ನೈರೋಬಿ: ನೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಬ್ಲಾಕ್ ಪ್ಯಾಂಥರ್ ಎಂದೇ ಕರೆಯುವ ಅತ್ಯಂತ ಅಪರೂಪದ ಕಪ್ಪು ಚಿರತೆಯೊಂದು ಕೀನ್ಯಾದಲ್ಲಿ ಪತ್ತೆಯಾಗಿದೆ.
ವನ್ಯಜೀವಿ ಛಾಯಾಗ್ರಾಹಕ ಬುರಾರ್ಡ್ ಲ್ಯೂಕಾಸ್ ಅವರ ಕ್ಯಾಮೆರಾಗೆ ಈ ಅಪರೂಪದ ಕಪ್ಪು ಚಿರತೆ ಸೆರೆಯಾಗಿದ್ದು, ಈ ಫೋಟೋಗಳನ್ನು ತಮ್ಮ ವೆಬ್ಸೈಟ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕಿಯಿಸಿರುವ ಅವರು, ಬಾಲ್ಯದಿಂದಲೂ ಕಪ್ಪು ಚಿರತೆ ಕುರಿತಾದ ಕಥೆಗಳಿಂದ ನಾನು ಸಾಕಷ್ಟು ಆಕರ್ಷಿತನಾಗಿದ್ದೆ. ಹೀಗಾಗಿ ಯಾವುದೇ ಪ್ರಾಣಿ ಕಂಡರೂ ಹೆಚ್ಚು ಅಚ್ಚರಿಯಾಗುತ್ತಿರಲಿಲ್ಲ. ಆದರೀಗ ಬ್ಲಾಕ್ ಪ್ಯಾಂಥರ್ ಸಿಕ್ಕಿರುವುದು ಹರ್ಷ ತಂದಿದೆ" ಎಂದಿದ್ದಾರೆ.
An extremely rare sighting of a wild melanistic leopard "black panther" is believed to be the first of its kind on African soil for the first time in over 100 years. Photo Credits: Will Burrard-Lucas. https://t.co/BSMmjtz1N4 pic.twitter.com/97JkA31EHV
— Kenyans.co.ke (@Kenyans) February 12, 2019
ಆಫ್ರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ಕಪ್ಪು ಚಿರತೆ ಬಹಳ ಅಪರೂಪದ ವನ್ಯಜೀವಿ. ಈ ಬಾರಿ ಕೀನ್ಯಾದ ಲೈಕಿಪಿಯಾ ವೈಲ್ಡರ್ನೆಸ್ ಶಿಬಿರದಲ್ಲಿ ಬರ್ರಾರ್ಡ್-ಲುಕಾಸ್ ಅವರ ಕ್ಯಾಮರಾಗೆ ಸೆರೆಯಾಗಿವೆ. ಬಳಿಕ ಅವರು ಅಲ್ಲಿಯೇ ಕ್ಯಾಂಪ್ ಹಾಕಿ ಕಪ್ಪು ಚಿರತೆಗಳ ಇರುವಿಕೆ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಿದ್ದಾರೆ. ಸದ್ಯ ಅಪರೂಪದ ಬ್ಲಾಕ್ ಪ್ಯಾಂಥರ್ ಛಾಯಾಚಿತ್ರಗಳು ಕೀನ್ಯಾದೆಲ್ಲೆಡೆ ಸಖತ್ ವೈರಲ್ ಆಗಿದೆ.