Shubman Gill: ಟೀಂ ಇಂಡಿಯಾದ ಡೇಂಜರಸ್ ಬ್ಯಾಟ್ಸ್ಮನ್ ಒಬ್ಬರು ಆಸ್ಟ್ರೇಲಿಯಾಕ್ಕೆ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾರೆ. ಭಾರತದ ಈ ಡ್ಯಾಶಿಂಗ್ ಬ್ಯಾಟ್ಸ್ಮನ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನ ಫೈನಲ್ ನಲ್ಲಿ (WTC ಫೈನಲ್) ಕಾಂಗರೂ ತಂಡವನ್ನು ಸೋಲಿಸಿ ಟೀಂ ಇಂಡಿಯಾಗೆ ಟ್ರೋಫಿ ಗೆಲ್ಲಲು ಸಹಾಯ ಮಾಡಲಿದ್ದಾರೆ.
ಇದನ್ನೂ ಓದಿ: WTC Final 2023: ಕ್ರಿಕೆಟ್ ಜಗತ್ತಿನಲ್ಲಿ ಇತಿಹಾಸ ಸೃಷ್ಟಿಸಲು ವಿರಾಟ್ ತವಕ: ಕೊಹ್ಲಿ ಬರೆಯಲಿರುವ ದಾಖಲೆ ಅಂತಿಂತದ್ದಲ್ಲ…
ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನ ಫೈನಲ್ ನಲ್ಲಿ (ಡಬ್ಲ್ಯುಟಿಸಿ ಫೈನಲ್) ಎಲ್ಲವೂ ವಿಭಿನ್ನವಾಗಿರುತ್ತದೆ ಎಂದು ಭಾರತ ಕ್ರಿಕೆಟ್ ತಂಡದ ಈ ಮ್ಯಾಚ್ ವಿನ್ನರ್ ಸ್ಪಷ್ಟಪಡಿಸಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ನ ಅಂತಿಮ ಪಂದ್ಯವು ಜೂನ್ 7 ರಿಂದ ಜೂನ್ 11 ರವರೆಗೆ ಇಂಗ್ಲೆಂಡ್ ನ ಕೆನ್ನಿಂಗ್ಟನ್ ಓವಲ್ (ಲಂಡನ್) ಮೈದಾನದಲ್ಲಿ ನಡೆಯಲಿದೆ.
ಐಪಿಎಲ್ 2023 ರಲ್ಲಿ ಭಾರತದ ಸ್ಟಾರ್ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರ ಫಾರ್ಮ್ ಕಂಡು ಎಲ್ಲರೂ ಶಾಕ್ ಆಗಿದ್ದರು. 60ರ ಸರಾಸರಿಯಲ್ಲಿ 890 ರನ್ ಗಳಿಸುವ ಮೂಲಕ ಟೂರ್ನಿಯ ಅತ್ಯಂತ ಯಶಸ್ವಿ ಬ್ಯಾಟ್ಸ್ಮನ್ ಆಗಿದ್ದರು. ಈ ಅವಧಿಯಲ್ಲಿ ಅವರು ಮೂರು ಶತಕಗಳನ್ನು ಸಹ ಬಾರಿಸಿದ್ದರು.
ಇನ್ನು ಐಸಿಸಿ ಜೊತೆ ಮಾತನಾಡಿದ ಶುಭ್ಮ,ನ್ ಗಿಲ್, “ ಐಪಿಎಲ್ ನಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಆದರೆ ಇದು (ಟೆಸ್ಟ್) ಸಂಪೂರ್ಣವಾಗಿ ವಿಭಿನ್ನ ಪಂದ್ಯವಾಗಲಿದೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
“ಕಳೆದ ವಾರ ನಾವು ಸಂಪೂರ್ಣವಾಗಿ ವಿಭಿನ್ನ ವಾತಾವರಣದಲ್ಲಿ ಆಡುತ್ತಿದ್ದೆವು. ಈಗ ಹೊಸ ರೀತಿಯ ಸವಾಲು ಇರುತ್ತದೆ. ಇದು ಟೆಸ್ಟ್ ಪಂದ್ಯಗಳನ್ನು ರೋಮಾಂಚನಗೊಳಿಸುತ್ತದೆ” ಎಂದಿದ್ದಾರೆ.
2021 ರಲ್ಲಿ ಸೌತಾಂಪ್ಟನ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (ಡಬ್ಲ್ಯುಟಿಸಿ) ನ ಮೊದಲ ಫೈನಲ್ನಲ್ಲಿ ಎಂಟು ವಿಕೆಟ್ ಗಳ ಸೋಲನ್ನು ಎದುರಿಸಿದ ಭಾರತ ತಂಡದ ಭಾಗವಾಗಿದ್ದರು ಶುಭ್ಮನ್ ಗಿಲ್. ಈ ಬಲಗೈ ಬ್ಯಾಟ್ಸ್ಮನ್ ಆ ಪಂದ್ಯದಲ್ಲಿ 28 ಮತ್ತು 8 ರನ್ ಗಳಿಸಿದ್ದರು. ಆ ನಿರಾಶಾದಾಯಕ ಸೋಲಿನಿಂದ ತಂಡ ಸಾಕಷ್ಟು ಕಲಿತಿದೆ ಎಂದು 23ರ ಹರೆಯದ ಬ್ಯಾಟ್ಸ್ಮನ್ ಹೇಳಿದ್ದಾರೆ.
ಇದನ್ನೂ ಓದಿ:ಈ ಇಬ್ಬರಿಂದಲೇ ಟೀಂ ಇಂಡಿಯಾ ಟೆಸ್ಟ್ ಟ್ರೋಫಿ ಗೆಲ್ಲುತ್ತೆ! ಕೋಚ್ ದ್ರಾವಿಡ್ ಹೇಳಿದ್ದು ಯಾರ ಬಗ್ಗೆ ಗೊತ್ತಾ?
“ತಂಡವಾಗಿ ಕಲಿತ ವಿಷಯಗಳ ಬಗ್ಗೆ ಮಾತನಾಡುತ್ತಿದ್ದೇನೆ. ಆ ಪಂದ್ಯದ ಬ್ಯಾಟಿಂಗ್ ಬಗ್ಗೆಯೂ ಚರ್ಚಿಸುತ್ತಿದ್ದೇವೆ. ಕಳೆದ ಬಾರಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಆಶಿಸುತ್ತೇನೆ” ಎಂದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.