UGC NET 2023: ಯುಜಿಸಿ ನೆಟ್ ಪರೀಕ್ಷೆಯು ಜೂನ್ 19 ರಿಂದ ಅಂದರೆ ನಾಳೆಯಿಂದ ಆರಂಭವಾಗುತ್ತಿದೆ. ಈ ಪರೀಕ್ಷೆಯು ಜೂನ್ 19 ರಿಂದ ಪ್ರಾರಂಭವಾಗಲಿದ್ದು, ಜೂನ್ 22 ರವರೆಗೆ ನಡೆಯಲಿದೆ. ಈ ಪರೀಕ್ಷೆಯನ್ನು CBT ಮೋಡ್ನಲ್ಲಿ ನಡೆಸಲಾಗುತ್ತಿದೆ. ಎನ್ಟಿಎ ಪರೀಕ್ಷೆಗೆ ಸಂಬಂಧಿಸಿದಂತೆ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಮಾರ್ಗಸೂಚಿಗಳನ್ನು ಓದುವುದನ್ನು ಖಚಿತಪಡಿಸಿಕೊಳ್ಳಿ.
UGC NET 2023 ಗಾಗಿ ಮಾರ್ಗಸೂಚಿಗಳು
>> ನೀವು 1 ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರವನ್ನು ತಲುಪಬೇಕು.
>> UGC NET ಪರೀಕ್ಷೆಯ ಪ್ರವೇಶ ಪತ್ರವನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಲು ಮರೆಯಬೇಡಿ.
>> ಫೋಟೋ ಗುರುತಿನ ಚಿಟೀಯೂ ನಿಮ್ಮೊಂದಿಗಿರಲಿ.
>> ನೀವು ನಿಮ್ಮೊಂದಿಗೆ ಹ್ಯಾಂಡ್ ಸ್ಯಾನಿಟೈಸರ್ ತೆಗೆದುಕೊಂಡು ಹೋಗಬಹುದು.
>> ಕಪ್ಪು ಅಥವಾ ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್ ನಿಮ್ಮೊಂದಿಗಿರಲಿ.
>> ಪೆನ್ಸಿಲ್, ಎರೇಸರ್, ಸ್ಕೇಲ್ ಕೂಡ ಒಟ್ಟಿಗೆ ಇಡಬಹುದು.
ಈ ವಸ್ತುಗಳನ್ನು ತೆಗೆದುಕೊಂಡು ಹೋಗಲು ನಿರ್ಬಂಧಿಸಲಾಗಿದೆ
>> ಮೊಬೈಲ್ ಫೋನ್
>> ಸ್ಮಾರ್ಟ್ ವಾಚ್
>> ಕ್ಯಾಮೆರಾ
>> ಬ್ಲೂಟೂತ್
>> ಪೆನ್ ಡ್ರೈವ್
ಪ್ರವೇಶ ಪತ್ರವನ್ನು ಈ ರೀತಿ ಡೌನ್ಲೋಡ್ ಮಾಡಿ
>> ಅಧಿಕೃತ ವೆಬ್ಸೈಟ್ ugcnet.nta.nic.in ಗೆ ಹೋಗಿ.
>> ಹೋಮ್ ಪೇಜ್ ನಲ್ಲಿ ಹೋಗಿ ಮತ್ತು ಪ್ರವೇಶ ಕಾರ್ಡ್ ಲಿಂಕ್ ಅನ್ನು ಕ್ಲಿಕ್ ಮಾಡಿ.
>> ಎಲ್ಲಾ ವೈಯಕ್ತಿಕ ವಿವರಗಳನ್ನು ನಮೂದಿಸಿ ಮತ್ತು ಸಬ್ಮಿಟ್ ಹೇಳಿ.
>> ನಿಮ್ಮ ಪ್ರವೇಶ ಕಾರ್ಡ್ ನಿಮಗೆ ಪರದೆಯ ಮೇಲೆ ಕಾಣಿಸುತ್ತದೆ.
ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಲಾಗಿದೆ
UGC NET ಜೂನ್ 2023 ಕ್ಕಾಗಿ ಪರೀಕ್ಷಾ ನಗರ ಸ್ಲಿಪ್ ಡೌನ್ಲೋಡ್ ಮಾಡುವಲ್ಲಿ ನಿಮಗೆ ಯಾವುದೇ ತೊಂದರೆ ಎದುರಾದರೆ, ನೀವು 011-40759000 ಅನ್ನು ಸಂಪರ್ಕಿಸಬಹುದು. ಇದಲ್ಲದೇ, ugcnet@nta.ac.in ಗೆ ಇಮೇಲ್ ಮಾಡುವ ಮೂಲಕ ನೀವು ಯಾವುದೇ ಸಹಾಯವನ್ನು ಪಡೆದುಕೊಳ್ಳಬಹುದು. ಈ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.