ಚೆನ್ನೈ: ತಮಿಳುನಾಡಿನ ವಿಲುಪುರಂ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ ಎಐಎಡಿಎಂಕೆ ಸಂಸದ ಎಸ್. ರಾಜೇಂದ್ರನ್(63) ಮೃತಪಟ್ಟಿದ್ದಾರೆ.
Tamil Nadu: All India Anna Dravida Munnetra Kazhagam (AIADMK) leader and Member of Parliament S Rajendran died in a car accident near Tindivanam, in Viluppuram district, early morning today. Police investigation is underway. (File pic) pic.twitter.com/IeGe9pbuHf
— ANI (@ANI) February 23, 2019
ವಿಲ್ಲಾಪುರಂ ಕ್ಷೇತ್ರದ ಸಂಸದರಾಗಿದ್ದ ರಾಜೇಂದ್ರನ್ ತಮ್ಮ ಕ್ಷೇತ್ರದಿಂದ ತ್ರಿವೇಂಡ್ರಮ್ ಗೆ ಸಂಚರಿಸುತ್ತಿದ್ದ ವೇಳೆ ಕಾರು ಚಾಲಕ ಡಿವೈಡರ್ ಕಾರನ್ನು ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ತಮಿಳು ಸಾಹಿತ್ಯದಲ್ಲಿ ಪದವಿ ಪಡೆದಿರುವ ರಾಜೇಂದ್ರನ್ ರಸಗೊಬ್ಬರ ಸ್ಥಾಯಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 2014ರಲ್ಲಿ ವಿಲುಪುರಂ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದ್ದರು.