Actor Chetan Ahimsa : "ಬುದ್ಧನ ಮಂದಿರ ನಾಶಮಾಡಿ ತಿರುಪತಿ ದೇವಸ್ಥಾನ ನಿರ್ಮಿಸಲಾಗಿದೆ"

Chetan Ahimsa : ಹಿಂದೂ ಧರ್ಮ ಸಾಹಿತ್ಯದ ಕುರಿತಾಗಿ ನಟ ಅಹಿಂಸಾ ಚೇತನ್‌ ಪದೇ ಪದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳಿಂದ ಸಾಕಷ್ಟು ಜನರ ಕೆಂಗಣ್ಣಿಗೆ ಕಾರಣವಾಗುವುದಲ್ಲದೇ ಅನೇಕ ಸಮಸ್ಯೆಗನ್ನು ಎದುರಿಸುತ್ತಿದ್ದಾರೆ. ಇದೀಗ ನಟ ಚೇತನ್‌ ನೀಡಿರುವ ಮತ್ತೋಂದು ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.   

Written by - Zee Kannada News Desk | Last Updated : Apr 15, 2023, 01:57 PM IST
  • ನಟ ಚೇತನ್‌ ಅಹಿಂಸಾ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
  • ವಿವಾದಾತ್ಮಕ ಹೇಳಿಕೆಗಳಿಂದ ಆಗಾಗ್ಗೆ ಸುದಿಯಲ್ಲಿರುತ್ತಾರೆ.
  • ತಿರುಪತಿ ಮಂದಿರ ಕುರಿತು ನಟ ಚೇತನ್‌ ವಿವಚಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
Actor Chetan Ahimsa : "ಬುದ್ಧನ ಮಂದಿರ ನಾಶಮಾಡಿ ತಿರುಪತಿ ದೇವಸ್ಥಾನ ನಿರ್ಮಿಸಲಾಗಿದೆ"  title=

Chetan Ahimsa On Tirupati Temple : ನಟ ಚೇತನ ಕಳೆದ ಮೂರ್ನಾಲ್ಕು ತಿಂಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದರು. ಇವರು ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುರ ಮೂಲಕ ಸಾಕಷ್ಟು ಸುದಿಯಲ್ಲಿರುತ್ತಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಟ ತಿರುಪತಿ ದೇವಸ್ಥಾನ ನಿರ್ಮಾಣದ ಕುರಿತು ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. 

ನ್ಯಾಷನಲ್ ಟಿವಿ ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು "ತಿರುಪತಿ ಮೂಲತಃ ಬೌದ್ಧ ಮಂದಿರ, ಕೆ ಜಮನದಾಸ್‌ ಅವರು ತಿರುಪತಿ ಬಾಲಾಜಿ ಮೂಲತಃ ಬೌದ್ಧ ಮಂದಿರ (ಏಪ್ರಿಲ್‌ 14,2001) ಎಂಬ ತಮ್ಮ ಪುಸ್ತಕದಲ್ಲಿ ಈ ಹೇಳಿಕೆಯನ್ನು ಮಾನ್ಯ ಮಾಡಿದ್ದಾರೆ. ಇತಿಹಾಸಕಾರರ ಪ್ರಕಾರ, ದೇವಾಲಯಗಳು ಎಂದಿಗೂ ವೈದಿಕ ಸಂಸ್ಥೆಗಳಾಗಿರುವುದಿಲ್ಲ, ಅವುಗಳನ್ನು ಬೌದ್ಧ ಧರ್ಮದಿಂದ ವಶಪಡಿಸಿಕೊಳ್ಳಲಾಗಿದೆ/ಆಕ್ರಮಣ ಮಾಡಲಾಗಿದೆ" ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. 

 

ಇದನ್ನೂ ಓದಿ-Samantha: ಮುಖ ಕಿತ್ತೋಗಿದೆ, ಹಣಕ್ಕಾಗಿ ಅರೆಬೆತ್ತಲೆ ಕುಣಿತಾಳೆ.. ಸಮಂತಾಳನ್ನು ಹೀಯಾಳಿಸಿದ ನಿರ್ಮಾಪಕ

ನಟ ಚೇತನ್‌ ಅಹಿಂಸಾ ಸಂದರ್ಶನದ ವಿಡಿಯೋ ಲಿಂಕ್‌ ಅನ್ನು ತಮ್ಮ ಖಾಸಗಿ ಫೇಸ್‌ ಬುಕ್‌ ಪೇಜ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಹೇಳಿಕೆಗೆ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ನಟ ಚೇತನ್‌ ಆಗಾಗ್ಗೆ ಈ ರೀತಿಯ ಹೇಳಿಕೆಗಳಿಂದ ಸುದ್ದಿಯಲ್ಲಿರುವುದಷ್ಟೇ ಅಲ್ಲದೇ ಅವರ ಹೇಳಿಕೆಗಳು ಸಮಾಜದಲ್ಲಿ ಸಾಷ್ಟು ಚರ್ಚೆ ಮತ್ತು ಕಲಹಗಳಿಗೆ ಕಾರಣವಾಗುತ್ತಿವೆ. 

ಇದನ್ನೂ ಓದಿ-Karnataka Election 2023: ʻಬಂದೆ ಬಿಡ್ತು ಊರಬ್ದಂಗೆ ನಡೆಯೋ ಎಲೆಕ್ಷನ್ನು..ʼ ಉಪೇಂದ್ರ ಧ್ವನಿಯಲ್ಲಿ ಕೇಳಿ ಚುನಾವಣೆ ಸಾಂಗ್‌.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News