'ಲೋಕ' ಸಮರಕ್ಕೆ ಮುಹೂರ್ತ ಫಿಕ್ಸ್: ಏಪ್ರಿಲ್ 11 ರಿಂದ ಚುನಾವಣೆ ಆರಂಭ, ಮೇ 23ಕ್ಕೆ ಫಲಿತಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಹಾಲಿ ಕೇಂದ್ರ ಸರಕಾರದ ಅಧಿಕಾರಾವಧಿ ಜೂನ್ 3ರಂದು ಕೊನೆಗೊಳ್ಳಲಿದೆ. 

Last Updated : Mar 10, 2019, 07:41 PM IST
'ಲೋಕ' ಸಮರಕ್ಕೆ ಮುಹೂರ್ತ ಫಿಕ್ಸ್: ಏಪ್ರಿಲ್ 11 ರಿಂದ ಚುನಾವಣೆ ಆರಂಭ, ಮೇ 23ಕ್ಕೆ ಫಲಿತಾಂಶ title=
Photo Courtesy: ANI

ನವದೆಹಲಿ: ಭಾರೀ ಕುತೂಹಲ ಮೂಡಿಸಿದ್ದ ಲೋಕಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಚುನಾವಣಾ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.  

ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು 543 ಲೋಕಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಮತದಾನ ಏಪ್ರಿಲ್ 11ರಂದು ನಡೆಯಲಿದೆ. ಮೇ 23ರಂದು ಎಲ್ಲಾ ಹಂತಗಳ ಮತದಾನದ ಫಲಿತಾಂಶ ಪ್ರಕಟವಾಗಲಿದ್ದು, ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಲೋಕಸಭೆ ಚುನಾವಣೆ ವೇಳಾಪಟ್ಟಿ -  ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆಗೆ ಮತದಾನ
* ಮೊದಲ ಹಂತದಲ್ಲಿ  20 ರಾಜ್ಯಗಳ 91 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 11ರಂದು ಚುನಾವಣೆ ನಡೆಯಲಿದೆ.  
* ಎರಡನೇ ಹಂತದಲ್ಲಿ  13 ರಾಜ್ಯಗಳ 97 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 18ರಂದು ಚುನಾವಣೆ ನಡೆಯಲಿದೆ. 
* ಮೂರನೇ ಹಂತದಲ್ಲಿ  14 ರಾಜ್ಯಗಳ 115 ಲೋಕಸಭಾ ಸ್ಥಾನಗಳಿಗೆ  ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ.   
* ನಾಲ್ಕನೇ ಹಂತದಲ್ಲಿ  9 ರಾಜ್ಯಗಳ 71 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 29ರಂದು ಚುನಾವಣೆ ನಡೆಯಲಿದೆ. 
* ಐದನೇ ಹಂತದಲ್ಲಿ 7 ರಾಜ್ಯಗಳ 51 ಲೋಕಸಭಾ ಸ್ಥಾನಗಳಿಗೆ  ಮೇ 6ರಂದು ಚುನಾವಣೆ ನಡೆಯಲಿದೆ. 
* ಆರನೇ ಹಂತದಲ್ಲಿ  7 ರಾಜ್ಯಗಳ 59 ಲೋಕಸಭಾ ಸ್ಥಾನಗಳಿಗೆ  ಮೇ 12ರಂದು ಚುನಾವಣೆ ನಡೆಯಲಿದೆ. 
* ಏಳನೇ ಹಂತದಲ್ಲಿ  8 ರಾಜ್ಯಗಳ 59 ಲೋಕಸಭಾ ಸ್ಥಾನಗಳಿಗೆ ಮೇ 19ರಂದು ಚುನಾವಣೆ ನಡೆಯಲಿದೆ. 

ಹಾಲಿ ಇರುವ 16ನೇ ಲೋಕಸಭೆಯ ಅವಧಿ ಜೂನ್ 3ಕ್ಕೆ ಅಂತ್ಯಗೊಳ್ಳಲಿದೆ. 2014ರ ಲೋಕಸಭಾ ಚುನಾವಣೆಗೆ ಮಾರ್ಚ್ 5ರಂದು ದಿನಾಂಕ ಘೋಷಣೆ ಮಾಡಿತ್ತು. ಅಂದು 9 ಹಂತದಲ್ಲಿ ಚುನಾವಣೆ ನಡೆದಿತ್ತು.

Trending News