ಕೊಪ್ಪಳ : 2023-24 ನೇ ಸಾಲಿನ ಶೈಕ್ಷಣಿಕ ಅವಧಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಲ್ಯಾಟರಲ್ ಎಂಟ್ರಿ ಮುಖಾಂತರ ನೇರವಾಗಿ 02 ನೇ ವರ್ಷದ ಡಿಪ್ಲೋಮಾ (ಡಿ.ಹೆಚ್.ಟಿ.ಟಿ) ಕೋರ್ಸ್ ಪ್ರವೇಶಕ್ಕಾಗಿ 27 ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವ್ಯಾಸಂಗದ ಸಮಯದಲ್ಲಿ ಮಾರ್ಗಸೂಚಿಯ ಪ್ರಕಾರ ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳು 2,500 ರೂ.ದಂತೆ ಶಿಷ್ಯವೇತನ ನೀಡಲಾಗುವುದು ಹಾಗೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯಾಯ ಐ.ಐ.ಹೆಚ್.ಟಿ ನಿಯಾಮಾನುಸಾರ ವಸತಿ ನಿಲಯದ ಸೌಲಭ್ಯ ಕಲ್ಪಿಸಲಾಗುವುದು.
ಇದನ್ನೂ ಓದಿ: ಹೊಯ್ಸಳ ಕ್ರೀಡಾಂಗಣದಲ್ಲಿ ನಡೆದ ಫ್ಯಾನ್ಸ್ ಕ್ರಿಕೆಟ್ ಲೀಗ್
ವಿದ್ಯಾರ್ಹತೆ: ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದೊಂದಿಗೆ 10+2 ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ಯಾವುದೇ ಜವಳಿ ವಿಭಾಗದ ವೃತ್ತಿಪರ ವಿಭಾಗದಲ್ಲಿ 10+2 ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಥವಾ 10ನೇ ತರಬೇತಿ ತೇರ್ಗಡೆ +(2 ವರ್ಷಗಳ ಐಟಿಐ) ತೇರ್ಗಡೆ ಎರಡನೇ ವರ್ಷದ ಡಿಪ್ಲೋಮಾ ಕೋರ್ಸ್ಗೆ ಪ್ರವೇಶಕ್ಕೆ ಅರ್ಹರು. ಅಥವಾ 10+2 ಪಾಸ್+(2 ವರ್ಷಗಳ ಐಟಿಐ) ತೇರ್ಗಡೆ ಎರಡನೇ ವರ್ಷದ ಡಿಪ್ಲೋಮಾ ಕೋರ್ಸ್ಗೆ ಪ್ರವೇಶ ಪಡೆಯಲು ಅರ್ಹರು. ಜವಳಿ ವಿಭಾಗದ ವೃತ್ತಿಪರ ಸ್ಟಿçÃಮ್ನಲ್ಲಿ 10+2 ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಐ.ಐ.ಹೆಚ್.ಟಿ ನಡೆಸುವ ಗಣಿತ, ಭೌತಶಾಸ್ತç, ರಸಾಯನಶಾಸ್ತç ಬ್ರಿಡ್ಜ್ ಕೋರ್ಸ್ನ್ನು ಅಭ್ಯಾಸ ಮಾಡಬೇಕು.
ವಯೋಮಿತಿ: ದಿನಾಂಕ 01-07-2023 ಕ್ಕೆ ಅನ್ವಯಿಸುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ 25 ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ವಯೋಮಿತಿ 27 ವರ್ಷ, ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಕ್ರೋಡಿಕೃತ ಅಂಕಗಳು ಮೆರಿಟ್ ಲೆಕ್ಕಾಚಾರಕ್ಕೆ ಆಧಾರವಾಗಿರುತ್ತವೆ.
ಲ್ಯಾಟರಲ್ ಎಂಟ್ರಿ ಮುಖಾಂತರ 2ನೇ ವರ್ಷದ ಡಿಪ್ಲೋಮಾ ಕೋರ್ಸಗೆ ನೇರ ಪ್ರವೇಶಕ್ಕಾಗಿ ಲಭ್ಯವಿರುವ ಸಂಸ್ಥೆಗಳು: ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಗದಗ-ಬೆಟಗೇರಿ (ಕರ್ನಾಟಕ) ಇಲ್ಲಿ 12 ಅಭ್ಯರ್ಥಿಗಳು., ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಸೇಲಂ ವೆಂಕಟಗಿರಿ (ನೆಲ್ಲೂರು ಜಿಲ್ಲೆ, ಆಂಧ್ರಪ್ರದೇಶ) (ತಮಿಳುನಾಡು) ಇಲ್ಲಿ 10 ಅಭ್ಯರ್ಥಿಗಳು., ಎಸ್.ಪಿ.ಕೆ.ಎಂ. ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ ಇಲ್ಲಿ 03 ಅಭ್ಯರ್ಥಿಗಳು., ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ಕಣ್ಣೂರು (ಕೇರಳ) ಇಲ್ಲಿ 2 ಅಭ್ಯರ್ಥಿಗಳು.
ಮೆರಿಟ್ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯಾ ಡಿಪ್ಲೋಮಾ ಸಂಸ್ಥೆಗಳಲ್ಲಿ ಕೋರ್ಸ ಪ್ರವೇಶ ಕುರಿತಂತೆ ಕೌನ್ಸಿಲಿಂಗ್ಗಾಗಿ ಕರೆಯಲಾಗುವುದು. ಆಸಕ್ತಿ ಇರುವ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ಫಾರಂಗಳಿಗಾಗಿ ಪ್ರಾಂಶುಪಾಲರು, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪೂರ, ಗದಗ-ಬೆಟಗೇರಿ ದೂರವಾಣಿ ಸಂ: 08372-297221 ಮೊಬೈಲ್: 9448644074 ಅಥವಾ ಈ ಜಿಲ್ಲೆಯ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಕೊಪ್ಪಳ ದೂರವಾಣಿ ಸಂ:08539-295469 ಇವರುಗಳನ್ನು ಸಂಪರ್ಕಿಸಿ ಪಡೆಯಬಹುದಾಗಿದೆ. ಅರ್ಜಿಗಳನ್ನು ಆನಲೈನ್ನಲ್ಲಿ ಡೌನಲೊಡ್ ಮಾಡಿಕೊಳ್ಳಲು ಲಿಂಕ್ https://khtigadag.ac.in/Lateralentryadmissionform.pdf ಬಳಸಬಹುದು. ಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ “ಪ್ರಾಂಶುಪಾಲರು, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪೂರ, ಗದಗ-ಬೆಟಗೇರಿ-582102” ಇವರಿಗೆ ಸಲ್ಲಿಸಲು ಕೊನೆಯ ದಿನಾಂಕ 31-05-2023 ನಿಗದಿ ಪಡಿಸಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ