ಬೆಂಗಳೂರು : ಸ್ಮಾರ್ಟ್ ಟಿವಿಯ ಕ್ರೇಜ್ ನಿರಂತರವಾಗಿ ಹೆಚ್ಚುತ್ತಿದೆ. ಜನರು ಥಿಯೇಟರ್‌ಗೆ ಹೋಗುವ ಬದಲು ಮನೆಯಲ್ಲಿ ದೊಡ್ಡ ಪರದೆಯಲ್ಲಿ ಚಲನಚಿತ್ರಗಳನ್ನು ವೀಕ್ಷಿಸುವುದಕ್ಕೆ ಒತ್ತು ನೀಡುತ್ತಿದ್ದಾರೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ 32 ಇಂಚಿನ ಟಿವಿಯ ಬದಲಿಗೆ 50 ಇಂಚಿನ ಟಿವಿಗೆ ಬೇಡಿಕೆ ಹೆಚ್ಚುತ್ತಿದೆ. US ಎಲೆಕ್ಟ್ರಾನಿಕ್ ಬ್ರ್ಯಾಂಡ್ ವೆಸ್ಟಿಂಗ್‌ಹೌಸ್ ಭಾರತದಲ್ಲಿ ಕ್ವಾಂಟಮ್ ಸರಣಿಯ 4K ಅಲ್ಟ್ರಾ HD ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿದೆ. ಇದು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವುದಲ್ಲದೆ, ಇದರ ಬೆಲೆ ಕೂಡಾ ತೀರಾ ಕಡಿಮೆ.
ವೆಸ್ಟಿಂಗ್‌ಹೌಸ್ 55 ಇಂಚಿನ 4K ಸ್ಮಾರ್ಟ್ ಟಿವಿ :
ವೆಸ್ಟಿಂಗ್‌ಹೌಸ್ 55 ಇಂಚಿನ 4K ಸ್ಮಾರ್ಟ್ ಟಿವಿಯ ಬಾಕ್ಸ್ ನೊಂದಿಗೆ ರಿಮೋಟ್ ಕಂಟ್ರೋಲ್, ಬ್ಯಾಟರಿ, ವಾಲ್ ಮೌಂಟ್, ಮನ್ಯುವಲ್ ಮತ್ತು ವಾರಂಟಿ ಕಾರ್ಡ್ ಇರುತ್ತದೆ.
ಇದನ್ನೂ ಓದಿ : ಹೊರ ಬಿತ್ತು Maruti Jimny ಬೆಲೆ ! ಕೈಗೆಟಕುವ ದರದಲ್ಲಿ ಸೂಪರ್ ಸ್ಪೆಷಲ್ ಕಾರ್
ವೆಸ್ಟಿಂಗ್‌ಹೌಸ್ 55 ಇಂಚಿನ 4K ಸ್ಮಾರ್ಟ್ ಟಿವಿ ವಿನ್ಯಾಸ :
ವೆಸ್ಟಿಂಗ್‌ಹೌಸ್ 55 ಇಂಚಿನ 4K ಸ್ಮಾರ್ಟ್ ಟಿವಿ ಬೆಜೆಲ್ ಲೆಸ್ ವಿನ್ಯಾಸದೊಂದಿಗೆ ಬರುತ್ತದೆ. ಸರಳವಾಗಿ ಹೇಳುವುದಾದರೆ, ಅದರಲ್ಲಿ ಬಾರ್ಡರ್ ಕಡಿಮೆ ಇರುತ್ತದೆ. ಇದರ ಕಾರ್ನರ್ ವರೆಗೂ ಸ್ಕ್ರೀನ್ ಇದ್ದಂತೆ ಕಾಣುತ್ತದೆ. ಟಿವಿಯ ಕೆಳಭಾಗದ ಲುಕ್ ತುಂಬಾ ಸ್ಟೈಲಿಶ್ ಆಗಿದೆ. ವೆಸ್ಟಿಂಗ್‌ಹೌಸ್‌ನ ಲೋಗೋ ಮಧ್ಯದಲ್ಲಿ ಕಂಡುಬರುತ್ತದೆ. ಒಟ್ಟಾರೆ ವಿನ್ಯಾಸ ಅದ್ಭುತವಾಗಿದೆ.
ವೆಸ್ಟಿಂಗ್‌ಹೌಸ್ 55 ಇಂಚಿನ 4K ಸ್ಮಾರ್ಟ್ ಟಿವಿ ರಿಮೋಟ್ :
ವೆಸ್ಟಿಂಗ್‌ಹೌಸ್ 55 ಇಂಚಿನ 4K ಸ್ಮಾರ್ಟ್ ಟಿವಿಯ ರಿಮೋಟ್ ಹ್ಯಾಂಡಿ ಮತ್ತು ಸ್ಲಿಮ್ ಆಗಿದೆ. ಅದರಲ್ಲಿ ಹೆಚ್ಚಿನ ಬಟನ್‌ಗಳು ಲಭ್ಯವಿಲ್ಲ. ಇದರಲ್ಲಿ, Netflix, Prime Video, YouTube ಮತ್ತು Google Play ಗಾಗಿ ಸಪರೇಟ್ ಬಟನ್‌ಗಳು ಲಭ್ಯವಿರುವ ಕಾರಣ ಬಳಕೆ ಸುಲಭವಾಗಿರುತ್ತದೆ.
ವೆಸ್ಟಿಂಗ್‌ಹೌಸ್ 55 ಇಂಚಿನ 4K ಸ್ಮಾರ್ಟ್ ಟಿವಿ ವಿಶೇಷಣಗಳು :
ವೆಸ್ಟಿಂಗ್‌ಹೌಸ್ 55 ಇಂಚಿನ 4K ಸ್ಮಾರ್ಟ್ ಟಿವಿ A35x4 ಪ್ರೊಸೆಸರ್ ಮತ್ತು IPS ಪ್ಯಾನೆಲ್ ಅನ್ನು ಹೊಂದಿದೆ. ಇದು 2GB RAM ಮತ್ತು 8GB ROM ಅನ್ನು ಹೊಂದಿದೆ. ಟಿವಿ ಮೂರು HDMI ಪೋರ್ಟ್‌ಗಳು ಮತ್ತು ಎರಡು USB ಪೋರ್ಟ್‌ಗಳನ್ನು ಹೊಂದಿದೆ.
ಇದನ್ನೂ ಓದಿ : Reduce Electricity Bill Tips: ಈ ಟಿಪ್ಸ್ ಬಳಸಿದರೆ ದಿನವಿಡೀ ಎಸಿ ಬಳಸಿದರೂ ಏರುವುದಿಲ್ಲ ಕರೆಂಟ್ ಬಿಲ್ !
ವೆಸ್ಟಿಂಗ್‌ಹೌಸ್ 55 ಇಂಚಿನ 4K ಸ್ಮಾರ್ಟ್ ಸೌಂಡ್ :
ವೆಸ್ಟಿಂಗ್‌ಹೌಸ್ 55 ಇಂಚಿನ 4K ಸ್ಮಾರ್ಟ್ ಟಿವಿಯಲ್ಲಿ 40W ಸ್ಪೀಕರ್‌ಗಳು ಲಭ್ಯವಿದೆ. ಮನೆಯ ಪಾರ್ಟಿಯಲ್ಲಿ ಟಿವಿಯನ್ನು ಮ್ಯೂಸಿಕ್ ಸಿಸ್ಟಮ್ ಆಗಿ ಬಳಸಬಹುದು. ಅಲ್ಲದೆ ಇದರ ವಾಲ್ಯೂಮ್ ಫುಲ್ ಇದುವ ಅಗತ್ಯವೂ ಇಲ್ಲ. ಮೀಡಿಯಂ ವಾಲ್ಯೂಮ್ ನಲ್ಲೂ ಭರ್ಜರಿ ಸೌಂಡ್ ನೀಡುತ್ತದೆ.
ವೆಸ್ಟಿಂಗ್‌ಹೌಸ್ 55 ಇಂಚಿನ 4K ಸ್ಮಾರ್ಟ್ ಟಿವಿ ಬೆಲೆ :
ವೆಸ್ಟಿಂಗ್‌ಹೌಸ್ 55 ಇಂಚಿನ 4K ಸ್ಮಾರ್ಟ್ ಟಿವಿಯನ್ನು Amazon ನಲ್ಲಿ 28,999 ರೂ.ಗೆ ಖರೀದಿಸಬಹುದು. ಲಭ್ಯವಿರುವ ವೈಶಿಷ್ಟ್ಯಗಳಿಗೆ ಹೋಲಿಸಿ ನೋಡಿದರೆ, ಈ ಬೆಲೆ ತುಂಬಾ ಕಡಿಮೆಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.