ಹಿರಿಯ ನಟಿ ಸುಲೋಚನಾ ಲಾಟ್ಕರ್ ಇನ್ನಿಲ್ಲ 

ಮರಾಠಿ ಮತ್ತು ಹಿಂದಿ ಚಿತ್ರರಂಗದ ಖ್ಯಾತ ಹಿರಿಯ ನಟಿ ಸುಲೋಚನಾ ಲಾಟ್ಕರ್ ಅವರು ದೀರ್ಘಕಾಲದ ಅನಾರೋಗ್ಯ ಮತ್ತು ವಯೋಸಹಜ ಕಾಯಿಲೆಯಿಂದ ಭಾನುವಾರದಂದು ನಿಧನರಾಗಿದ್ದಾರೆ.

Written by - Manjunath N | Last Updated : Jun 4, 2023, 09:14 PM IST
  • ಸುಲೋಚನಾ 250 ಕ್ಕೂ ಹೆಚ್ಚು ಹಿಂದಿ ಮತ್ತು 50 ಮರಾಠಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
  • ಅವರು 1940 ರ ದಶಕದ ಆರಂಭದಲ್ಲಿ ಮರಾಠಿ ಚಲನಚಿತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು
ಹಿರಿಯ ನಟಿ ಸುಲೋಚನಾ ಲಾಟ್ಕರ್ ಇನ್ನಿಲ್ಲ  title=
file photo

ನವದೆಹಲಿ: ಮರಾಠಿ ಮತ್ತು ಹಿಂದಿ ಚಿತ್ರರಂಗದ ಖ್ಯಾತ ಹಿರಿಯ ನಟಿ ಸುಲೋಚನಾ ಲಾಟ್ಕರ್ ಅವರು ದೀರ್ಘಕಾಲದ ಅನಾರೋಗ್ಯ ಮತ್ತು ವಯೋಸಹಜ ಕಾಯಿಲೆಯಿಂದ ಭಾನುವಾರದಂದು ನಿಧನರಾಗಿದ್ದಾರೆ.

ಅವರು ಮುಂಬೈನ ಶುಶ್ರೂಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಈಗ ಸುಲೋಚನಾ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ 5:30 ಕ್ಕೆ ದಾದರ್ ಸ್ಮಶಾನದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಒಡಿಶಾ ರೈಲು ದುರಂತ : ಆಸ್ಪತ್ರೆಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಕೇಂದ್ರ ಆರೋಗ್ಯ ಸಚಿವ

ಸುಲೋಚನಾ 250 ಕ್ಕೂ ಹೆಚ್ಚು ಹಿಂದಿ ಮತ್ತು 50 ಮರಾಠಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಅವರು 1940 ರ ದಶಕದ ಆರಂಭದಲ್ಲಿ ಮರಾಠಿ ಚಲನಚಿತ್ರಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ತದನಂತರ ಹಿಂದಿ ಸಿನಿಮಾಗಳಲ್ಲಿ ನಟಿಸಿದರು.ಅದರಲ್ಲಿ ಶಮ್ಮಿ ಕಪೂರ್ ಅವರ 'ದಿಲ್ ದೇಖೆ ದೇಖೋ', ದಿಲೀಪ್ ಕುಮಾರ್ ಅವರ 'ಆದ್ಮಿ' ಮತ್ತು ದೇವ್ ಆನಂದ್ ಅವರ 'ಜಾನಿ ಮೇರಾ ನಾಮ್' ಮುಂತಾದ ಚಲನಚಿತ್ರಗಳಲ್ಲಿ ಹಲವಾರು ತಾಯಿ ಪಾತ್ರದ ಮೂಲಕ ಗಮನ ಸೆಳೆದಿದ್ದರು.1946 ರಿಂದ 1961 ರವರೆಗೆ 'ಸಸುರ್ವಾಸ್' (1946), 'ವಾಹಿನಿಚ್ಯಾ ಬಾಂಗ್ಡಿಯಾ' (1953), 'ಮೀತ್ ಭಾಕರ್', 'ಸಂಗ್ತಿ ಐಕಾ' (1959), 'ಲಕ್ಷ್ಮಿ ಅಲಿ ಘರಾ', 'ಮೋತಿ' ಮನ್ಸೇ', 'ಜೀವಚಾ ಸಖಾ', 'ಪತಿವ್ರತಾ', 'ಸುಖಾಚೆ ಸೋಬ್ತಿ', 'ಭೌಭೀಜ್', 'ಆಕಾಶಗಂಗಾ' ಮತ್ತು 'ಧಕ್ತಿ ಜೌ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Odisha Train Tragedy: ಎರಡು ವಿಮಾನಗಳಲ್ಲಿ 80 ಕ್ಕೂ ಹೆಚ್ಚು ಕನ್ನಡಿಗರು ಬೆಂಗಳೂರಿಗೆ ಆಗಮನ

ಲಾಟ್ಕರ್ ಅವರು 1999ರಲ್ಲಿ ಪದ್ಮಶ್ರೀ  ಪುರಸ್ಕಾರಕ್ಕೆ ಭಾಜನರಾಗಿದ್ದರು.ಅವರಿಗೆ 2004 ರಲ್ಲಿ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು. 2009 ರಲ್ಲಿ, ಅವರಿಗೆ ಮಹಾರಾಷ್ಟ್ರ ಸರ್ಕಾರದಿಂದ ಮಹಾರಾಷ್ಟ್ರ ಭೂಷಣ ಪ್ರಶಸ್ತಿಯನ್ನು ನೀಡಲಾಯಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News