ನವದೆಹಲಿ: ಬಾಲಿವುಡ್ ಕ್ಯೂಟ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ವಿವಾಹವಾದ ಬಳಿಕ ಇದೇ ಮೊದಲ ಬಾರಿಗೆ ವ್ಯಾಲೆಂಟೈನ್ಸ್ ಡೇ ಆಚರಿಸುತ್ತಿದ್ದಾರೆ. ಆದ್ರೆ ಈ ಜೋಡಿಯ ವ್ಯಾಲೆಂಟೈನ್ಸ್ ಡೇ ಪ್ಲಾನ್ ಏನಿರಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ನಿಮಗೂ ಈ ಜೋಡಿಯ ಪ್ಲಾನ್ ಏನು ಅಂತ ತಿಳಿಯೋ ಕುತೂಹಲ ಇದ್ಯಾ? ಹಾಗಿದ್ರೆ ಈ ಸುದ್ದಿ ಓದಿ...
ಐಎಎನ್ಎಸ್ ಸುದ್ದಿ ಸಂಸ್ಥೆ ಪ್ರಕಾರ, "ಈ ಬಾರಿ ವ್ಯಾಲೆಂಟೈನ್ಸ್ ಡೇ ಗೆ ಬಿಡುಗಡೆ ಆಗುತ್ತಿರುವ 'ಗುಲ್ಲಿ ಬಾಯ್' ಸಿನಿಮಾ ವೀಕ್ಷಿಸುತ್ತೇನೆ. ಹಾಗೆಯೇ ಪೋಷಕರೊಂದಿಗೆ ಸಮಯ ಕಳೆಯುತ್ತೇನೆ" ಎಂದು ಫಿಲ್ಮ್ಫೇರ್ ಗ್ಲಾಮರ್ ಮತ್ತು ಸ್ಟೈಲ್ ಫ್ಯಾಶನ್ ಅವಾರ್ಡ್ಸ್ 2019 ನಲ್ಲಿ ಮಾಧ್ಯಮಗಳಿಗೆ ದೀಪಿಕಾ ಪ್ರತಿಕ್ರಿಯಿಸಿದ್ದಾರೆ.
ರಣವೀರ್ ಸಿಂಗ್ ಅಭಿನಯದ 'ಗುಲ್ಲಿ ಬಾಯ್' ಚಿತ್ರ ಇದೇ ಫೆಬ್ರವರಿ 14ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದ್ದು, ಪತ್ನಿ ದೀಪಿಕಾರೊಂದಿಗೆ ರಣವೀರ್ ಜೊತೆಯಾಗಿ ಚಿತ್ರ ವೀಕ್ಷಿಸಲಿದ್ದಾರೆ. ಮುಂಬೈನ ಭೂಗತ / ಗಲ್ಲಿ ರಾಪ್ ನನ್ನು ಆಧರಿಸಿದ ಚಿತ್ರ ಇದಾಗಿದ್ದು, ವೈದ್ಯಕೀಯ ವಿದ್ಯಾರ್ಥಿಯಾಗಿ ಆಲಿಯಾ ಭಟ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.