್ವದಲ್ಲಿ, ಭಾರತದ ಅಂಡರ್ -19 ವಿಶ್ವಕಪ್ ತಂಡವು ಇಂಗ್ಲೆಂಡ್ ಅನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಆಯಿತು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಧುಲ್ 110 ರನ್‌’ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಅದರ ಆಧಾರದ ಮೇಲೆ ತಂಡವು ಫೈನಲ್‌’ಗೆ ತಲುಪಲು ಸಾಧ್ಯವಾಯಿತು. ಈ ಗೆಲುವಿನೊಂದಿಗೆ ಭಾರತವನ್ನು ಅಂಡರ್-19 ವಿಶ್ವ ಚಾಂಪಿಯನ್ ಮಾಡಿದ ಮೊಹಮ್ಮದ್ ಕೈಫ್, ವಿರಾಟ್ ಕೊಹ್ಲಿ, ಉನ್ಮುಕ್ತ್ ಚಂದ್ ಮತ್ತು ಪೃಥ್ವಿ ಶಾ ಅವರಂತಹ ನಾಯಕರೊಂದಿಗೆ ಯಶ್ ಧುಲ್ ಅವರ ಹೆಸರು ಸೇರಿಕೊಂಡಿದೆ.

ಉಭಯ ತಂಡಗಳ ಪ್ಲೇಯಿಂಗ್ 11:

ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಪೃಥ್ವಿ ಶಾ, ಡೇವಿಡ್ ವಾರ್ನರ್ (ನಾ), ಮನೀಶ್ ಪಾಂಡೆ, ಯಶ್ ಧುಲ್, ರೋವ್‌ಮನ್ ಪೊವೆಲ್, ಲಲಿತ್ ಯಾದವ್, ಅಕ್ಸರ್ ಪಟೇಲ್, ಅಭಿಷೇಕ್ ಪೊರೆಲ್ (ವಿ.ಕೀ), ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಮುಸ್ತಾಫಿಜುರ್ ರೆಹಮಾನ್

ಇದನ್ನೂ ಓದಿ: Gautham Gambhir: “ಶ್… ಸೈಲೆನ್ಸ್!”- ಮೈದಾನದಲ್ಲಿ RCB ಫ್ಯಾನ್ಸ್’ಗೆ ಖಡಕ್ ಸೂಚನೆ ಕೊಟ್ಟ ಗಂಭೀರ್!

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾ), ಇಶಾನ್ ಕಿಶನ್ (ವಿ.ಕೀ), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಅರ್ಷದ್ ಖಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ರಿಲೆ ಮೆರೆಡಿತ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News